ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಬ್ ಭೀತಿಯಿಂದ ಮೈಸೂರಿಗರು ನಿರಾಳ

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 18 : ಬಾಂಬ್ ಸ್ಫೋಟಿಸುವಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ಪತ್ರ ಬರೆದಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಶರಣಪ್ಪ ನಾಗರಾಳ, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೇ ವೇಳೆ ಶರಣಪ್ಪ ನಾಗರಾಳ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದವರು ಸ್ಪಷ್ಟಪಡಿಸಿದ್ದಾರೆ. ಆತ ಭಯೋತ್ಪಾದಕರ ಬಗ್ಗೆ ಬರೆದಿರುವುದು ಸುಳ್ಳು.
ಭಯೋತ್ಪಾದನೆ ಬೆದರಿಕೆಗೂ ಶರಣಪ್ಪನಿಗೂ ಯಾವುದೇ ಸಂಬಂಧ ಇಲ್ಲ ಎಂದು ಹನುಮಂತ ಅವರು ಸ್ಪಷ್ಟಪಡಿಸಿರುವುದು ಪೊಲೀಸರನ್ನು ನಿರಾಳಗೊಳಿಸಿದೆ. ಶರಣಪ್ಪನ ಪತ್ರದಿಂದ ಪೊಲೀಸರು ಸೇರಿದಂತೆ ಜನರಲ್ಲಿ ಆತಂಕ ಉಂಟಾಗಿತ್ತು.

The bomb threat is false: Sharanappas family clarified

ಇನ್ನು ಶರಣಪ್ಪ ಸಹೋದರ ಹನುಮಂತಪ್ಪ ಮಾತನಾಡಿ, ಇತ್ತೀಚೆಗೆ ಸಿಕ ಅಸ್ವಸ್ಥನಾಗಿದ್ದ. ಆತನಿಗೆ ಮೂರ್ಛೆ ರೋಗವೂ ಇದೆ. ಮೈಸೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಈತ ಅನುತ್ತೀರ್ಣನಾಗುವ ಭಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಹೀಗೆ ತಪ್ಪಾಗಿ ಪತ್ರ ಬರೆದಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆ ಮುಂದುವರಿಕೆ:
ಶರಣಪ್ಪ ಅವರ ಕುಟುಂಬದವರು ಆತ ಮಾನಸಿಕ ಅಸ್ವಸ್ಥ ಎಂಬ ಹೇಳಿಕೆ ನೀಡಿದ್ದರೂ ಮೈಸೂರಿನ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಭಾನುವಾರ ಕೂಡ ನಗರದ ಪೊಲೀಸರು
ಶರಣಪ್ಪನ ಕೆಲ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡರು.

ಶರಣಪ್ಪನ ಆರೋಗ್ಯ ಸುಧಾರಿಸಿದ ನಂತರ ಆತನಿಂದ ಹೇಳಿಕೆ ಪಡೆದುಕೊಳ್ಳುವವರೆಗೂ ತನಿಖೆ ಮುಂದುವರೆಸಲು ನಗರ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ

English summary
Sharanappas brother Hanumanthu clarified that, my cousin's letter about bomb threat is not true. It is clear that there is no relationship between terrorism and Sharanappa. police have been relieved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X