• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಠ್ಯದ ಬರಹ ಈಗ ಬದಲಿಸಲು ಸಾಧ್ಯವಿಲ್ಲ; ಬಿ. ಸಿ. ನಾಗೇಶ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 25: ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕ ದೇವನೂರು ಮಹಾದೇವ, ತಮ್ಮ ಪಾಠ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, "ಮಹಾದೇವ ಮುಂಚೆಯೆ ಹೇಳಿದ್ದರೆ ಅವರ ಮಾತಿನ ಬಗ್ಗೆ ಚರ್ಚೆ ಮಾಡಬಹುದಿತ್ತು. ಈಗಾಗಲೇ ಪಠ್ಯ ಮುದ್ರಣವಾಗಿದೆ ಅದು ಮಕ್ಕಳ ಕೈ ಸೇರುತ್ತಿದೆ. ಈ ಸಂದರ್ಭದಲ್ಲಿ ತೆಗೆಯಲು ಆಗುವುದಿಲ್ಲ" ಎಂದು ಹೇಳಿದ್ದಾರೆ.

"ಈ ಹಿಂದಿನ ಪಠ್ಯದಲ್ಲಿದ್ದ ಎಲ್. ಬಸವರಾಜು, ಎ. ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಮೊದಲಾದವರ ಕತೆ, ಲೇಖನಗಳನ್ನು ಕೈಬಿಡಲಾಗಿದೆ. ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತು ಏನೇನೂ ತಿಳಿದಿಲ್ಲ ಎಂದೇ ಅರ್ಥ" ಎಂದರು.

ನನ್ನ ಕಥನ ಪಠ್ಯದಲ್ಲಿ ಸೇರಿಸಲು ನೀಡಿದ್ದ ಅನುಮತಿ ವಾಪಸ್ ಪಡೆಯುತ್ತಿದ್ದೇನೆ: ದೇವನೂರನನ್ನ ಕಥನ ಪಠ್ಯದಲ್ಲಿ ಸೇರಿಸಲು ನೀಡಿದ್ದ ಅನುಮತಿ ವಾಪಸ್ ಪಡೆಯುತ್ತಿದ್ದೇನೆ: ದೇವನೂರ

"ಚಾತುರ್ವರ್ಣ ಹಿಂದೂ ಪ್ರಭೇದದ ಆರ್‌ಎಸ್‌ಎಸ್‌ ಸಂತಾನವಾದ ಬಿಜೆಪಿ ತನ್ನ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸದ ಕುತ್ತಿಗೆಗೆ. ನೂತನ ಪಠ್ಯ ಪರಿಷ್ಕರಣೆಯಲ್ಲಿಯೂ ಇದೇ ಆಗಿದೆ" ಎಂದು ಮಂಗಳವಾರ ದೇವನೂರು ಮಹಾದೇವ ಆರೋಪಿಸಿದ್ದರು.

ಪಠ್ಯಪುಸ್ತಕ ವಿವಾದ: ಬೊಮ್ಮಾಯಿ ಮಧ್ಯಪ್ರವೇಶಕ್ಕೆ ಕರವೇ ಆಗ್ರಹಪಠ್ಯಪುಸ್ತಕ ವಿವಾದ: ಬೊಮ್ಮಾಯಿ ಮಧ್ಯಪ್ರವೇಶಕ್ಕೆ ಕರವೇ ಆಗ್ರಹ

ಮೈಸೂರಿನಲ್ಲಿ ಬುಧವಾರ ಮಾತನಾಡಿದ ಬಿ. ಸಿ. ನಾಗೇಶ್‌, "ಪಠ್ಯದಿಂದ ತಮ್ಮ ಕಥನವನ್ನು ತೆಗೆಯಿರಿ ನಿಮಗೆ ಕೊಟ್ಟಿದ್ದ ಹಕ್ಕನ್ನು ವಾಪಸ್ಸು ಪಡೆದಿದ್ದೇನೆ ಎಂದು ದೇವನೂರು ಮಹದೇವಾ ಪತ್ರ ಬರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಈ ಪರಿಸ್ಥಿತಿ ಯಲ್ಲಿ ಏನು ಮಾಡಲಾಗದು. ಇದು ವಾಸ್ತವ ಸ್ಥಿತಿ, ಇದನ್ನು ಹಿರಿಯ ಸಾಹಿತಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ‌" ಎಂದರು.

ಮಾತನಾಡಿ ಬಗೆಹರಿಸಿಕೊಳ್ಳುತ್ತೇನೆ

ಮಾತನಾಡಿ ಬಗೆಹರಿಸಿಕೊಳ್ಳುತ್ತೇನೆ

"ಪಠ್ಯ ಪುಸ್ತಕ ವಿಚಾರದಲ್ಲಿ ತಾತ್ವಿಕ ಭಿನ್ನತೆ ನಮಗಿಲ್ಲ. ದೇವನೂರು ಅವರಿಗಿರಬಹುದು. ಇದನ್ನು ನಾವು ಮಾತನಾಡಿ ಬಗೆಹರಿಸುತ್ತೇನೆ. ದೇವನೂರು ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನು ಬದಲಾವಣೆ ಮಾಡಿದ್ದೇವೆ. ಇಲ್ಲಿಯವರೆಗೆ ಬ್ರಿಟಿಷರು ಸಿದ್ಧಪಡಿಸಿದ್ದ ಪಠ್ಯವೇ ಇತ್ತು. ನಾವು ಬಂದಮೇಲೆ ರಾಷ್ಟ್ರೀಯತೆಯನ್ನ ಪಠ್ಯದಲ್ಲಿ ಸೇರಿಸಿದ್ದೇವೆ. ವಾಜಪೇಯಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ, ಶಿಕ್ಷಣ, ರೈತ ಎಲ್ಲಾ ಅಭಿವೃದ್ಧಿ ಆಗಿದೆ" ಎಂದು ಸಚಿವರು ಹೇಳಿದರು.

ಈ ಹಿಂದೆ ಎಲ್ಲವು ಅಮೆರಿಕ ಹೇಳಿದಂತೆ ನಡೆಯುತಿತ್ತು

ಈ ಹಿಂದೆ ಎಲ್ಲವು ಅಮೆರಿಕ ಹೇಳಿದಂತೆ ನಡೆಯುತಿತ್ತು

"ಆದರೆ ಒಬ್ಬ ಗಂಡು ವಾಜಪೇಯಿ ಪ್ರಧಾನಿಯಾದ ಮೇಲೆ ಎಲ್ಲವು ಬದಲಾಯಿತು. ಕಾಂಗ್ರೆಸ್‌ನವರ ರೀತಿ ಯಾರು? ಯಾರಿಗೋಸ್ಕರ ರಾಜಕಾರಣ ಮಾಡಿಲ್ಲ. ನಮ್ಮ ದೇಶದ ಜನರಿಗೋಸ್ಕರ ರಾಜಕಾರಣ ಮಾಡಿದ್ದೇವೆ.
ಪರಿವರ್ತನೆ ಅನ್ನೋದು ಜಗದ ನಿಯಮ. ಎಲ್ಲಾ ವಾದ ಮುಗಿದ ಬಳಿಕ ಈಗ ಚಾತುರ್ವರ್ಣ ಬಂದಿದೆ" ವ್ಯಂಗ್ಯವಾಡಿದರು.

ಪತ್ರ ನನಗೆ ಬಂದಿಲ್ಲ, ಪ್ರತಿಕ್ರಿಯಿಸಲ್ಲ

ಪತ್ರ ನನಗೆ ಬಂದಿಲ್ಲ, ಪ್ರತಿಕ್ರಿಯಿಸಲ್ಲ

"ಲೇಖಕ ದೇವನೂರು ಮಹಾದೇವ ಮಂಗಳವಾರ ತಮ್ಮ ಬರಹವನ್ನು ಪಠ್ಯಪುಸ್ತಕದಲ್ಲಿ ಬಳಸಬಾರದು ಎಂದು ಪತ್ರ ಬರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳಾಗಿವೆ. ಆದರೆ ನನಗೆ ಅಂಥಹ ಯಾವುದೇ ಪತ್ರ ಬಂದಿಲ್ಲ" ಎಂದು ನಾಗೇಶ್‌ ತಿಳಿಸಿದ್ದು, ಇದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. "ನಮ್ಮದು ಒಂದೇ ಸಂಸ್ಕೃತಿ ಅಲ್ಲ. ಎಲ್ಲಾ ಸಂಸ್ಕೃತಿಯನ್ನು ಹೊಂದಿದ್ದೇವೆ. ಎಲ್ಲದರಿಂದ ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ ಮಾಡಿದ್ದೇವೆ. ಕಾಂಗ್ರೆಸ್‌ ನಾಯಕರದ್ದು ನೀಚ ಬುದ್ದಿ, ವಿಚಾರಗಳ ಚರ್ಚೆಗಳಲ್ಲಿ ಸೋತು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ" ಎಂದರು.

ಬದಲಾವಣೆ ಶಿಕ್ಷಣದಲ್ಲಿ ಮಾತ್ರವಲ್ಲ

ಬದಲಾವಣೆ ಶಿಕ್ಷಣದಲ್ಲಿ ಮಾತ್ರವಲ್ಲ

"ನಾವು ಕೇವಲ ಶಿಕ್ಷಣದಲ್ಲಿ ಮಾತ್ರ ಬದಲಾವಣೆ ತಂದಿಲ್ಲ. ಇತರೆ ಕ್ಷೇತ್ರಗಳಲ್ಲಿ ಹಲವು ಬದಲಾವಣೆ ತಂದಿದ್ದೇವೆ. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ. ನಮ್ಮ ಸರ್ಕಾರ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಅದರ ಬಗ್ಗೆಯೂ ಮಾತನಾಡಿ. ಬರಗೂರು ರಾಮಚಮದ್ರಪ್ಪ ಪಠ್ಯ ಬದಲಾಯಿಸಿದರೆ, ಒಂದೇ ಪಂಥದ ಬರಹಗಳನ್ನು ಸೇರಿಸಿದರೆ ಅದು ತಪ್ಪಲ್ಲ ಅಲ್ವಾ?. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿವೆ. ನಾವು ಎಲ್ಲವನ್ನೂ ಒಪ್ಪಿಕೊಂಡು ಶ್ರೇಷ್ಠವಾದದ್ದನ್ನೇ ಕೊಡುತ್ತಿದ್ದೇವೆ" ಎಂದು ಸಚಿವರು ತಿಳಿಸಿದರು.

English summary
Kannada writer Devanur Mahadeva have revoked permission to use their writings in textbook, but Education minister says books already published and not possible to remove his chapter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X