ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.29ರಿಂದ ಅ. 9ರ ತನಕ ಇತರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 28: ಮೈಸೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕಾರಣಕ್ಕೆ ದಸರಾ ಸಂದರ್ಭದಲ್ಲಿ, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9ರ ತನಕ ಮೈಸೂರು ಪ್ರವೇಶಿಸುವ ಇತರ ರಾಜ್ಯಗಳ ವಾಹನಗಳಿಗೆ ತೆರಿಗೆ ಕಟ್ಟುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಖಾಸಗಿ ದರ್ಬಾರ್‌ಗಾಗಿ ರತ್ನಖಚಿತ ಸಿಂಹಾಸನ ಜೋಡಣೆಖಾಸಗಿ ದರ್ಬಾರ್‌ಗಾಗಿ ರತ್ನಖಚಿತ ಸಿಂಹಾಸನ ಜೋಡಣೆ

ಮೋಟಾರು ವಾಹನ ತೆರಿಗೆ ಕಾಯ್ದೆ, 1957ರ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಕರ್ನಾಟಕ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳಿಗೆ ಈ ಅನುಕೂಲ ಸಿಗಲಿದೆ. ಮೋಟಾರು ವಾಹನ ಕಾಯ್ದೆ 1988, ಸೆಕ್ಷನ್ 88 ಹಾಗೂ ಸಬ್ ಸೆಕ್ಷನ್ 8ರ ಅಡಿಯಲ್ಲಿ ವಿಶೇಷ ಪರವಾನಗಿ ನೀಡಲಾಗುತ್ತದೆ.

Tax Exemption For Outside Karnataka Vehicle During Dasara

ಈ ನಿಯಮವು 2007ರಿಂದ ಜಾರಿಯಲ್ಲಿದೆ. ಇತರ ಕೆಲವು ರಾಜ್ಯಗಳಿಗೆ ಹೋಲಿಸಿದರೆ ವಾಹನ ತೆರಿಗೆ ಕರ್ನಾಟಕದಲ್ಲಿ ಹೆಚ್ಚಿದೆ ಎಂದು ಅರ್ ಟಿಒ ಅಧಿಕಾರಿಗಳು ಒಪ್ಪುತ್ತಾರೆ. ಇತರ ರಾಜ್ಯಗಳ ವಾಹನಗಳಿಗೆ ತೆರಿಗೆ ವಿನಾಯಿತಿ ಇದೆ. ಆದರೆ ಆಲ್ ಇಂಡಿಯಾ ಪರ್ಮಿಟ್ ಇರುವ ವಾಹನಗಳಿಗೆ ಅಗತ್ಯ ತೆರಿಗೆ ತುಂಬಬೇಕು ಎಂದು ತಿಳಿಸಲಾಗಿದೆ.

English summary
Karnataka government announced that, tax exemption to outside Karnataka vehile to encourage tourism in Mysuru during dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X