ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಟಾ ಗ್ರೂಪ್‌ ಆಫ್ ಕಂಪನಿ ತೆಕ್ಕೆಗೆ ಪ್ರತಿಷ್ಠಿತ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 22: ಪ್ರತಿಷ್ಠಿತ ತಾಜ್ ಹೋಟೆಲ್‌ಗಳನ್ನು ನಿರ್ವಹಣೆ ಮಾಡುತ್ತಿರುವ ಟಾಟಾ ಗ್ರೂಪ್ ಆಫ್ ಕಂಪನಿಯು ಶತಮಾನೋತ್ಸವದ ಹೊಸ್ತಿಲಲ್ಲಿರುವ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ಅನ್ನು ತನ್ನ ತೆಕ್ಕೆಗೆ ಪಡೆದು, ನಿರ್ವಹಣೆ ಮಾಡಲಿದೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

ಸದ್ಯ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಅಧೀನದಲ್ಲಿ ನಡೆಯುತ್ತಿರುವ ಮೈಸೂರಿನ ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಅನ್ನು, ಟಾಟಾ ಗ್ರೂಪ್ ಕಂಪನಿ ಮುಖ್ಯಸ್ಥರು ಪಡೆದುಕೊಳ್ಳಲು ಆಸಕ್ತಿ ತೋರಿಸಿದ್ದಾರೆಂದು, ಆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವರ್ಚ್ಯುಯಲ್ ಸಭೆ ನಡೆದಿದೆ ಎಂದು ಬೆಂಗಳೂರಿನ ಉನ್ನತ ಮೂಲಗಳು ತಿಳಿಸಿವೆ.

ಐತಿಹಾಸಿಕ ಮೈಸೂರಿನ ಲಲಿತ್ ಮಹಲ್ ಹೋಟೆಲ್‌ಗೆ 100ರ ಸಂಭ್ರಮಐತಿಹಾಸಿಕ ಮೈಸೂರಿನ ಲಲಿತ್ ಮಹಲ್ ಹೋಟೆಲ್‌ಗೆ 100ರ ಸಂಭ್ರಮ

ಕರ್ನಾಟಕ ರಾಜ್ಯದಲ್ಲಿ ಹಣ ಹೂಡಿಕೆಗೆ ಇರುವ ಅವಕಾಶಗಳ ಕುರಿತಂತೆ ಚರ್ಚೆ ನಡೆದಿದ್ದು, ಟಾಟಾ ಗ್ರೂಪ್ಸ್ ಪರವಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಹಾಗೂ ಇತರ ಪ್ರತಿನಿಧಿಗಳು ಪಾಲ್ಗೊಂಡು ಹೋಟೆಲ್ ನಿರ್ವಹಣೆ ಸಂಬಂಧ ಪ್ರಾತ್ಯಕ್ಷಿಕೆ ನೀಡಿದರು ಎಂದು ಹೇಳಲಾಗಿದೆ.

ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ

ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ

ಟಾಟಾ ಅವರ ಅಧೀನದ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (ಐಹೆಚ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾಟ್ಬಾಲ್ ಅವರೂ ಸಭೆಯಲ್ಲಿ ಪಾಲ್ಗೊಂಡು ರಾಜಸ್ತಾನದ ಉದಯಪುರ, ಜೈಪುರ, ಜೋಧ್‌ಪುರ, ತೆಲಂಗಾಣದ ಹೈದರಾಬಾದ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ನಗರಗಳ ಅರಮನೆಗಳನ್ನು ನಿರ್ವಹಿಸುತ್ತಿರುವ ತಾಜ್ ಗ್ರೂಪ್ಸ್ ಅವುಗಳ ಸಂರಕ್ಷಣೆಯನ್ನು ಸಹ ಉತ್ತಮವಾಗಿ ಮಾಡುತ್ತಿದೆ ಎಂಬುದನ್ನು ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ.

ಖಾಸಗಿಯವರಿಗೆ ವಹಿಸಿಕೊಡಲು ಮುಂದಾಗಿದೆ

ಖಾಸಗಿಯವರಿಗೆ ವಹಿಸಿಕೊಡಲು ಮುಂದಾಗಿದೆ

ತಾಜ್ ಗ್ರೂಪ್ ಕಂಪನಿಯು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಘಟಕವಾದ, ಪ್ರಸ್ತುತ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನವರು ನಿರ್ವಹಿಸುತ್ತಿರುವ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ಪಡೆದು ನಿರ್ವಹಿಸಲು ಆಸಕ್ತಿ ತೋರಿದೆ. ಈ ಹೋಟೆಲ್ ಅನ್ನು 2018ರಲ್ಲಿ ಕೆಎಸ್‌ಟಿಡಿಸಿಯು ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ)ದಿಂದ ವಶಕ್ಕೆ ಪಡೆದುಕೊಂಡು ನಿರ್ವಹಣೆ ಮಾಡುತ್ತಾ ಬರುತ್ತಿದೆ. ಈಗ ರಾಜ್ಯ ಸರ್ಕಾರವು ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ಖಾಸಗಿಯವರಿಗೆ ವಹಿಸಿಕೊಡಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳು ಆಲಿಸಿದರೇ ಹೊರತು, ಪ್ರತಿಕ್ರಿಯೆ ನೀಡಲಿಲ್ಲ

ಮುಖ್ಯಮಂತ್ರಿಗಳು ಆಲಿಸಿದರೇ ಹೊರತು, ಪ್ರತಿಕ್ರಿಯೆ ನೀಡಲಿಲ್ಲ

ಪಾರಂಪರಿಕ ಆಸ್ತಿಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಕಂಪನಿಗಳು ಅಥವಾ ಖಾಸಗಿ ಏಜೆನ್ಸಿಗಳಿಗೆ ಮೈಸೂರಿನ ಲಲಿತ ಮಹಲ್ ಹೋಟೆಲ್ ಅನ್ನು ವಹಿಸುವುದು ಸೂಕ್ತ ಎಂಬುದು ಸರ್ಕಾರದ ನಿಲುವಾಗಿದೆ. ಆದರೆ ಸಭೆಯಲ್ಲಿ ಟಾಟಾ ಗ್ರೂಪ್ಸ್ ನವರ ಪ್ರಸ್ತುತಪಡಿಸಿದ ವಿಷಯಗಳನ್ನು ಮುಖ್ಯಮಂತ್ರಿಗಳು ಆಲಿಸಿದರೇ ಹೊರತು, ಹೋಟೆಲ್ ನಿರ್ವಹಣೆಯನ್ನು ಅವರಿಗೆ ವಹಿಸುವ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದು ಬಂದಿದೆ.

ನನಗೇ ಯಾವುದೇ ಮಾಹಿತಿ ಇಲ್ಲ ಎಂದ ಎಂ.ಅಪ್ಪಣ್ಣ

ನನಗೇ ಯಾವುದೇ ಮಾಹಿತಿ ಇಲ್ಲ ಎಂದ ಎಂ.ಅಪ್ಪಣ್ಣ

ಇದು ಪಾಲಿಸಿ ಮ್ಯಾಟರ್ ಆಗಿರುವುದರಿಂದ ಸರ್ಕಾರ ಸದ್ಯಕ್ಕೆ ಯಾವುದೇ ಕಂಪನಿ ಪರವಾಗಿ ನಿರ್ಧರಿಸಲಾಗದು. ನಿಯಮ, ಪರತ್ತುಗಳನ್ವಯ ಗ್ಲೋಬಲ್ ಟೆಂಡರ್ ಆಹ್ವಾನಿಸಿ ಅಧಿಕ ಹೂಡಿಕೆ ಮಾಡುವ ಹಾಗೂ ಸರ್ಕಾರಕ್ಕೆ ಆದಾಯ ತಂದುಕೊಡುವಂತಹ ಕಂಪನಿಗೆ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆ ವಹಿಸಬೇಕಾಗಿರುವುದು ಸರಿಯಾದ ಕ್ರಮವಾಗಿದೆ.

ಈ ನಡುವೆ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ಟಾಟಾ ಗ್ರೂಪ್‌ಗೆ ವಹಿಸುವ ಬಗ್ಗೆ ನನಗೇ ಯಾವುದೇ ಮಾಹಿತಿ ಇಲ್ಲ ಎಂದು ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷ ಎಂ.ಅಪ್ಪಣ್ಣ ತಿಳಿಸಿದ್ದಾರೆ. ಲಲಿತ ಮಹಲ್ ಹೋಟೆಲ್ ಅನ್ನು ವಶಕ್ಕೆ ಪಡೆದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನಡೆಸುತ್ತಿದೆ. ಆದರೆ ಈ ಪಾರಂಪರಿಕ ಆಸ್ತಿಯನ್ನು ಟಾಟಾ ಕಂಪನಿಯ ತಾಜ್‌ಹೋಟೆಲ್ ಗ್ರೂಪ್‌ಗೆ ನೀಡುವ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ ಎಂದಿದ್ದಾರೆ.

ಯಾವುದೇ ಖಾಸಗಿ ಕಂಪನಿಗೆ ವಹಿಸಲು ಸಾಧ್ಯವಿಲ್ಲ

ಯಾವುದೇ ಖಾಸಗಿ ಕಂಪನಿಗೆ ವಹಿಸಲು ಸಾಧ್ಯವಿಲ್ಲ

ಕಳೆದ ವಾರ ನಾವು ಮೈಸೂರಿನಲ್ಲಿ ಸಭೆ ನಡೆಸಿರುವುದು 100 ವರ್ಷ ತುಂಬುತ್ತಿರುವ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಪಾರಂಪರಿಕ ಕಟ್ಟಡದ ಶತಮಾನೋತ್ಸವ ಆಚರಣೆ ಬಗ್ಗೆಯೇ ಹೊರತು, ಹೋಟೆಲ್ ಅನ್ನು ಖಾಸಗಿ ಕಂಪನಿಗೆ ವಹಿಸುವ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಎಂ.ಅಪ್ಪಣ್ಣ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಆ ಪ್ರಸ್ತಾವನೆ ಬಂದಲ್ಲಿ ಸರ್ಕಾರದ ಹಂತದಲ್ಲಿ ಚರ್ಚೆಯಾಗಿ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆಯೇ ಹೊರತು, ಇಂತಹ ಪ್ರತಿಷ್ಠಿತ ಹಾಗೂ ದೊಡ್ಡ ಹೋಟೆಲ್ ಅನ್ನು ಏಕಾಏಕಿ ಯಾವುದೇ ಒಂದು ಖಾಸಗಿ ಕಂಪನಿಗೆ ವಹಿಸಲು ಸಾಧ್ಯವಿಲ್ಲ. ಅಧ್ಯಕ್ಷನಾದ ನನಗೇ ಈ ವಿಷಯ ತಿಳಿದಿಲ್ಲ, ಆದರೆ ಗಾಳಿಸುದ್ದಿ ಹರಡಿದೆ ಎಂದು ಎಂ.ಅಪ್ಪಣ್ಣ ತಿಳಿಸಿದರು.

English summary
It is rumored that Tata Group of Companies, which manages the prestigious Taj Hotels, will operate the Lalit Mahal Palace Hotel in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X