• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರೆ ಮುಗಿದ ಬಳಿಕ ಸ್ಫೋಟವಾಯ್ತು ಕೈ– ತೆನೆ ಅಸಮಧಾನದ ಹೊಗೆ

|
   ಕಾಂಗ್ರೆಸ್ -ಜೆಡಿಎಸ್ ನಡುವೆ ಶುರುವಾಯ್ತು ಭಿನ್ನಮತ | Oneindia Kannada

   ಮೈಸೂರು, ಅಕ್ಟೋಬರ್ 20 : ಸರ್ಕಾರದ ಕೇಂದ್ರಬಿಂದು ಮೈಸೂರಿನಲ್ಲಿ ಸಮ್ಮಿಶ್ರ ಸರ್ಕಾರದ ನಡುವೆ ಅಸಮಾಧಾನದ ಹೊಗೆ ಭುಗಿಲೆದ್ದಿದೆ.

   ತೆನೆ ಸಚಿವರ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಶನಿವಾರ ಸುದ್ದಿಗೋಷ್ಠಿ ನಡೆಸಿದರು.

   ಸರ್ಕಾರದಲ್ಲಿ ನಾವು ಇದ್ದೇವೆ ಎನ್ನುವುದನ್ನು ಸಚಿವ ಜಿ.ಟಿ ದೇವೇಗೌಡ, ಸಾ.ರಾ. ಮಹೇಶ್ ಮರೆತಿದ್ದಾರೆ. ದಸರಾದಲ್ಲಿ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪ್ರಾರಂಭದಲ್ಲಿ ನನಗೂ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

   ಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್‌ ತುಂಬಿಕೊಂಡ ಜನ ಸಾಗರ

   ದಸರೆಯ ಕುರಿತಾಗಿ ಯಾರೂ ಕೂಡ ನನಗೆ ಕರೆ ಮಾಡಿಲ್ಲ. ದಸರಾ ಮಹೋತ್ಸವಕ್ಕೆ ಜಿ.ಟಿ ದೇವೇಗೌಡರು ಆಹ್ವಾನದ ಬಗ್ಗೆ ಕರೆ ನೀಡಿಲ್ಲ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿನ ಜಾಗಕ್ಕೆ ಅವರದೇ ಪಕ್ಷದ ಅಧ್ಯಕ್ಷರ ಹೆಸರನ್ನ ಹಾಕಿದ್ದರು. ಹೀಗಾಗಿ ಇದರ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ.

   ನಾವು ದಸರಾ ಕಾರ್ಯಕ್ರಮದಲ್ಲಿ ದೂರ ಉಳಿದರೂ ನಮ್ಮ ಪ್ರತಿನಿಧಿಗಳು ಆಗಮಿಸಿದ್ದರು. ಡಿಸಿಎಂ ಪರಮೇಶ್ವರ್ ಅವರನ್ನು ಸಿಎಂ ಕಾಯಿಸಿದ್ದಾರೆ. ನಿನ್ನೆ 45 ನಿಮಿಷಗಳು ಉಪ ಮುಖ್ಯಮಂತ್ರಿಗಳನ್ನು ಸಿಎಂ ಬರಲಿದ್ದಾರೆ ಎಂದು ಕಾಯಿಸಿದ್ದರು.

   ಕಾಳಸಂತೆಯಲ್ಲಿ ಮಾರಾಟವಾಯ್ತಾ ಮೈಸೂರು ದಸರಾ ಟಿಕೆಟ್?

   ಸಿಎಂ ಎಲ್ಲಿ ಇರುತ್ತಾರೆ, ಯಾವಾಗ ಬರುತ್ತಾರೆ ಎಂದು ಪೊಲೀಸರಿಗೆ ಮಾಹಿತಿ ಇರುತ್ತದೆ. ಆದರೂ ಡಿಸಿಎಂ ಪರಮೇಶ್ವರ್ ಅವರನ್ನ ಕಾಯಿಸಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ಮಾಡಲಾಗುವುದು.

   ಸಂಪೂರ್ಣ ದಸರಾದ ಆಡಳಿತ ವ್ಯವಸ್ಥಿಯ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ನಡೆಸಲಾಗುವುದು. ದಸರಾ ವೇಳೆ ನಮ್ಮ ಜೊತೆ ಸರಿಯಾಗಿ ನಡೆದುಕೊಂಡಿಲ್ಲ. ಸಚಿವರು ಹಾಗೂ ಅವರ ಪಿ.ಎ ಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ಮಾಜಿ ಸಚಿವ ತನ್ವೀರ್ ಸೇಠ್ ಜೆಡಿಎಸ್ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದರು.

   ಜಿಟಿಡಿ-ಸಾರಾ ಮಹೇಶ್ ನಡುವೆಯೇ ಕಿತ್ತಾಟ ನಡೆಯುತ್ತಿದೆ: ಶೋಭಾ ಕರಂದ್ಲಾಜೆ

   ದಸರಾ ಪಾಸ್ ಹಂಚಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಹಾಗೂ ಸಚಿವ ಸಾರಾ ಮಹೇಶ್ ಅವರದ್ದೇ ದರ್ಬಾರ್ ಆಗಿತ್ತು. ಜಿಲ್ಲಾಡಳಿತ ನಡೆದುಕೊಳ್ಳುವ ರೀತಿ ನೀತಿಯಲ್ಲಿ ಲೋಪವಾಗಿದ್ದು, ಹೀಗಾಗಿ 2018ರ ಮೈಸೂರು ದಸರಾ ಆಚರಣೆ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.

   ಮೈಸೂರು ದಸರಾ ಮಹೋತ್ಸವದಲ್ಲಿ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿದೆ. ಪಾಸ್ ಹಂಚಿಕೆಯಲ್ಲಿ ಸಚಿವರಾದ ಜಿ.ಟಿ ದೇವೇಗೌಡರು ಮತ್ತು ಸಾರಾ ಮಹೇಶ್ ಅವರ ದರ್ಬಾರ್ ಜೋರಾಗಿತ್ತು.

   ಉಸ್ತುವಾರಿ ಸಚಿವರು 10 ಸಾವಿರ ಪಾಸ್ , ಸಾ ರಾ ಮಹೇಶ್ 5 ಸಾವಿರ ಪಾಸ್ ಮತ್ತು ಮುಖ್ಯಮಂತ್ರಿಗಳ ಕಚೇರಿಗೆ 2 ಸಾವಿರ ಪಾಸ್ ಗಳು ರವಾನೆಯಾಗಿದೆ. ಅಲ್ಲದೆ ಗೋಲ್ಡ್ ಪಾಸ್ ಗಳನ್ನ ಮಾರಾಟ ಮಾಡಿದ್ದೂ ಉಂಟು. ಕೆಲವರು ಗೋಲ್ಡ್ ಪಾಸ್ ಹೊಂದಿದ್ದರೂ ಪ್ರವೇಶ ಸಿಗಲಿಲ್ಲ. ಜಿಲ್ಲಾಡಳಿತ ನಡೆದುಕೊಳ್ಳುವ ರೀತಿ ನೀತಿಯಲ್ಲಿ ಲೋಪವಾಗಿದೆ. ಆದ್ದರಿಂದ ಪಾಸ್ ವಿತರಣೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

   English summary
   Ex Minister Tanveer Sait alleged that the Congress leaders were illtreated by JDS Ministers in the Dasara celebration in Mysore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X