ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಾನು ರೋಡ್ ಮಿನಿಸ್ಟರ್. ರೋಡ್ ಬಗ್ಗೆ ಮಾತ್ರ ಕೇಳಿ...'

|
Google Oneindia Kannada News

Recommended Video

ಮಂಡ್ಯವನ್ನು ಕೈ ಬಿಡೋ ಮಾತೇ ಇಲ್ಲ | Oneindia Kannada

ಮೈಸೂರು, ಜೂನ್ 29: ನೀರಾವರಿ ಇಲಾಖೆ ಕಾರ್ಯದರ್ಶಿಗಳಿಗೂ ಗೊತ್ತಾಗದೆ, ನಮ್ಮ ಡ್ಯಾಂಗಳಿಗೆ ತಮಿಳುನಾಡು ಅಧಿಕಾರಿಗಳು ಬಂದು ಹೋಗಿದ್ದಾರೆ. ಹಾಗೆಯೇ ಎಲ್ಲಾ ಡ್ಯಾಂಗಳ ಲೆಕ್ಕ ಬರೆದುಕೊಂಡು ಹೋಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅರಿವಿಗೆ ಬಾರದಂತೆ ರಾಜ್ಯದ ಎಲ್ಲಾ ಡ್ಯಾಂಗಳಿಗೂ ತಮಿಳುನಾಡಿನ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ನಮ್ಮ ಕಡೆಯಿಂದ ಒಂದು ಹನಿ ನೀರು ಹೊರಗೆ ಹೋದರೂ ಎಲ್ಲರಿಗೂ ನೋಟಿಸ್ ಬರುತ್ತದೆ. ನಾನು ಸಹ ಹೇಮಾವತಿ ಜಲಾಶಯಕ್ಕೆ ಭೇಟಿ ಕೊಟ್ಟೆ. ಅಲ್ಲಿ 15 ದಿನಕ್ಕೆ ಆಗುವಷ್ಟು ನೀರಿದೆ ಅಷ್ಟೇ. ನಮ್ಮ ಡ್ಯಾಂಗಳಲ್ಲಿ ನೀರಿಲ್ಲ. ಮೊನ್ನೆ ಜಲಾಶಯಗಳಿಗೆ ಭೇಟಿ ಕೊಟ್ಟಿದ್ದು ಕೇಂದ್ರ ತಂಡ ಅಲ್ಲ, ಅವರು ತಮಿಳುನಾಡಿನ ಅಧಿಕಾರಿಗಳು ಎಂದು ತಿಳಿಸಿದರು.

 ಸರಕಾರ ಇರುವಷ್ಟು ದಿನ ಕೆಲಸ ಮಾಡ್ತೀವಿ: ಎಚ್ ಡಿ ರೇವಣ್ಣ, ಸ್ವಾತಿ ನಕ್ಷತ್ರ ಸರಕಾರ ಇರುವಷ್ಟು ದಿನ ಕೆಲಸ ಮಾಡ್ತೀವಿ: ಎಚ್ ಡಿ ರೇವಣ್ಣ, ಸ್ವಾತಿ ನಕ್ಷತ್ರ

'ನಾನು ರೋಡ್ ಮಿನಿಸ್ಟರ್. ಕೇವಲ ರೋಡ್ ಬಗ್ಗೆ ಕೇಳಿ. ನೀರಿನ ವಿಚಾರ, ಮತ್ತೊಂದು ವಿಚಾರವನ್ನು ನನ್ ಹತ್ರ ಕೇಳ್ಬೇಡಿ. ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ, ಅದನ್ನೆಲ್ಲ ನೋಡಿಕೊಳ್ಳುವುದಕ್ಕೆ ಪಕ್ಷದ ಹೈಕಮಾಂಡ್ ಇದೆ' ಎಂದು ಹೇಳಿದರು.

tamil nadu officials checked our dams said revanna

ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ಕೆಲವರು ಮಧ್ಯಂತರ ಚುನಾವಣೆ ಬರುತ್ತೆ ಅಂತಾರೆ. ಅದು ಸಾಧ್ಯನಾ...? ಇದರಲ್ಲಿ ಯಾವುದೇ ಅನುಮಾನ ಬೇಡ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಐದು ವರ್ಷ ಪೂರೈಸುತ್ತಾರೆ. ಮಧ್ಯಂತರ ಚುನಾವಣೆಯೂ ಇಲ್ಲ, ಏನೂ ಇಲ್ಲ ಎಂದು ಮೈತ್ರಿ ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಿಗಳ ಸಭೆಯಲ್ಲಿ ಪರಮೇಶ್ವರ್-ರೇವಣ್ಣ ಡಿಶುಂ ಡಿಶುಂಅಧಿಕಾರಿಗಳ ಸಭೆಯಲ್ಲಿ ಪರಮೇಶ್ವರ್-ರೇವಣ್ಣ ಡಿಶುಂ ಡಿಶುಂ

ಪ್ರಜ್ವಲ್ ರೇವಣ್ಣ ಸಂಸತ್ತಿನಲ್ಲಿ ಮಾತನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಮಗನ ಬಗ್ಗೆ ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಲು ಆಗುವುದಿಲ್ಲ. ರಾಜ್ಯದ ಸಂಸದೀಯ ಪಟುವಾಗಿ ಅವರ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್ಯದಲ್ಲಿರುವ ಸರ್ಕಾರವನ್ನು ಭ್ರಷ್ಟ ಎಂದಾಗ ಕೇಳಿಸಿಕೊಂಡು ಸುಮ್ಮನಿರೋಕೆ ಆಗುತ್ತಾ?. ಪ್ರಜ್ವಲ್ ಅವರು ಲೋಕಸಭೆಯಲ್ಲಿ 2 ಟಿಎಂಸಿ ನೀರು ಬಿಡಿ ಅಂತ ಕೇಳಿದ್ದಾರೆ. ರಾಜ್ಯದ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ಮಗ ಲೋಕಸಭೆಯಲ್ಲಿ ಮಾತನಾಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

English summary
Unknowingly to the Secretaries of the Irrigation Department, Tamil Nadu officials have come to our dams and checked, said revanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X