ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಲಕಾಡು ಪಂಚಲಿಂಗ ದರ್ಶನಕ್ಕೆ ದಾರಿ ಯಾವುದಯ್ಯ

By Mahesh
|
Google Oneindia Kannada News

ಮೈಸೂರು, ನ.19 : ತಲಕಾಡಿನ ಪುರಾಣ ಪ್ರಸಿದ್ಧ ಪಂಚಲಿಂಗದರ್ಶನ ಮಹೋತ್ಸವಕ್ಕೆ ಸಿದ್ದತೆಗಳು ಜಾರಿಯಲ್ಲಿದೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಯಾತ್ರಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಸಂಚಾರ ಮಾರ್ಗ ಬದಲಾವಣೆಗಳನ್ನು ಪೊಲೀಸ್ ಇಲಾಖೆ ಸೂಚಿಸಿದೆ.

ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ನಿಂದ ಕಾವೇರಿ ನದಿ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಕರ್ನಾಟಕ ಮೀಸಲು ಪೊಲೀಸ್ ಪಡೆ ಸ್ನಾನಘಟ್ಟದ ಬಳಿ ಭಕ್ತಾದಿಗಳ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಪಂಚಲಿಂಗ ದರ್ಶನಕ್ಕಾಗಿ 112 ಕೋಟಿ ರು ಮಂಜೂರಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ವ್ಯಯಿಸಲಾಗಿದೆ. 12 ಕೋಟಿ ದರ್ಶನ ಮಹೋತ್ಸವ ಹಬ್ಬದ ಸಂಭ್ರಮಕ್ಕೆ ಮೀಸಲಿಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.

ಸಂಚಾರ ಮಾರ್ಗ: ನ.20 ರಿಂದ ಡಿ.10 ರತನಕ ಮೈಸೂರು ಜಿಲ್ಲೆ ಟೀ ನರಸೀಪುರ ತಾಲೂಕಿನ ತಲಕಾಡು ಸುತ್ತ ಮುತ್ತ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಕಪಿಲಾ ನದಿ ಸೇತುವೆ ಕಿರಿದಾಗಿರುವುದರಿಂದ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.

* ತಲಕಾಡಿನಿಂದ ಬರುವ ಭಾರಿ ವಾಹನಗಳು ತಿರಮಕೂಡಲು ವೃತ್ತದಿಂದ ಹುಣಸೂರು-ಡಣಾಯಕನಪುರ- ಕುಪ್ಪೇಗಾಲ-ಮೇಗಳಾಪುರ ಮಾರ್ಗವಾಗಿ ಮೈಸೂರು ತಲುಪಬಹುದು.
* ಮೈಸೂರಿನಿಂದ ಬರುವ ಭಾರಿ ವಾಹನಗಳು ಮೈಸೂರು-ಮೇಗಳಾಪುರ-ಎಡತೊರೆ-ಗರಗೇಶ್ವರಿ- ಟಿ. ನರಸೀಪುರ ಮಾರ್ಗವಾಗಿ ತಲಕಾಡು ತಲುಪಬಹುದು. ನೀರಿನ ವ್ಯವಸ್ಥ, ಅಗತ್ಯ ಸೌಲಭ್ಯ ವಿವರ, ಪಂಚಲಿಂಗ ದರ್ಶನ ಇತಿಹಾಸ ಮುಂತಾದ ವಿವರ ಮುಂದೆ ಓದಿ...

ಪವಿತ್ರ ಕ್ಷೇತ್ರ ತಲಕಾಡಿಗೆ ಮಾರ್ಗ ಸೂಚಿ ಇಲ್ಲಿದೆ

ನೀರಿನ ವ್ಯವಸ್ಥೆ, ಸ್ನಾನಘಟ್ಟ

ನೀರಿನ ವ್ಯವಸ್ಥೆ, ಸ್ನಾನಘಟ್ಟ

ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ 10 ಕಡೆಗಳಲ್ಲಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ, 11 ಕಡೆ ತಾತ್ಕಾಲಿಕ ಹಾಗೂ 5 ಕಡೆ ಶಾಶ್ವತ ಶೌಚಾಲಯಗಳ ವ್ಯವಸ್ಥೆ ಮಾಡಲಿದೆ.

1300 ಬಟ್ಟೆ ಬದಲಾಯಿಸುವ ತಾತ್ಕಾಲಿಕ ಹಾಗೂ ಶಾಶ್ವತ ಕೊಠಡಿಗಳ ನಿರ್ಮಾಣ. 4 ಕಡೆಗಳಲ್ಲಿ ತಾತ್ಕಾಲಿಕ ವಾಹನ ನಿಲುಗಡೆ ಪ್ರದೇಶಗಳ ಅಭಿವೃದ್ಧಿ. ಮುಡುಕುತೊರೆ ಗ್ರಾಮದಲ್ಲಿ ಶಾಶ್ವತ ಪ್ರವಾಸಿ ಮಂದಿರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ಶಾಶ್ವತ ವಿಶ್ರಾಂತಿಗೃಹ ನಿರ್ಮಾಣ ಮಾಡಬೇಕಿದೆ.ಕಾವೇರಿ ನೀರಾವರಿ ನಿಗಮ ನದಿ ಬದಿಯಲ್ಲಿ ಮಾಧವ ಮಂತ್ರಿ ನಾಲಾ, ಮತ್ತು ಶಾಖಾ ನಾಲಾಗಳ ವಿವಿಧ ಸ್ಥಳಗಳಲ್ಲಿ, ಪಂಚಲಿಂಗಗಳಲ್ಲಿ ಒಂದಾದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸಮೀಪ ಸಾಮೂಹಿಕ ಸ್ನಾನಘಟ್ಟಗಳನ್ನು ನಿರ್ಮಿಸಬೇಕು. ಪ್ರವಾಸಿಗರ ಓಡಾಟಕ್ಕೆ ಪಂಚಲಿಂಗಗಳ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ವಿವಿಧ ಸೇವಾ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಸೇವಾ ರಸ್ತೆಯಲ್ಲಿ ಬರುವ ಶಿಥಿಲಗೊಂಡ ಸೇತುವೆಗಳನ್ನು ಪುನರ್ ನಿರ್ಮಿಸಬೇಕಿದೆ.
ಜಿಲ್ಲಾಧಿಕಾರಿ ಶಿಖಾ

ಜಿಲ್ಲಾಧಿಕಾರಿ ಶಿಖಾ

ದೇಶದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಸುಮಾರು 30 ರಿಂದ 35 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಬರುವ ಭಕ್ತಾದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಮುಡುಕುತೊರೆ, ತಲಕಾಡು ಹಾಗೂ ವಿಜಾಪುರದ ದೇವಸ್ಥಾನಗಳಿಗೆ ಯಾತ್ರಾರ್ಥಿಗಳು ಸಂಚರಿಸಲು ಅನುವಾಗುವಂತೆ ಮಿನಿ ಬಸ್ಸಿನ ವ್ಯವಸ್ಥೆ ಮಾಡುವುದು. ತಲಕಾಡಿಗೆ ರಾಜ್ಯದ ನಾನಾಭಾಗಗಳಿಂದ ಹೆಚ್ಚುವರಿಯಾಗಿ ಬಸ್ ನಿಯೋಜಿಸುವಂತೆ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಖಾ ತಿಳಿಸಿದ್ದಾರೆ.

ದಸರಾ ಮಾದರಿಯಲ್ಲಿ ವಿದ್ಯುತ್ ಅಲಂಕಾರ, ಎಲ್ಲಾ ದೇವಸ್ಥಾನಗಳ ಒಳಗಡೆ ಸಿ,ಸಿ ಕ್ಯಾಮರಾ ಅಳವಡಿಸುವುದು, ಯಾವುದೇ ವ್ಯಕ್ತಿಯ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಆವರನ್ನು ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ಮಾಡುವುದು. ಇದರ ಬಂದೋಬಸ್ತ್‌ಗಾಗಿ 20 ಜನ ಡಿ.ವೈ,ಎಸ್,ಪಿ 60 ಜನ ಇನ್ಸ್‌ಪೆಕ್ಟರ್, 4000 ಪೇದೆಗಳನ್ನು ನೇಮಿಸಲಾಗಿದೆ
ಪಂಚಲಿಂಗ ದರ್ಶನ

ಪಂಚಲಿಂಗ ದರ್ಶನ

2009ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಿತ್ತು. ಡಿಸೆಂಬರ್ 2 ರಂದು ಬೆಳಗ್ಗೆ 10 ರಿಂದ ರಾತ್ರಿ 12 ರ ತನಕ ವಿಶೇಷ ಪೂಜೆ ಆಯೋಜನೆಗೊಂಡಿದೆ. ಸುಮಾರು ಮೂರುವರೆ ಲಕ್ಷ ಜನ ಭಕ್ತಾದಿಗಳ ನಿರೀಕ್ಷೆಯಿದೆ. ಡಿಸೆಂಬರ್ 7 ರ ತನಕ ವಿವಿಧ ಧಾರ್ಮಿಕ ಪೂಜೆ ಪುನಸ್ಕಾರಗಳು ಜಾರಿಯಲ್ಲಿರುತ್ತದೆ ಎಂದು ವೈದ್ಯನಾಥೇಶ್ವರ ದೇಗುಲದ ಪ್ರಧಾನ ಅರ್ಚಕ ಎನ್ ಕೃಷ್ಣ ದೀಕ್ಷಿತ್ ಹೇಳಿದ್ದಾರೆ.

ದರ್ಶನ ಮಹೋತ್ಸವ

ದರ್ಶನ ಮಹೋತ್ಸವ

1911,1924,1938,1952,1959,1965,1979,1986,1993 ನಂತರ 2000 ಇಸವಿಯಾದ ಮೇಲೆ ಮೂರನೇ ಬಾರಿಗೆ ಪಂಚಲಿಂಗ ದರ್ಶನ ಮಹೋತ್ಸವ ಆಯೋಜನೆಗೊಂಡಿರುವುದು ವಿಶೇಷ. ಕಾರ್ತಿಕ ಮಾಸದಲ್ಲಿ ಐದು ಸೋಮವಾರ ಬಂದು ಅದರಲ್ಲೂ ಕಡೆ ಸೋಮವಾರದ ದಿನ ಪೂರ್ಣ ಚಂದಿರನ ಜತೆ ಲಿಂಗರೂಪಿ ಪರಮಶಿವನ ದರ್ಶನ ಪಡೆಯುವುದರಲ್ಲಿ ಭಕ್ತರು ಧನ್ಯತೆ ಕಾಣುತ್ತಾರೆ.

English summary
During Talakadu Panchalinga Darshana from November 28 to December 4, nearly three million pilgrims from across the State and the country are expected to converge at Talakad, the ancient capital of the Gangas which has temples belonging to the earliest period of Karnataka’s history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X