ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರ ಕುಂಭಮೇಳದ ಜೊತೆ ಈ ಸ್ಥಳಗಳನ್ನು ವೀಕ್ಷಿಸಬಹುದು

|
Google Oneindia Kannada News

ಮೈಸೂರು, ಫೆಬ್ರವರಿ 15 : ಮೈಸೂರಿನ ತಿ.ನರಸೀಪುರ ತಾಲೂಕಿನ ತಿರುಮಕೂಡಲು ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 17 ರಿಂದ 19 ರವರಗೆ 11ನೇ ಕುಂಭಮೇಳ ನಡೆಯಲಿದೆ. ಸುಮಾರು 10 ಲಕ್ಷ ಭಕ್ತರು ಕುಂಭಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಕ್ತಾಧಿಗಳು ಅಲ್ಲಿಂದ ವಿವಿಧ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಬಹುದು.

ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು

ತಿ.ನರಸೀಪುರದಿಂದ 12 ಕಿ.ಮೀ. ದೂರದಲ್ಲಿರುವ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಹನೂರು ತಾಲ್ಲೂಕಿನ ಶ್ರೀಮಲೈಮಹದೇಶ್ವರ ಮತ್ತು ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಗಳನ್ನು ವೀಕ್ಷಿಸಬಹುದು.

ಚಿತ್ರಗಳು : ತಿ.ನರಸೀಪುರದ ಮಹಾಕುಂಭ ಮೇಳದ ಸಿದ್ಧತೆಚಿತ್ರಗಳು : ತಿ.ನರಸೀಪುರದ ಮಹಾಕುಂಭ ಮೇಳದ ಸಿದ್ಧತೆ

ಪ್ರವಾಸಿ ತಾಣಗಳಾದ ತಲಕಾಡು, ಸೋಮನಾಥಪುರ, ಗಗನಚುಕ್ಕಿ, ಬರಚುಕ್ಕಿ, ಶಿವನಸಮುದ್ರ, ಐತಿಹಾಸಿಕ ಪ್ರಸಿದ್ಧ ಶ್ರೀರಂಗಪಟ್ಟಣ, ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಕೆಆರ್‌ಎಸ್ ಜಲಾಶಯ, ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಬಹುದು.

ಕುಂಭಮೇಳಕ್ಕೆ ಸೇನೆಯಿಂದ ಸೇತುವೆ ನಿರ್ಮಾಣಕುಂಭಮೇಳಕ್ಕೆ ಸೇನೆಯಿಂದ ಸೇತುವೆ ನಿರ್ಮಾಣ

T.Narasipura Kumbh mela people can visit various tourist spots

ಕುಂಭಮೇಳದಲ್ಲಿ ಪಾಲ್ಗೊಂಡ ನಂತರ ಭಕ್ತಾಧಿಗಳು ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಮೈಸೂರು ಜಿಲ್ಲೆಯಲ್ಲಿ ಹಲವು ಪ್ರವಾಸಿ ಸ್ಥಳಗಳಿದ್ದು, ಅವುಗಳಿಗೂ ಹೆಚ್ಚಿನ ಜನರು ಕುಂಭಮೇಳದ ಸಮಯದಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ.

ಘನತೆ ಹೆಚ್ಚಿಸುವಂತೆ ಕುಂಭಮೇಳ ಆಯೋಜನೆ: ಕುಮಾರಸ್ವಾಮಿಘನತೆ ಹೆಚ್ಚಿಸುವಂತೆ ಕುಂಭಮೇಳ ಆಯೋಜನೆ: ಕುಮಾರಸ್ವಾಮಿ

ಕಾವೇರಿ, ಕಪಿಲಾ ಹಾಗೂ ಗುಪ್ತ ಗಾಮಿನಿ ಸ್ಥಟಿಕ ಸರೋವರ ಕೂಡುವ ತ್ರಿವೇಣಿ ಸಂಗಮದಲ್ಲಿ 1989ರಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ಆಯೋಜನೆ ಮಾಡಲಾಗುತ್ತದೆ. 11ನೇ ಕುಂಭಮೇಳ ಫೆ.17 ರಿಂದ 19ರ ತನಕ ನಡೆಯಲಿದೆ.

ಮೈಸೂರು ಜಿಲ್ಲಾಡಳಿತ ಕುಂಭಮೇಳಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡುತ್ತಿದೆ. ಭಾರತೀಯ ಸೇನಾಪಡೆಯ ನೆರವಿನಿಂದ ಪ್ರಥಮ ಬಾರಿಗೆ ತೇಲುವ ಸೇತುವೆ ನಿರ್ಮಾಣ ಮಾಡಲಾಗಿದೆ.

English summary
People who visit T.Narasipura Kumbh mela 2019 can also see various tourist spots of Mysuru district. Kumbha Mela will be held from February 17 to 19, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X