ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಂದು ವಿವಾದ; ಮೈಸೂರು ಡಿಸಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 09; " ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಇಂತಹ ಮೋಜು-ಮಸ್ತಿ ಏಕೆ ಬೇಕಿತ್ತು?" ಎಂದು ಜೆಡಿಎಸ್ ಮುಖಂಡ ಕೆ. ವಿ. ಮಲ್ಲೇಶ್ ಪ್ರಶ್ನಿಸಿದ್ದಾರೆ.

ಭಾನುವಾರ ಮೈಸೂರಲ್ಲಿ ಮಾತಾಡಿದ ಕೆ. ವಿ. ಮಲ್ಲೇಶ್, ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಲಾಗಿದೆ?. ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ?" ಎಂದರು.

ಮೈಸೂರು; ಆಕ್ಸಿಜನ್‌ ಕೊರತೆ ಬಗ್ಗೆ ರೋಹಿಣಿ ಸಿಂಧೂರಿ ಹೇಳಿದ್ದೇನು? ಮೈಸೂರು; ಆಕ್ಸಿಜನ್‌ ಕೊರತೆ ಬಗ್ಗೆ ರೋಹಿಣಿ ಸಿಂಧೂರಿ ಹೇಳಿದ್ದೇನು?

"ಕೋವಿಡ್ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡುತ್ತೇನೆ ಎಂದು ಹೇಳುತ್ತೀರಾ. ಹಾಗಾದರೆ ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತೆ?. ಜನಪರವಾಗಿ ಚಿಂತಿಸುವ ಯಾರಾದರೂ ಜಿಲ್ಲಾಧಿಕಾರಿಗಳು ಇಂತಹ ಕೆಲಸ ಮಾಡ್ತೀರಾ?, ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ" ಎಂದು ಆರೋಪಿಸಿದರು.

ವಿಡಿಯೋ; ಕಾರಿನ ಟೈರ್ ಬದಲಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿಡಿಯೋ; ಕಾರಿನ ಟೈರ್ ಬದಲಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

Swimming Pool And Gym Built At DC Govt House

"ಜನರಿಗೆ ಒಳ್ಳೆಯದು ಮಾಡಲು ಆಗಲ್ಲ ಅಂದರೆ ಮೈಸೂರಿನಿಂದ ನಿರ್ಗಮಿಸಿ. ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡರೂ ನಿಮ್ಮ ಹತ್ತಿರ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪಾರಂಪರಿಕ ಕಟ್ಟಡಗಳ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಯಾರೇ ಪಾರಂಪರಿಕ ಕಟ್ಟಡದ ಸಮೀಪ ಕಟ್ಟಡ ಕಟ್ಟಬೇಕಾದರೆ ಡಿಸಿ ಅನುಮತಿ ಕಡ್ಡಾಯ. ಈ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ" ಎಂದು ದೂರಿದರು.

ಶಿಷ್ಟಾಚಾರ ಮರೆತರಾ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ? ಶಿಷ್ಟಾಚಾರ ಮರೆತರಾ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ?

ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ" ಎಂದು ಆರೋಪ ಮಾಡಿದರು.

English summary
Swimming pool and gym built at Mysuru deputy commissioner government house. JD(S) leader K. V. Mallesh asked deputy commissioner what fund you used for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X