ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಅಪಾಯಕ್ಕೆ ಆಹ್ವಾನ ನೀಡುವ ಯುವಕರ ನೀರಾಟ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 9; ಬಿಸಿಲ ಝಳಕ್ಕೆ ಮೈಮನ ತಂಪು ಮಾಡುವ ಸಲುವಾಗಿ ಮಕ್ಕಳು ಸೇರಿದಂತೆ ಯುವಕರು ಕೆರೆ, ನದಿ, ನಾಲೆಗಳ ನೀರಿನಲ್ಲಿ ಈಜಾಡಲು ಮುಂದಾಗುತ್ತಿದ್ದು, ಇದು ಕೆಲವಡೆ ಅಪಾಯಕ್ಕೂ ಆಹ್ವಾನ ನೀಡುತ್ತಿದೆ.

ಈಗಾಗಲೇ ಅಲ್ಲಲ್ಲಿ ಈಜಲು ಹೋದ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದರೊಂದಿಗೆ ದುರಂತಗಳು ನಡೆಯದಂತೆ ಗಮನಹರಿಸುವುದು ಅಗತ್ಯವಿದೆ.

ಬೇಸಿಗೆ ಆರಂಭ; ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು ಬೇಸಿಗೆ ಆರಂಭ; ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

ಇಷ್ಟರಲ್ಲೇ ಮಳೆ ಸುರಿದಿದ್ದರೆ ವಾತಾವರಣ ಒಂದಷ್ಟು ತಂಪಾಗಿರುತ್ತಿತ್ತು. ಆದರೆ ಮಳೆ ಬಾರದ ಕಾರಣದಿಂದಾಗಿ ಬಿಸಿಲ ಝಳ ಹೆಚ್ಚುತ್ತಿದ್ದು, ಬಿಸಿಲಲ್ಲಿ ನಾಲ್ಕು ಹೆಜ್ಜೆ ಹಾಕಿದರೂ ದೇಹ ಬಳಲುತ್ತಿದೆ. ಹಾಗಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ನೀರಿನಲ್ಲಿ ಈಜಾಟವಾಡಲು ಕೆರೆ, ನಾಲೆ, ನದಿಯನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.

ಬೇಸಿಗೆ ಆರಂಭದಲ್ಲಿಯೇ ಕಬಿನಿಯಲ್ಲಿ ನೀರಿನ ಮಟ್ಟ ಕುಸಿತ ಬೇಸಿಗೆ ಆರಂಭದಲ್ಲಿಯೇ ಕಬಿನಿಯಲ್ಲಿ ನೀರಿನ ಮಟ್ಟ ಕುಸಿತ

Swimming In Kabini Canal Lead To Danger

ಬಹಳಷ್ಟು ಮಕ್ಕಳು ಮನೆಯಲ್ಲಿ ಪೋಷಕರಿಗೆ ಮಾಹಿತಿ ನೀಡದೆ ಗೆಳೆಯರೊಂದಿಗೆ ದೂರದ ನಾಲೆ, ನದಿಗಳಿಗೆ ಹೋಗುತ್ತಿದ್ದು, ಅಲ್ಲಿ ಈಜಾಡುವ ವೇಳೆ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಒಂದೆಡೆ ಕೊರೋನಾವೂ ಅಬ್ಬರಿಸುತ್ತಿದೆ. ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದರೂ ಇದನ್ನು ಬದಿಗೊತ್ತಿ ಗುಂಪು ಗುಂಪಾಗಿ ಈಜುವ ದೃಶ್ಯಗಳು ಕೆಲವೆಡೆ ಕಂಡು ಬರುತ್ತಿದೆ.

ಈ ಬಾರಿಯ 'ಉರಿ ಬೇಸಿಗೆ' ಕುರಿತು ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ ಈ ಬಾರಿಯ 'ಉರಿ ಬೇಸಿಗೆ' ಕುರಿತು ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಮೈಸೂರು ನಗರದಿಂದ ಕೆಲವು ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್. ಡಿ. ಕೋಟೆಯ ಕಬಿನಿಯತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗೆ ತೆರಳುವ ಬಹಳಷ್ಟು ಯುವಕರು ತುಂಬಿ ಹರಿಯುತ್ತಿರುವ ಕಬಿನಿ ಜಲಾಶಯ ಮುಂಭಾಗದ ಎಡದಂಡೆ ನಾಲೆಯಲ್ಲಿ ಈಜಾಡುವುದು ಸಾಮಾನ್ಯವಾಗಿದೆ.

Recommended Video

ಇವತ್ತಿನ ಮ್ಯಾಚ್ ನಲ್ಲಿ ಎಲ್ಲರ ಕಿವಿ ಸ್ಟಪ್ ಮೈಕ್ ಮೇಲೆ ಇರ್ಬೇಕು | Oneindia Kannada

ಬರೀ ಈಜಾಟವಾಡುವುದಲ್ಲದೆ, ದಡದಿಂದ ನಾಲೆಗೆ ಧುಮುಕುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಇದು ಅಪಾಯಕಾರಿ ಸಾಹಸವಾಗಿದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ತಲೆ ನಾಲೆಯ ಬದಿಗೆ ಬಡಿದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಂಬಂಧಿಸಿದವರು ಗಮನಹರಿಸಿ ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.

English summary
Youth swimming in Kabini canal in Mysuru H. D. Kote in time of summer. This stunts lead to danger, people should take care.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X