ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.24ರಿಂದ 29 ರವರೆಗೆ 6 ದಿನಗಳ ಕಾಲ ಸುತ್ತೂರು ಜಾತ್ರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರುಮ ಜನವರಿ 20: ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜ.24ರಿಂದ 29 ರವರೆಗೆ ಆರು ದಿನಗಳಕಾಲ ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಗಂಗಾಧರ ತಿಳಿಸಿದರು.

ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಖುದ್ದು ಸ್ವಾಮೀಜಿಗಳೇ ಮನೆಮನೆಗೆ ತೆರಳಿ ಮಹಾಪ್ರಸಾದಕ್ಕಾಗಿ 1000ಕ್ವಿಂಟಲ್ ಭತ್ತ ಮತ್ತು 10ಲಕ್ಷರೂ.ಸಂಗ್ರಹಿಸಿದ್ದಾರೆ ಎಂದರು.[ಜ.26ಕ್ಕೆ ಸುತ್ತೂರು ಜಾತ್ರೆಯಲ್ಲಿ ಗಾಳಿಪಟ ಸ್ಪರ್ಧೆ]

suttur-sri-shivayogi-jatra-from-january-24th-in-mysuru

ರಾಜ್ಯಮಟ್ಟದ 25ನೇ ಭಜನಾ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಲ್ಲದೆ ಕೇರಳ, ತಮಿಳುನಾಡು ರಾಜ್ಯಗಳಿಂದಲೂ ತಂಡಗಳು ಭಾಗವಹಿಸಲಿವೆ ಭಾಗವಹಿಸುವ ತಂಡಗಳಿಗೆ 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. ಪ್ರತಿ ವಿಭಾಗಕ್ಕೂ 5 ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ ಸೆಲ್ಫಿ ತೋಟ ಮಾಡಲಾಗಿದ್ದು, ಇಲ್ಲಿ ಭಕ್ತಾದಿಗಳು ತಮಗೆ ಇಷ್ಟವಾದ ಛಾಯಾಚಿತ್ರ ತೆಗೆದುಕೊಳ್ಳಬಹುದು.

ಕರಕುಶಲ, ಕೈಮಗ್ಗ, ಗೃಹೋಪಯೋಗಿ, ಪದಾರ್ಥಗಳ ಪ್ರದರ್ಶನ, ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ವಿವಿಧ ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು ಹಾಗೂ ಮಹಿಳಾ ಉದ್ಯಮಿಗಳು, ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.[ಫೆ. 5ರಿಂದ ಸುತ್ತೂರು ಜಾತ್ರೆ, ಹೋಗೋಣ ಬನ್ನಿ]

ಕೃಷಿ ಮೇಳದಲ್ಲಿ ರೈತರಿಗೆ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲು ಈ ಮೇಳವನ್ನು ಏರ್ಪಡಿಸಲಾಗುತ್ತಿದೆ. ಇದರಲ್ಲಿ ಸಮಗ್ರ ಬೆಳೆ ನಿರ್ವಹಣೆ, ಪಶುಸಂಗೋಪನೆಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಸಮಗ್ರ ಮಾಹಿತಿಯನ್ನು ನೀಡುವ ವ್ಯವಸ್ಥೆ ಇರುತ್ತದೆ. ಈ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಸಿರಿಧಾನ್ಯಗಳು ಹಾಗೂ ದ್ವಿದಳ ಧಾನ್ಯಗಳ ಬೆಳೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

suttur-sri-shivayogi-jatra-from-january-24th-in-mysuru

ಚಿತ್ರಸಂತೆಯನ್ನೂ ಹಮ್ಮಿಕೊಳ್ಳಲಾಗಿದ್ದು, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿಚ್ಛಿಸುವ ಕಲಾವಿದರುಗಳಿಗೆ ಜ. 27ರಿಂದ 29 ರವರೆಗೆ (3 ದಿವಸ) ಹಾಗೂ ಸ್ಥಳದಲ್ಲಿಯೇ ಚಿತ್ರ ರಚಿಸಿ ಮಾರಾಟ ಮಾಡಲು ಬಯಸುವ ಕಲಾವಿದರುಗಳಿಗೆ ಜ. 24 ರಿಂದ 29 ರವರೆಗೆ (6 ದಿವಸ) ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜ.24 ರಂದು ಗ್ರಾಮೀಣ ಕಲೆಗಳಾದ ಸೋಬಾನೆ ಪದ ಹಾಗೂ ರಂಗೋಲಿ ಸ್ಪರ್ಧೆ
ಜ. 25 ರಂದು ಪ್ರತಿವರ್ಷದಂತೆ ಈ ವರ್ಷವೂ ಸರಳ ಸಾಮೂಹಿಕ ವಿವಾಹ
ಜ.26 ರಂದು ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ
ಜ.27 ರಂದು ವಿವಿಧ ದೇಸಿ ಆಟಗಳ ಸ್ಪರ್ಧೆ
ಜ 28 ರಂದು ಕುಸ್ತಿ ಪಂದ್ಯಾವಳಿ
ಜ. 29 ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲೇ ಚಿತ್ರ ರಚಿಸುವ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿವೆ

ವಿವಿಧ ದೇಶಿ ಆಟಸ್ಪರ್ಧೆ , ದನಗಳ ಜಾತ್ರೆ, ನಾಟಕ ಪ್ರದರ್ಶನ ನಡೆಯಲಿದ್ದು, ಈ ಬಾರಿ ಸುತ್ತೂರು ಜಾತ್ರೆಗೆ 25ಲಕ್ಷಕ್ಕೂ ಹೆಚ್ಚು ಜನ ಬರುವ ಸಾಧ್ಯತೆಯಿದೆ.

English summary
Suttur Sri Shivarathreswara Shivayogi’s six-day Suttur jatra will begin From january 24th(Monday)to january 29th(Saturday)in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X