ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾದವರಿಗೆ ಮೈಸೂರಿನ ಸುರೇಶ್ ಪುಟ್ಟಲಿಂಗಪ್ಪನವರೇ ಯೋಗ ಗುರು

By Yashaswini
|
Google Oneindia Kannada News

ಮೈಸೂರು, ಜೂನ್.21: ವಿದೇಶದಲ್ಲಿ ಭಾರತೀಯ ಯೋಗಕ್ಕೆ ಅದರಲ್ಲೂ ಮೈಸೂರು ಯೋಗಕ್ಕೆ ಸಾಕಷ್ಟು ಬೇಡಿಕೆಯಿದೆ. ಅದಕ್ಕೆಂದೇ ಮೈಸೂರಿಗೆ ನೂರಾರು ಸಂಖ್ಯೆಯಲ್ಲಿ ವಿದೇಶಿಗರು ಬಂದು ಯೋಗಾಭ್ಯಾಸ ಮಾಡುತ್ತಾರೆ.

ಆದರೆ ಈಗ ಇಲ್ಲಿ ಹೇಳಲು ಹೊರಟಿರುವುದು ಸುರೇಶ್ ಪುಟ್ಟಲಿಂಗಪ್ಪ ಎಂಬ ಯೋಗ ಗುರುಗಳ ಬಗ್ಗೆ. ಮೂಲತಃ ಮೈಸೂರಿನವರಾದ ಇವರು ಸದ್ಯ ಚೈನಾದಲ್ಲಿರುವ ಚೀನಿಗರಿಗೆ ಯೋಗ ಹೇಳಿ ಕೊಡುತ್ತಾರೆ. ಜೊತೆಗೆ ಚೈನಾ ದೇಶದ ಮಿಲ್ಕ್ ಪ್ರಾಡಕ್ಟ್ ನ ರಾಯಭಾರಿಯೂ ಆಗಿದ್ದಾರೆ.

ಯೋಗ ಸೂತ್ರಗಳನ್ನು ರಚಿಸಿದ ಮಹರ್ಷಿ ಜೀವಸಿದ್ಧಿ ಪತಂಜಲಿ ಯೋಗ ಸೂತ್ರಗಳನ್ನು ರಚಿಸಿದ ಮಹರ್ಷಿ ಜೀವಸಿದ್ಧಿ ಪತಂಜಲಿ

ಬರೋಬ್ಬರಿ 14 ವರ್ಷಗಳಿಂದ ಯೋಗ ಕಲಿಸುತ್ತಿರುವ ಸುರೇಶ್ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗದಲ್ಲಿ ಪಾಲ್ಗೊಳ್ಳಲು ತವರಿಗೆ ಬಂದಿದ್ದರು.

Suresh Puttalingappa of Mysuru is now very famous in China.

ಈ ಹಿಂದೆಯೇ ಮೈಸೂರು ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿ ಆಗಿದೆ. ಈ ಬಾರಿ ಮತ್ತೊಂದು ಬೃಹತ್ ಯೋಗದಲ್ಲಿ ಭಾಗಿಯಾಗಲು ಸುರೇಶ್ ಪುಟ್ಟಲಿಂಗಪ್ಪ ಜೊತೆ ಕುಟುಂಬದ 35 ಮಂದಿಯೂ ಪಾಲ್ಗೊಳ್ಳಲಿದ್ದಾರೆ.

ವಿಶೇಷವೆಂದರೆ ಇವರ ಸಂಪೂರ್ಣ ಕುಟುಂಬವೇ ರೋಗ ಮುಕ್ತ ಯೋಗ ಕುಟುಂಬ. ಕುಟುಂಬದಲ್ಲಿರುವ 35 ಮಂದಿಯೂ ಯೋಗ ಮಾಡುತ್ತಾರೆ. ಮಾತ್ರವಲ್ಲ, ಎಲ್ಲರಿಗೂ ಯೋಗ ಕಲಿಸಿ ಕೊಡುತ್ತಿದ್ದಾರೆ.

ಇವರು ಹೇಳಿಕೊಡುವ ಅನೇಕ ಆಸನಗಳು ಮಹಿಳೆಯರಿಗೆ ಅದರಲ್ಲೂ ಗರ್ಭಿಣಿಯರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಹಾಗಾಗಿಯೇ ಇವರು ಚೈನಾದಲ್ಲಿ ಆಯೋಜನೆ ಮಾಡುವ ಯೋಗದಲ್ಲಿ ನೂರಾರು ಸಂಖ್ಯೆಯ ಗರ್ಭಿಣಿಯರು ಭಾಗಿಯಾಗುತ್ತಾರೆ.

Suresh Puttalingappa of Mysuru is now very famous in China.

ನಾರ್ಮಲ್ ಡೆಲಿವರಿ ಆಗಬೇಕೆಂಬ ಉದ್ದೇಶದಿಂದ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಇವರ ಬಳಿ ಯೋಗ ಕಲಿತಿದ್ದಾರೆ. ಮಾತ್ರವಲ್ಲ, ಯುವತಿಯರಿಗಾಗಿಯೂ ವಿಶೇಷ ಯೋಗವನ್ನು ಆಯೋಜನೆ ಮಾಡುತ್ತಾರಂತೆ.

ಹಾಗಾಗಿಯೇ ಇವತ್ತು ಚೈನಾ ದೇಶದಲ್ಲಿ ಇವರು ಆಯೋಜನೆ ಮಾಡಿರುವ ನೂರಾರು ಕಾರ್ಯಕ್ರಮದಲ್ಲಿ ಮಹಿಳೆಯರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ.
ಚೈನಾದಲ್ಲಿ ಮೈಸೂರಿಗರೊಬ್ಬರು ಗುರುವಾಗಿ ಪಾಠ ಮಾಡುತ್ತಿದ್ದು, ದೇಶಕ್ಕೆ ಹೆಮ್ಮೆಯ ಸಂಗತಿಯಾದರೆ, ಯೋಗ ಕಲಿತು ಎಲ್ಲರೂ ಆರೋಗ್ಯವಾಗಿರಿ ಎಂಬ ಸಂದೇಶ ಭಾರತೀಯರಿಗೆ ಮಾದರಿ.

English summary
Suresh Puttalingappa of Mysuru is now very famous in China. He teaches special yoga for ladies and pregnant women. All of his family members are free from disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X