ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಇಬ್ಬರಿಗೆ ಸೂಪರ್ ಬಗ್ ಸೋಂಕು ಪತ್ತೆ

|
Google Oneindia Kannada News

ಮೈಸೂರು, ಜುಲೈ 30: ಅಂತರಾಷ್ಟ್ರೀಯ ಸೋಂಕು ಎಂದೇ ಹೆಸರಾಗಿರುವ ಮಹಾಮಾರಿ ಕ್ಯಾಂಡಿಡಾ ಆರೀಸ್ ಸೂಪರ್‌ ಬಗ್‌ ಸೋಂಕಿನ ಎರಡು ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿದೆ. ನಗರದ ಜೆಎಸ್ ‌ಎಸ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳಲ್ಲಿ ಇದು ಕಾಣಿಸಿಕೊಂಡಿದ್ದು, ರಾಜ್ಯದಲ್ಲೇ ಮೊದಲ ಸೋಂಕಾಗಿದೆ.

ಡಾ.ಉಮಾ ಮಹೇಶ್ವರಿ ಹಾಗೂ ಪ್ರೊ.ಡಾ.ಎಂ.ಎನ್‌. ಸುಮನಾ ಅವರು ಈ ರೋಗವನ್ನು ಮೊದಲ ಬಾರಿ ಪತ್ತೆ ಮಾಡಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾದ ರೋಗಿಗಳಲ್ಲಿ ಈ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ರೋಗಿಗಳ ರಕ್ತದಲ್ಲಿ ಈ ಆರೀಸ್ ಕಂಡು ಬಂದಿದ್ದು, ಇದನ್ನು ಅಧಿಕೃತವಾಗಿ ದೃಢೀಕರಿಸುವ ಸಲುವಾಗಿ ಚಂಡೀಗಢದ ಲ್ಯಾಬಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ "ಪಾಸಿಟಿವ್" ಎಂದು ವರದಿ ಬಂದಿದೆ.

 ಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಎನ್‌ಎಸ್‌1 VS ಎಲಿಸಾ ಪರೀಕ್ಷೆ ಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಎನ್‌ಎಸ್‌1 VS ಎಲಿಸಾ ಪರೀಕ್ಷೆ

ಇವರಿಂದ ಮತ್ತೆ ಕೆಲ ರೋಗಿಗಳಿಗೆ ಸೋಂಕು ತಗುಲಿರಬಹುದಾದ ಅನುಮಾನದಿಂದ ಮತ್ತೆ ಇಲ್ಲಿನ 7 ಜನರ ವರದಿಯನ್ನು ಚಂಡೀಗಢದಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ.

Super Bug Infection Case Detected In Jss Hospital

ಅಂತರಾಷ್ಟ್ರೀಯ ಮಟ್ಟದ ಕ್ಯಾಂಡಿಡಾ ಆರಿಸ್ ಹೆಚ್ಚು ಸಾಂಕ್ರಾಮಿಕವಾಗಿರುವ ಶಿಲೀಂಧ್ರವಾಗಿದ್ದು, ದುರ್ಬಲಗೊಂಡ, ರೋಗನಿರೋಧಕ ಶಕ್ತಿ ಕಡಿಮೆಯಿರುವ, ಸ್ಟಿರಾಯ್ಡ್ ‌ಗಳನ್ನು ಬಳಸುತ್ತಿರುವ, ವೈರಲ್ ಸೋಂಕುಗಳಿಂದ ಬಳಲುತ್ತಿರುವ, ಎಚ್‌ಐವಿ, ಆಲ್ಕೋಹಾಲ್ ಪ್ರೇರಿತ ಪಿತ್ತಜನಕಾಂಗದ ತೊಂದರೆಗಳನ್ನು ಹೊಂದಿರುವ ಮತ್ತು ಆಸ್ಪತ್ರೆಗಳಲ್ಲಿನ ಶಸ್ತ್ರಚಿಕಿತ್ಸೆಗಳಿಂದ ಚೇತರಿಸಿಕೊಳ್ಳುತ್ತಿರುವಂತಹ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಫಂಗಸ್ ‌ನಿಂದ ಈ ಸೂಪರ್‌ ಬಗ್‌ ಹರಡುತ್ತದೆ. ಈಗಾಗಲೇ ಯುರೋಪ್, ಅಮೇರಿಕಾ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದೀಗ ಮೈಸೂರಿನಲ್ಲಿ ಇಬ್ಬರು ರೋಗಿಗಳಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ

"ಸೂಪರ್ ಬಗ್ ಗೆ ಮೈಸೂರಿಗರು ಆತಂಕ ಪಡಬೇಡಿ. ಇದು ಸ್ವಚ್ಛತೆಯ ಕೊರತೆಯಿಂದ ಬರುತ್ತದೆ. ನಾವು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಬಹಳ ಎಚ್ಚರ ವಹಿಸಬೇಕು. ರೋಗಿಯನ್ನು ಬಹಳ ಸೂಕ್ಷ್ಮವಾಗಿ ವೈದ್ಯರು ನೋಡಿಕೊಳ್ಳಬೇಕು. ರೋಗಿಯ ಕಡೆಯವರು ಸಹ ಎಚ್ಚರದಿಂದಿರಬೇಕು. ಇದಕ್ಕೆ ಔಷಧಿ ಇದೆ. ನಾನು ಜೆಎಸ್ ಎಸ್ ಆಸ್ಪತ್ರೆಗೆ ಭೇಟಿ ನೀಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ನಂತರ ಎಲ್ಲಾ ಆಸ್ಪತ್ರೆಗಳ ವೈದ್ಯರಿಗೆ ಎಚ್ಚರವಹಿಸುವಂತೆ ಸೂಚನೆ ನೀಡುತ್ತೇನೆ" ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

English summary
Presence of deadly superbug, Candida Auris, has been traced in two patients at the JSS hospital of Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X