ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಷನ್ ಎಫೆಕ್ಟ್ : ಖಾದಿ ವ್ಯಾಪಾರ ಬಲು ಜೋರು

By Yashaswini
|
Google Oneindia Kannada News

ಮೈಸೂರು, ಮೇ 3 : ಒಂದೆಡೆ ಬಿಸಿಲಿನ ಝಳವಾದರೆ, ಮತ್ತೊಂದಡೆ ಚುನಾವಣೆಯ ಬಿಸಿ ಇವೆರಡಕ್ಕೂ ಹೊಂದಿಕೊಂಡ ಸರಿಯೆನಿಸುವ ಉಡುಪು ಖಾದಿ.

ಚುನಾವಣೆಯ ಕಾವಿಗೆ ಖಾದಿಯ ವ್ಯಾಪಾರ - ವಹಿವಾಟು ಏರಿಕೆ ಕಂಡಿರುವುದು ಅಂಗಡಿ ವ್ಯಾಪಾರಿಗಳ ಮನದಲ್ಲಿ ಮಂದಹಾಸ ಮೂಡಿಸಿದೆ.

ರಾಜಕಾರಣದಲ್ಲಿ ತಮ್ಮ ಗತ್ತು ಗಮ್ಮತ್ತು ಹೆಚ್ಚಿಸಿಕೊಳ್ಳಲು ಖಾದಿ ಧರಿಸಿದರೇ ಸೂಕ್ತ ಎಂಬುದು ಹಲವರ ಮಾತು .ಈ ಹಿನ್ನೆಲೆಯ ಕಾರಣದಿಂದಲೇ ಇಂತಹ ತೆಳು ಖಾದಿ ಬಟ್ಟೆಗಳಿಗೆ ಮೊರೆ ಹೋಗಿದ್ದಾರೆ ಗ್ರಾಹಕರು.

ಸ್ವಾಭಿಮಾನದ ಪ್ರತೀಕ ಹುದಲಿಯ ಖಾದಿ ಉದ್ಯಮಸ್ವಾಭಿಮಾನದ ಪ್ರತೀಕ ಹುದಲಿಯ ಖಾದಿ ಉದ್ಯಮ

ಈ ಬೆಳವಣಿಗೆಯಿಂದಾಗಿ ನಗರದಲ್ಲಿರುವ ಪ್ರಮುಖ ಖಾದಿ ಅಂಗಡಿಗಳಲ್ಲಿ ಶೇ.20-30 ರಷ್ಟು ವ್ಯಾಪಾರ ಹೆಚ್ಚಾಗಿದೆ.

Summer and poll season bring Boom in Khadi sale

ಬಿಸಿಲಬೇಗೆಯಿಂದ ಒಂದಷ್ಟು ತಂಪು ಪಡೆಯಲು ಸಾಮಾನ್ಯರು ಖಾದಿ ಬಟ್ಟೆ ಖರೀದಿಸುತ್ತಿದ್ದರೆ, ಚುನಾವಣಾ ಸಭೆಗಳಲ್ಲಿ, ಅಭ್ಯರ್ಥಿಗಳ ಜತೆ ಪ್ರಚಾರಕ್ಕೆ ತೆರಳುವವರು ಖಾದಿಗೆ ಹೆಚ್ಚು ಮೊರೆ ಹೋಗಿದ್ದಾರೆ.ನಗರದಲ್ಲಿರುವ ಬಹುತೇಕ ಅಂಗಡಿಗಳಲ್ಲಿ ಬಿಳಿ ಅಂಗಿ, ಜುಬ್ಬ, ಗಾಂಧಿ ಟೋಪಿ, ಪೈಜಾಮುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಹಲವೆಡೆಗಳಿಂದ ಉತ್ಪಾದನೆಗೊಂಡ ಕೈಮಗ್ಗದ ಬಟ್ಟೆಗಳು ನಗರ ಸೇರಿದಂತೆ ರಾಜ್ಯದ ಎಲ್ಲ ಕಡೆ ಸರಬರಾಜಾಗುತ್ತಿವೆ. ಬೇರೆ ಜಿಲ್ಲೆಗಳಲ್ಲಿರುವ ಉತ್ಪಾದನಾ ಕೇಂದ್ರದಲ್ಲಿ ತಯಾರಾದ ಬಟ್ಟೆಗಳು ಸಹ ಮೈಸೂರಿಗೆ ಬರುತ್ತಿವೆ.

ರಾಜಕೀಯ ಮುಖಂಡರು ನಮ್ಮಲ್ಲಿ 5 -6 ಅಂಗಿ, ಜುಬ್ಬ, ಕೋಟ್‌ಗಳನ್ನು ಖರೀದಿಸಿದರೆ ಅವರ ಜತೆ ಬರುವ ಹಿಂಬಾಲಕರು ಸಹ ಒಂದಾದರೂ ಅಂಗಿಯನ್ನು ಖರೀದಿಸಿಯೇ ತೆರಳುತ್ತಾರೆ.

Summer and poll season bring Boom in Khadi sale

ಜತೆಗೆ ಪ್ರಮುಖ ನಾಯಕರಿಗೂ ಅವರ ಹಿತೈಷಿಗಳು ಉಡುಗೊರೆಯಾಗಿ ನೀಡಲು ಖಾದಿ ವಸ್ತ್ರಗಳನ್ನೇ ಖರೀದಿಸುತ್ತಿದ್ದಾರೆ. ಸೀಮಾಂಧ್ರ, ತಮಿಳುನಾಡು ರಾಜ್ಯಗಳಿಂದಲೂ ನಗರಕ್ಕೆ ಖಾದಿ ವಸ್ತ್ರಗಳು ಸರಬರಾಜಾದರೂ ನಮ್ಮ ರಾಜ್ಯದ ಹುಬ್ಬಳ್ಳಿ, ಧಾರವಾಡ, ವಿಜಯಪುರದಿಂದ ಬರುವ ವಸ್ತ್ರಗಳು ಭಾರಿ ಬೇಡಿಕೆ ಕಂಡಿವೆ ಎನ್ನುತ್ತಾರೆ ಖಾದಿ ಅಂಗಡಿ ವ್ಯಾಪಾರಿಗಳು.

ಮೋದಿ ಕೋಟಿಗೂ ಹೆಚ್ಚಿದ ಟ್ರೆಂಡ್ : ಈಗಿನ ಮತ್ತೊಂದು ಮೋಸ್ಟ್ ಟ್ರೆಂಡಿಂಗೆ ಬಟ್ಟೆಯೆಂದರೇ ಮೋದಿ ಕೋಟ್‌ ಅದನ್ನು ಹಾಕಿಕೊಂಡು ರಾಜಕೀಯ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದೇ ಒಂದು ರೀತಿಯ ಗೌರವ.

ಆದ್ದರಿಂದಲೇ ಅಂತಹ ಕೋಟ್‌ಗೂ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ನಾನಾ ಬಗೆಯ ಟೋಪಿಗಳಿದ್ದರೂ, ಚುನಾವಣಾ ಸಮಯವಾಗಿರುವುದರಿಂದ ಗಾಂಧಿ ಟೋಪಿಗೆ ಬೇಡಿಕೆ ಹೆಚ್ಚಾಗಿದೆ. ಎನ್ನುತ್ತಾರೆ

ಲಾಭದತ್ತ ಮುನ್ನಡೆಯುತ್ತಿರುವ ಖಾದಿ ಭಂಡಾರ: ಇಷ್ಟುದಿನ ಖಾದಿ ಭಂಡಾರ ಸರಿಯಾದ ಉತ್ಪಾದನೆ ಇಲ್ಲದೇ ನಷ್ಟದಲ್ಲಿಯಿತ್ತು. ಇದಕ್ಕೆ ಕಾರಣ ಹಳೆ ಕಾಲದ ಟ್ರೆಂಡ್ ಇದ್ದ ಕಾರಣ ಜನ್ರು ಹೆಚ್ಚು ಆಕರ್ಷಿತರಾಗುತ್ತಿರಲಿಲ್ಲ.. ಈ ನಿಟ್ಟಿನಲ್ಲಿ ಜನಕ್ಕೆ ಇಷ್ಟವಾಗುವಂತೆ ಹೊಸ ಶೈಲಿಯಲ್ಲಿ ತರಲಾಗಿದೆ ಅಂತಾರೆ ಖಾದಿ ಮಂಡಳಿ ಸದಸ್ಯ.

ಹೀಗಾಗಿ ಈ ಖಾದಿ ಬಟ್ಟೆಗಳಿಗೆ ಬೇಡಿಕೆ ಶುರುವಾಗಿದೆ. ಲಾಭದತ್ತ ಮುನ್ನೆಡೆಯುತ್ತಿದೆ.. ಕಳೆದ ವರ್ಷದಿಂದ ಜನರು ಖಾದಿ ಬಟ್ಟೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಖಾದಿ ಉಡುಪುಗಳು ಹೊಸ ಹವಾ ಕ್ರಿಯೇಟ್ ಮಾಡಿದೆ. ಚಳಿಗಾಲದಲ್ಲಿ ಬೆಚ್ಚಗೆ ಇಡುವ.ಬೇಸಿಗೆಯಲ್ಲಿ ತಂಪಾಗಿಸುವ ಖಾದಿ ವಸ್ತ್ರವನ್ನು ಬಹುತೇಕ ಮಂದಿ ಇಷ್ಟಪಡುತ್ತಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ಬಿಸಿಲ ಧಗೆ ಹೆಚ್ಚಾಗಿರುವುದರಿಂದ ಖಾದಿ ವಸ್ತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಮಾರಾಟ ಕೂಡ ಭರ್ಜರಿಯಾಗಿ ನಡೆಯುತ್ತಿದೆ.

ಆರೋಗ್ಯದ ದೃಷ್ಟಿಗೂ ಇದು ಹಿತಕರ : ಆರೋಗ್ಯದ ದೃಷ್ಟಿಯಿಂದ ಖಾದಿ ವಸ್ತ್ರ ಧರಿಸುವುದು ಒಳ್ಳೆಯದು. ಅದರಲ್ಲೂ ಚರ್ಮ ವ್ಯಾಧಿ ಇರುವವರು ಖಾದಿ ಧರಿಸುವುದೇ ಸೂಕ್ತ. ಇದು ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ ಎನ್ನುವ ಸಲಹೆಯೂ ವೈದ್ಯರಿಂದ ವ್ಯಕ್ತವಾಗಿದೆ.

ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ ಖಾದಿ ಬಟ್ಟೆ : ಬೇರೇ ಬಟ್ಟೆಗಳಿಗಿಂತ ಖಾದಿ ಬಟ್ಟೆಗಳು ಸುಲಭವಾಗಿ ಕೈಗೆಟಕುವ ದರದಲ್ಲಿ ಸಿಗುತ್ತದೆ. ಒಂದುಯ ಜುಬ್ಬ 380 ರೂ. ನಿಂದ 560 ರೂ. ವರೆಗೂ ಇದ್ದು ಬಹಳ ಅನುಕೂಲಕಾರಿ.

ಅತೀ ಕಡಿಮೆ ಬೆಲೆಯಿಂದ ಹೆಚ್ಚು ಬೆಲೆಯ ಇಂತಹ ಬಟ್ಟೆಗಳನ್ನು ಖರಿದೀಸಿದರೂ ಬಹು ಕಾಲ ಬಾಳಿಕೆ ಬರುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಗ್ರಾಹಕರು.

English summary
Obviously in the month of May, people will feel comfortable with khadi wares and more over its time of elections too in the state. So that sale in khadi cloths drastically increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X