ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿನಲ್ಲಿದ್ದೇ ಜಮೀನು ಖಾತೆ ಮಾಡಿಸಿಕೊಂಡ ಇಮ್ಮಡಿ ಮಹದೇವಸ್ವಾಮಿ?

|
Google Oneindia Kannada News

ಚಾಮರಾಜನಗರ, ಮೇ 16: ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು. ಈ ಹದಿನೇಳು ಜನರ ಸಾವಿಗೆ ಕಾರಣನಾದ ಕುಖ್ಯಾತ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಹೆಸರಿಗೆ ಇದೀಗ ಮಠದ ಶಿಕ್ಷಣ ಸಂಸ್ಥೆಯ 2 ಎಕರೆ 44 ಗುಂಟೆ ಜಮೀನು ಖಾತೆ ಆಗಿರುವುದು ಸದ್ಯ ಬೆಳಕಿಗೆ ಬಂದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕೊಳ್ಳೇಗಾಲದ ಸಾಮಾಜಿಕ ಕಾರ್ಯಕರ್ತ ದಶರಥ ಎಂಬುವವರು ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯಿಂದ ಆಸ್ತಿಯ ಖಾತೆ ಮಹಾದೇವಸ್ವಾಮಿ ಅವರ ಹೆಸರಿಗೆ ಆಗಿರುವುದು ತಿಳಿದುಬಂದಿದೆ.

ವಿಷ ಪ್ರಸಾದ ದುರಂತದ ಸುಳ್ವಾಡಿ ಮಾರಮ್ಮ ದೇವಾಲಯ ಸರ್ಕಾರದ ವಶಕ್ಕೆವಿಷ ಪ್ರಸಾದ ದುರಂತದ ಸುಳ್ವಾಡಿ ಮಾರಮ್ಮ ದೇವಾಲಯ ಸರ್ಕಾರದ ವಶಕ್ಕೆ

ಕೊಳ್ಳೇಗಾಲ ತಾಲೂಕು, ಕಸಬಾ ಹೋಬಳಿಯ, ಲಿಂಗಣಪುರ ಗ್ರಾಮದ ಸರ್ವೆ ನಂಬರ್ 203ರಲ್ಲಿರುವ ಜಮೀನಿನ ಖಾತೆ ಮಹಾದೇವಸ್ವಾಮಿ ಅವರ ಹೆಸರಿಗೆ ಆಗಿದ್ದು, ಮೇ 3ರಂದು ಕೊಳ್ಳೇಗಾಲ ತಹಶೀಲ್ದಾರ್ ಕಚೇರಿಯಲ್ಲಿ ಆಸ್ತಿಗೆ ಸಂಬಂಧಿಸಿದ ಪಹಣಿ ಪತ್ರವನ್ನು ನೀಡಲಾಗಿದೆ. ಈ ಸರ್ವೆ ನಂಬರ್‌ನಲ್ಲಿ ಸಾಲೂರು ಮಠಕ್ಕೆ ಸೇರಿದ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದೆ.

Sulwadi temple tragedy: Accused Immadi Mahadevswamy was registered land at jail?

ಮಹದೇವ ಪ್ರಭು ಎಂಬುವವರು, ಸಾಲೂರು ಮಠ ನಿರ್ವಹಿಸುತ್ತಿರುವ ಶ್ರೀ ಮಲೆ ಮಹದೇಶ್ವರ ಕೃಪಾ ವಿದ್ಯಾ ಸಂಸ್ಥೆಯ ಆಗಿನ ಕಾರ್ಯದರ್ಶಿ ಆಗಿದ್ದ ಮಹಾದೇವಸ್ವಾಮಿ ಹೆಸರಿಗೆ 1997ರಲ್ಲಿ ಈ ಜಮೀನನ್ನು ನೋಂದಣಿ ಮಾಡಿದ್ದರು.

ಸುಳ್ವಾಡಿ ವಿಷ ಪ್ರಸಾದ ಪ್ರಕರಣ: 6163 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಸುಳ್ವಾಡಿ ವಿಷ ಪ್ರಸಾದ ಪ್ರಕರಣ: 6163 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಈ ಬಗ್ಗೆ ಸ್ಥಳೀಯ ತಹಶೀಲ್ದಾರ್‌ಗೆ ಜನವರಿಯಲ್ಲಿ ಪತ್ರ ಬರೆದಿದ್ದ ಕೊಳ್ಳೇಗಾಲ ಉಪವಿಭಾಗಾಧಿಕಾರಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

"ಜನ ಸಾಮಾನ್ಯರ ಖಾತೆಗಳನ್ನು ತಿದ್ದುಪಡಿ ಮಾಡಬೇಕಾದರೆ ವರ್ಷದವರೆಗೂ ಅವಧಿ ನೀಡಿ ಜನರನ್ನು ಅಲೆದಾಡಿಸುವ ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೆ ತಕ್ಷಣದಲ್ಲಿ ಕೆಲಸ ಮಾಡಿಕೊಡುತ್ತಾರೆ. ಪ್ರಸಾದದಲ್ಲಿ ವಿಷ ಬೆರೆಸಿ 17 ಮುಗ್ಧ ಜನರ ಸಾವಿಗೆ ಕಾರಣರಾದ ವ್ಯಕ್ತಿಗೆ ಖಾತೆ ಹೇಗೆ ಮಾಡಿಕೊಟ್ಟರು? ಇದರಲ್ಲಿ ಅಧಿಕಾರಿಗಳೂ ಶಾಮೀಲು ಆಗಿದ್ದಾರೆ" ಎನ್ನುತ್ತಾರೆ ಜನರು.

English summary
Sulwadi temple tragedy: Accused Immadi Mahadevswamy was registered land at jail?.Social worker Dasharatha received tis information under the RTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X