ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಪಾಸು ಪಡೆದವರು ಪಾಲಿಸಲೇಬೇಕಾದ ಸಲಹೆಗಳು...

|
Google Oneindia Kannada News

ಮೈಸೂರು, ಅಕ್ಟೋಬರ್ 8: ನಾಡಹಬ್ಬ ಮೈಸೂರು ದಸರಾದ ಐತಿಹಾಸಿಕ ಜಂಬೂಸವಾರಿ ಅರಮನೆ ಆವರಣದಿಂದ ಹೊರಡಲಿದ್ದು, ಈಗಾಗಲೇ ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಲು ದಸರಾ ಪಾಸು ಪಡೆದಿರುವ ಜನ ಅರಮನೆಯತ್ತ ಧಾವಿಸುತ್ತಿದ್ದಾರೆ.

ಅರಮನೆ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರಮನೆ ಆವರಣದಲ್ಲಿ ಆಸೀನರಾಗಿ ದಸರಾ ವೀಕ್ಷಿಸಲು ಸುಮಾರು 26 ಸಾವಿರದಷ್ಟು ಆಸನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು, ದಸರಾಗೋಲ್ಡ್ ಕಾರ್ಡ್ ಮತ್ತು ಪಾಸ್ ಹೊಂದಿರುವವರಿಗೆ, ಟಿಕೇಟ್ ಖರೀದಿಸಿರುವ ಸಾರ್ವಜನಿಕರಿಗೆ ಈ ಆಸನ ವ್ಯವಸ್ಥೆ ಮತ್ತು ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ

ಟಿಕೆಟ್ ಸೂಚಿಸಿದ ದ್ವಾರದಲ್ಲೇ ತೆರಳಿ: ಪಾಸುಗಳಲ್ಲಿ ಯಾವ ದ್ವಾರದಿಂದ ತೆರಳಬೇಕು ಎಂಬುದನ್ನು ಸೂಚಿಸಲಾಗಿದ್ದು ಅದರಂತೆ ತೆರಳುವುದು ಅನಿವಾರ್ಯ. ಅಂಬವಿಲಾಸ, ವರಹಾ, ವರಹಾ ಗೇಟ್, ಕರಿಕಲ್ಲು ತೊಟ್ಟಿ ಮತ್ತು ಬ್ರಹ್ಮಪುರಿ ದ್ವಾರಗಳ ಮೂಲಕ ಅರಮನೆಗೆ ಪ್ರವೇಶ ನೀಡಲಾಗುತ್ತಿದೆ. ಜತೆಗೆ ಇಲ್ಲಿಗೆ ತೆರಳುವವರು ಎಲ್ಲಿ ವಾಹನಗಳನ್ನು ನಿಲ್ಲಿಸಬೇಕೆಂಬುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಈ ದ್ವಾರಗಳಲ್ಲಿ ಮಧ್ಯಾಹ್ನ 12.30 ನಂತರ ಪ್ರವೇಶಿಸಲು ಅವಕಾಶ ನೀಡಲಾಗಿದ್ದು, ಪಾಸುಗಳನ್ನು ಪ್ರತಿಯೊಂದು ದ್ವಾರದಲ್ಲಿ ಪಿಡಿಎ ಯುನಿಟ್‌ಗಳ ಮೂಲಕ ಸ್ಕ್ಯಾನ್ ಮಾಡಲಾಗುವುದು.

Suggestions To Follow Mysuru Dasara Pass Holders

ದಸರಾ ನಾಡಹಬ್ಬದ ವೀಕ್ಷಣೆಗಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಅರಮನೆ ಮತ್ತು ಸಂಜೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿಗೂ ಅನ್ವಯವಾಗಲಿದೆ.

ಸಾರ್ವಜನಿಕರು, ಪ್ರವಾಸಿಗರು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತ ಆಗಮಿಸಿ, ನಿಮಗೆ ಮೀಸಲಾಗಿರುವ ಸ್ಥಳದಲ್ಲಿ ಆಸೀನರಾಗಬೇಕು. ಟಿಕೇಟ್ ಹಿಂಭಾಗ ಸೂಚಿಸಿರುವ ನಿಗದಿತ ಗೇಟ್‌ಗಳ ಮುಖಾಂತರ ಪ್ರವೇಶಿಸಬೇಕು. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಲಾಗುತ್ತದೆ. ಸ್ಥಳ ಭರ್ತಿಯಾದ ನಂತರ ಪೊಲೀಸ್ ಅಧಿಕಾರಿಗಳು ತಿಳಿಸಿದ ಬೇರೆ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕಾಗುತ್ತದೆ.

ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡು ಬಂದಲ್ಲಿ ಸನಿಹದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಯ ಗಮನಕ್ಕೆ ತರಬೇಕು.ಬೆಲೆಬಾಳುವ ವಸ್ತುಗಳು, ಹಣ, ಚಿನ್ನಾಭರಣಗಳ ಮೇಲೆ ಗಮನವಿರಲಿ.

Suggestions To Follow Mysuru Dasara Pass Holders

ಇನ್ನು ಕೆಲವೊಂದಕ್ಕೆ ನಿರ್ಬಂಧ ಹೇರಲಾಗಿದೆ. ಯಾವುದೇ ಆಹಾರ ಪದಾರ್ಥಗಳನ್ನು ಒಳಗೆ ಒಯ್ಯುವಂತಿಲ್ಲ. ಮ್ಯಾಚ್ ಬಾಕ್ಸ್, ಲೈಟರ್, ಸಿಗರೇಟ್, ಗುಟ್ಕಾ, ಪ್ಲಾಸ್ಟಿಕ್ ಇತರೆ ಹಾನಿಕಾರಕ ವಸ್ತುಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಲಗೇಜ್ ಅಥವಾ ಇತರೆ ಬ್ಯಾಗ್‌ಗಳನ್ನು ಒಯ್ಯುವಂತಿಲ್ಲ. ಗ್ಯಾಂಗ್ ವೇಗಳನ್ನು ಜಂಪ್ ಮಾಡಬಾರದು, ಎನ್‌ಕ್ಲೋಷರ್ ‌ಗಳನ್ನು ಬದಲಾಯಿಸುವಂತಿಲ್ಲ. ಕುರ್ಚಿಗಳನ್ನು ಒಂದರ ಮೇಲೆ ಒಂದರಂತೆ ಹಾಕಿಕೊಂಡು ಕೂರಬಾರದು, ಕುರ್ಚಿಗಳ ಮೇಲೆ ನಿಂತು ವೀಕ್ಷಿಸಬಾರದು. ಸುರಕ್ಷತೆ ದೃಷ್ಟಿಯಿಂದ ಸಣ್ಣ ಮಕ್ಕಳನ್ನು ಕರೆತರಬಾರದು. ಕರೆದುಕೊಂಡು ಬಂದಲ್ಲಿ ಮಕ್ಕಳ ಸುರಕ್ಷತೆ ನಿಮ್ಮದಾಗಿರುತ್ತದೆ, ಅನಧಿಕೃತ ವ್ಯಕ್ತಿಗಳಿಂದ ದಸರಾ ವೀಕ್ಷಣೆ ಟಿಕೇಟ್, ಪಾಸ್ ಗಳನ್ನು ಖರೀದಿಸಬೇಡಿ ಒಂದಷ್ಟು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

English summary
People rushing towards the mysuru palace to see Dasara jambu savari witness these beautiful moments. Here are some of the Suggestions given to follow to pass holders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X