ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನೆಗೆ ಮೈಸೂರು-ಚಾಮರಾಜನಗರ ರೈತರು ಸಜ್ಜು

By Kiran B Hegde
|
Google Oneindia Kannada News

ಮೈಸೂರು, ಡಿ. 4: ಬೆಳಗಾವಿಯ ಸುವರ್ಣಸೌಧದಲ್ಲಿ ಡಿ. 9ರಿಂದ ಆರಂಭವಾಗಲಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನ ಸಂದರ್ಭ ಪ್ರತಿಭಟನೆ ನಡೆಸಲು ಮೈಸೂರು ಹಾಗೂ ಚಾಮರಾಜನಗರ ಕಬ್ಬು ಬೆಳೆಗಾರರು ಸಜ್ಜಾಗಿದ್ದಾರೆ. ಹೈ ಕೋರ್ಟ್ ಸೂಚನೆ ನೀಡಿದ್ದರೂ ರೈತರ ಬಾಕಿ ವಿತರಿಸದ ಸಕ್ಕರೆ ಕಾರ್ಖಾನೆಗಳ ಧೋರಣೆ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. [ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆ]

ಈ ಕುರಿತು ಮೈಸೂರಿನಲ್ಲಿ ಸಭೆ ನಡೆಸಿದ ಮೈಸೂರು ಹಾಗೂ ಚಾಮರಾಜನಗರ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, ರೈತರಿಗೆ ಇನ್ನೂ ಬಾಕಿ ನೀಡದ ಕಾರ್ಖಾನೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

belagavi

ಬಾಕಿ ನೀಡದಿದ್ದರೆ ರಾಷ್ಟ್ರೀಕರಣ ಮಾಡಿ: ರೈತರ ಬಾಕಿ ಹಣವನ್ನು ಕಾರ್ಖಾನೆಗಳು ತಕ್ಷಣ ವಿತರಿಸಬೇಕೆಂದು ಹೈ ಕೋರ್ಟ್ ಸೂಚಿಸಿದೆ. ಆದರೂ, ಕಾರ್ಖಾನೆಗಳು ಈ ಸೂಚನೆಯನ್ನು ಪಾಲಿಸುತ್ತಿಲ್ಲ. ಆದ್ದರಿಂದ ಇಂತಹ ಕಾರ್ಖಾನೆಗಳನ್ನು ತಕ್ಷಣ ರಾಷ್ಟ್ರೀಕರಣಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. [ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ]

ಕಳೆದ ವರ್ಷ ಕಾರ್ಖಾನೆಗಳು ರೈತರಿಂದ ಸ್ವೀಕರಿಸಿದ್ದ ಕಬ್ಬಿನ ಬಾಕಿ ಹಣವನ್ನೇ ಇನ್ನೂ ತೀರಿಸಿಲ್ಲ. ಸಾವಿರಾರು ಕೋಟಿ ರೂ.ಗಳಷ್ಟು ಹಣ ಬಾಕಿ ಇದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆರೋಪಿಸಿದ್ದಾರೆ. [ಹನಿ ನೀರಾವರಿಗೆ 1,800 ಕೋಟಿ ರೂ.]

ಹೈ ಕೋರ್ಟ್ ಆದೇಶ ನೀಡಿದರೂ ಸಕ್ಕರೆ ಕಾರ್ಖಾನೆಗಳು ಸ್ಪಂದಿಸಿಲ್ಲ. ಆದ್ದರಿಂದ ಇಂತಹ ಕಾರ್ಖಾನೆಗಳನ್ನು ರಾಷ್ಟ್ರೀಕರಣ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. [ಹನಿ ಹನಿಯಾಗಿ ಬೀಳಲಿದೆ ನೀರು]

English summary
Mysuru and Chamarajnagar sugarcane growers ready to protest at Belgavi during assembly winter session. Decision is taken after meeting held at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X