ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಪನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಯುವತಿಯರಿಗೆ ಕಿರುಕುಳವಾಗಿಲ್ಲ:ಸುಬ್ರಹ್ಮಣ್ಯೇಶ್ವರರಾವ್

|
Google Oneindia Kannada News

Recommended Video

ಓಪನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಯುವತಿಯರಿಗೆ ಕಿರುಕುಳವಾಗಿಲ್ಲ:ಸುಬ್ರಹ್ಮಣ್ಯೇಶ್ವರರಾವ್

ಮೈಸೂರು, ಅಕ್ಟೋಬರ್. 16: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕಳೆದ ಶನಿವಾರವಷ್ಟೇ ಏರ್ಪಡಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಯುವತಿಯರಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಯುವತಿಯರಿಗೆ ಕಿರುಕುಳ ಘಟನೆಗಳು ನಡೆದಿಲ್ಲ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕಿರುಕುಳ ನಡೆದಿರುವ ಬಗ್ಗೆ ಕೆಲ ಯುವತಿಯರು ಆರೋಪಿಸಿದ್ದರು. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದುವರೆಗೂ ಯಾರೊಬ್ಬರೂ ದೂರು‌ ನೀಡಿಲ್ಲ ಎಂದರು.

 ವಿಜಯದಶಮಿಯಂದು ವಜ್ರಮುಷ್ಠಿ ಕಾಳಗದಲ್ಲಿ ತೊಡೆ ತಟ್ಟಲು ಮುಂದಾದ ಜಟ್ಟಿಗಳು ವಿಜಯದಶಮಿಯಂದು ವಜ್ರಮುಷ್ಠಿ ಕಾಳಗದಲ್ಲಿ ತೊಡೆ ತಟ್ಟಲು ಮುಂದಾದ ಜಟ್ಟಿಗಳು

ಈಗಾಗಲೇ ಓಪನ್ ಸ್ಟ್ರೀಟ್ ‌ಫೆಸ್ಟಿವಲ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಫುಟೇಜ್ ಪರಿಶೀಲಿಸಿದ್ದೇವೆ. ತೊಂದರೆಯಾದಂತಹ ಯಾವುದೇ ಘಟನೆಗಳು ನಮಗೆ ಗೋಚರಿಸಿಲ್ಲ.

Subrahmanyeswara Rao said Young women are not harassed at the Open Street Festival

ಹಾಗೇನಾದರೂ ಘಟನೆ ನೀವು ಅನುಭವಿಸಿದ್ದಲ್ಲಿ ತಕ್ಷಣ ಯುವತಿಯರು ನಮ್ಮನ್ನು ಸಂಪರ್ಕಿಸಿ ಆರೋಪಿಗಳನ್ನು ಗುರುತಿಸಿದರೆ ಅನುಕೂಲವಾಗುತ್ತದೆ. ಅಗತ್ಯವಿದ್ದರೆ ಕಿರುಕುಳ ಅನುಭವಿಸಿದ ಯುವತಿಯರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ದೂರು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

 ದಸರಾ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಪುಂಡರಿಂದ ಕಿರುಕುಳ: ಸಂತ್ರಸ್ತೆಯರು ಹೇಳಿದ್ದೇನು? ದಸರಾ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಪುಂಡರಿಂದ ಕಿರುಕುಳ: ಸಂತ್ರಸ್ತೆಯರು ಹೇಳಿದ್ದೇನು?

ಇನ್ನು ದಸರಾ ಹಿನ್ನೆಲೆಯಲ್ಲಿ ಸುರಕ್ಷತೆ, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ. ರೌಡಿ ಶೀಟರ್ ಗಳ ಮೇಲೆ ನಿಗಾ ಇಡಲಾಗಿದೆ. ದಸರಾ ಮಹೋತ್ಸವಕ್ಕೆ ಇದುವರೆಗೂ ಯಾರಿಂದಲೂ ಬೆದರಿಕೆ ಇಲ್ಲ. ನಿಶ್ಚಿಂತೆಯಿಂದ ದಸರಾ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

English summary
Mysuru Police Commissioner A. Subrahmanyeswara Rao said Young women are not harassed at the Open Street Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X