ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಂಡವಪುರದಲ್ಲಿ ಶಿಕ್ಷಕಿ-ವಿದ್ಯಾರ್ಥಿಗಳ ನಡುವೆ ಜಗಳ; ಕಾಲೇಜಿಗೆ ಎರಡು ದಿನ ರಜೆ

By ಮೈಸೂರು ಸುದ್ದಿ
|
Google Oneindia Kannada News

ಮೈಸೂರು, ಮಾರ್ಚ್ 03: ಮೈಸೂರು-ನಂಜನಗೂಡು ರಸ್ತೆಯ ತಾಂಡವಪುರ ಬಳಿ ಇರುವ ಎಂಐಟಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಕೂಟ ಸಂದರ್ಭ ವಿದ್ಯಾರ್ಥಿಗಳು, ಶಿಕ್ಷಕರ ಮಧ್ಯೆ ಗಲಾಟೆ ನಡೆದಿದ್ದು, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿ ರಂಜಿತಾ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿದ್ದಕ್ಕೆ ವಿದ್ಯಾರ್ಥಿಗಳು ತಿರುಗಿಬಿದ್ದಿದ್ದು, ತರಗತಿ ಮತ್ತು ಕ್ರೀಡಾಕೂಟ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪರ ನಿಂತಿದ್ದಕ್ಕೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ನಾಗೇಂದ್ರ ಪ್ರಸಾದ್ ಗೆ ರಂಜಿತಾ ಪತಿ, ಕಾಲೇಜಿನ ಜಂಟಿ ಕಾರ್ಯದರ್ಶಿ ಚೇತನ್ ಕಪಾಳಮೋಕ್ಷ ಮಾಡಿದ್ದಾರೆ. ಎಚ್ಓಡಿ ಮೇಲಿನ ಹಲ್ಲೆ ಖಂಡಿಸಿ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗಿಳಿದರು.

 ಬೀದರ್‌ ಶಾಲೆಯಲ್ಲಿ ಮೋದಿಗೆ ಅವಮಾನ; ಬಂಧಿತರ ಭೇಟಿಯಾದ ರಿಜ್ವಾನ್ ಅರ್ಷದ್ ಬೀದರ್‌ ಶಾಲೆಯಲ್ಲಿ ಮೋದಿಗೆ ಅವಮಾನ; ಬಂಧಿತರ ಭೇಟಿಯಾದ ರಿಜ್ವಾನ್ ಅರ್ಷದ್

Students Boycotted Classes In MIT Engineering College Tandavapura

ಪತಿ, ಪತ್ನಿ ಸೇರಿಕೊಂಡು ಸಿಎಸ್ ವಿಭಾಗದ ವಿದ್ಯಾರ್ಥಿಗಳ ಮೇಲೆ ದ್ವೇಷ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರ ಭೇಟಿ ನೀಡಿದರು. ಹಲ್ಲೆ ಪ್ರಕರಣದ ಬಗ್ಗೆ ನಾಗೇಂದ್ರ ಪ್ರಸಾದ್ ನೀಡಿದ ದೂರು ಸ್ವೀಕರಿಸಿದರು. ಹಲ್ಲೆ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಅದನ್ನು ಆಡಳಿತ ಮಂಡಳಿ ಡಿಲೀಟ್ ಮಾಡಿದೆ. ಪರಿಸ್ಥಿತಿ ಹತೋಟಿ ಮೀರಿದ ಕಾರಣ ಇಂದು ಮತ್ತು ನಾಳೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

English summary
Students boycotted classrooms and games in a quarrel between teacher and students in MIT Engineering College near Tandavapura on Mysuru-Nanjangudu Road,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X