ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಂಡೋಮ್ ಉಚಿತವಾಗಿ ಕೊಡುವ ಸರ್ಕಾರ ನ್ಯಾಪ್ ಕಿನ್ ಕೊಡುತ್ತಿಲ್ಲವೇಕೆ?'

|
Google Oneindia Kannada News

ಮೈಸೂರು, ಜನವರಿ 18: ಕಾಂಡೋಮ್ ಉಚಿತವಾಗಿ ಕೊಡುವ ಸರ್ಕಾರಗಳು ನ್ಯಾಪ್ಕಿನ್ ಮೇಲೆ ಏಕೆ ತೆರಿಗೆ ವಿಧಿಸುತ್ತದೆ?. ರಾಜಕೀಯದಲ್ಲಿ ಶೇಕಡ 50ರಷ್ಟು ಮಹಿಳಾ ಮೀಸಲಾತಿ ಇದೆ. ಆದರೆ ಮಹಿಳಾ ರಾಜಕಾರಣಿಗಳಿಗೆ ಒಟ್ಟು ಮೀಸಲಾತಿ ದೊರಕುತ್ತಿಲ್ಲ. ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಉದ್ಭವಿಸಿದ್ದು ಮೈಸೂರಿನ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ.

ಈ ಬಾರಿಯ ಲಿಂಗ ಸಮಾನತೆ ವಿಚಾರದಲ್ಲಿ ನಡೆಯುತ್ತಿರುವ ನಾಟಕೋತ್ಸವದಲ್ಲಿ ಮಹಿಳಾ ಪರವಾದ ಧ್ವನಿಗಳು ಎತ್ತಿದ ಪ್ರಮುಖ ಪ್ರಶ್ನೆಗಳಿಗೆ, ಅದರಲ್ಲಿಯೂ ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೇಳಿದ ಹೇಳಿಕೆಗೆ ಇಡೀ ಸಭೆಯೇ ಉದ್ಘರಿಸಿತು. ಮಹಿಳೆಯರು ಬಳಸುವ ನ್ಯಾಪ್ಕಿನ್ ಮೇಲೆ ಸರ್ಕಾರ ತೆರಿಗೆ ವಿಧಿಸುತ್ತದೆ. ಅದೇ ಕಾಂಡೋಮನ್ನು ಉಚಿತವಾಗಿ ನೀಡುತ್ತದೆ. ಗಂಡಸರು ಕಾಂಡೋಮನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ರಾಜಾರೋಷವಾಗಿ ತಿರುಗಾಡುತ್ತಿರುತ್ತಾರೆ. ಅದೇ ಹೆಂಗಸರು ನ್ಯಾಪ್ಕಿನ್ ಬಚ್ಚಿಟ್ಟುಕೊಳ್ಳಬೇಕು. ನ್ಯಾಪ್ ಕಿನ್ ಈ ಸಮಾಜಕ್ಕೆ ಅಪಮಾನವೇ ಎಂದು ಪ್ರಶ್ನಿಸಿದರು.

Students asked the napkin tax issue in rangayana bahuroopi natakotsava

ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ನ್ಯಾಪ್ಕಿನ್ ಸೇರಿ 40 ವಸ್ತು ಬೆಲೆ ಇಳಿಕೆ?ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ನ್ಯಾಪ್ಕಿನ್ ಸೇರಿ 40 ವಸ್ತು ಬೆಲೆ ಇಳಿಕೆ?

ರಾಜಕಾರಣದಲ್ಲಿ ಮಹಿಳೆಯರು ಮೀಸಲಾತಿ ಹೋರಾಟ ಮಾಡಿದಾಗಲೇ ಲಿಂಗ ಸಮಾನತೆ ಸಾಧ್ಯ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟರು. ಸ್ತ್ರೀವಾದ ಮತ್ತು ಪುರುಷ ಪ್ರಧಾನ ಯಾವುದು ಅತಿ ಆಗಬಾರದೆಂಬ ಇನ್ನೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಾಹಿತಿ ವೈದೇಹಿ ಅವರು, ಈಗಷ್ಟೇ ಬೆಳೆಯುತ್ತಿರುವ ಸ್ತ್ರೀವಾದ ನಿಮಗೆ ಅತಿಯಾಯಿತು ಎಂದು ಅನ್ನಿಸುತ್ತಿದೆಯೇ ? ಎಂದು ಕೇಳಿದರು. ನಾವು ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಲ್ಲರನ್ನೂ ಮನುಷ್ಯನಂತೆ ಭಾವಿಸೋಣ ಎಂದು ಆಶಯ ವ್ಯಕ್ತಪಡಿಸಿದರು.

Students asked the napkin tax issue in rangayana bahuroopi natakotsava

 ರಾಜ್ಯ ಸರ್ಕಾರದ ಜನಸ್ನೇಹಿ ನ್ಯಾಪ್ ಕಿನ್ 'ಶುಚಿ' ಯೋಜನೆ ರಾಜ್ಯ ಸರ್ಕಾರದ ಜನಸ್ನೇಹಿ ನ್ಯಾಪ್ ಕಿನ್ 'ಶುಚಿ' ಯೋಜನೆ

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಮಾತನಾಡಿ, ಲಿಂಗ ಸಮಾನತೆಯಲ್ಲಿ ಪ್ರಪಂಚದ 131 ರಾಷ್ಟ್ರಗಳಲ್ಲಿ ಭಾರತ 101 ಸ್ಥಾನದಲ್ಲಿದೆ. ಜಗತ್ತಿನಲ್ಲಿ ಎಲ್ಲಾ ಧರ್ಮಶಾಸ್ತ್ರಗಳು ಮಹಿಳೆಯರಿಗೆ ಮೋಸ ಮಾಡಿದೆ. ಬುದ್ಧನ ನಂತರ ಬಸವ ಶರಣರು ಕಾನೂನಿನ ಮೂಲಕ ಮಹಿಳಾ ಸಮಾನತೆಗಾಗಿ ದುಡಿದವರು. ಆದರೆ ಎಲ್ಲಾ ಧರ್ಮಶಾಸ್ತ್ರಗಳಿಂದಲೂ ಮಹಿಳೆಯರಿಗೆ ಮೋಸವಾಗಿದೆ ಇದು ಖಂಡನೀಯ ಎಂದರು.

English summary
Two-day Bahuroopi National Seminar on ‘Gender Equality’ organised as part of the ongoing 18th Bahuroopi National Theatre Festival at Bhoomigeeta in Rangayana premises. On this time some girls shared their opinion about napkin tax issue and women participating ratio at politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X