ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೀದಿ ನಾಯಿಗಳ ಆರೈಕೆ ಕೇಂದ್ರ

By Coovercolly Indresh
|
Google Oneindia Kannada News

ಮೈಸೂರು, ಫೆಬ್ರವರಿ 10: 1950ರ ದಶಕದಲ್ಲಿ ಸಾವಿರಾರು ಕಿಲೋಮೀಟರ್ ಗಳ ದೂರದಿಂದ ಇಲ್ಲಿಗೆ ನಿರಾಶ್ರಿತರಾಗಿ ಬಂದಿರುವ ಟಿಬೆಟಿಯನ್ನರು ಇಂದು ಸಂಸಾರ, ಬದುಕು ಕಟ್ಟಿಕೊಂಡಿದ್ದಾರೆ. ಶ್ರಮ ಜೀವಿಗಳಾದ ಇವರು ತಮಗೆ ಸರ್ಕಾರ ನೀಡಿದ ಬಂಜರು ಭೂಮಿಯನ್ನೇ ಅಭಿವೃದ್ಧಿಪಡಿಸಿ, ವ್ಯಾಪಾರವನ್ನೂ ನಡೆಸಿ, ಆರ್ಥಿಕವಾಗಿಯೂ ಬೆಳವಣಿಗೆ ಹೊಂದಿದ್ದಾರೆ.

ಇಂದು ಮನುಷ್ಯರು ಖಾಯಿಲೆ ಬಿದ್ದರೆ ಆರೈಕೆ ಕೇಂದ್ರಗಳಿವೆ. ಆದರೆ ಬೀದಿ ನಾಯಿಗಳಿಗೆ ಯಾರಿದ್ದಾರೆ? ಬೀದಿ ನಾಯಿಗಳ ಈ ಪಾಡನ್ನು ಗಂಭಿರವಾಗಿಯೇ ಪರಿಗಣಿಸಿದ ಪ್ರಾಣಿ ಪ್ರೇಮಿ ಟಿಬೆಟಿಯನ್ ಗೃಹಿಣಿ ತ್ಸೆರಿಂಗ್ ಡೋಲ್ಮಾ ಎಂಬುವವರು ಬೈಲುಕೊಪ್ಪದ ಮೂರನೇ ಕ್ಯಾಂಪ್ ನ ತಮ್ಮ ಮನೆಯಲ್ಲೆ ನಾಯಿಗಳಿಗೊಂದು ಆರೈಕೆ ಕೇಂದ್ರವನ್ನು ತೆರೆದಿದ್ದಾರೆ.

ಪ್ರವಾಸಿಗರಿಗೆ ಇನ್ನೂ ತೆರೆಯದ ಬೈಲುಕೊಪ್ಪೆಯ ಗೋಲ್ಡನ್‌ ಟೆಂಪಲ್‌ ಪ್ರವಾಸಿಗರಿಗೆ ಇನ್ನೂ ತೆರೆಯದ ಬೈಲುಕೊಪ್ಪೆಯ ಗೋಲ್ಡನ್‌ ಟೆಂಪಲ್‌

ಈ ಕೇಂದ್ರದಲ್ಲಿ ಡೋಲ್ಮಾ ಅವರ ಸಹೋದರ ಕೆಲ್ಸಂಜ್ ವ್ಯವಸ್ಥಾಪಕರಾಗಿದ್ದಾರೆ. ಹಾಗೆಯೇ ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿ ಪಶು ಚಿಕಿತ್ಸಾಲಯದಲ್ಲಿ ತರಬೇತಿ ಪಡೆದ ಟೆನ್ಜಿನ್ ಎಂಬವರು ಶ್ವಾನಗಳ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಟಾಮಿ ಎಂಬ ನಾಯಿಯ ಮೇಲೆ ವಾಹನ ಹತ್ತಿದ ಪರಿಣಾಮ

ಟಾಮಿ ಎಂಬ ನಾಯಿಯ ಮೇಲೆ ವಾಹನ ಹತ್ತಿದ ಪರಿಣಾಮ

ಈ ಚಿಕಿತ್ಸಾಲಯದಲ್ಲಿರುವ 40ಕ್ಕೂ ಹೆಚ್ಚಿನ ಶ್ವಾನಗಳ ಪೈಕಿ ಹಲವು ಶ್ವಾನಗಳು ಬೇರೆ ಬೇರೆ ಕಾರಣಗಳಿಂದ ಗಾಯಗೊಂಡು ಬಂದು ಇಲ್ಲಿ ಚಿಕಿತ್ಸೆ ಪಡೆದಿವೆ. ಇನ್ನು ಕೆಲವು ಚಿಕಿತ್ಸೆ ಪಡೆಯುತ್ತಿವೆ. ಹುಣಸೂರು ತಾಲೂಕಿನ ಗುರುಪುರದ ಟಿಬೆಟಿಯನ್ ಶಿಬಿರದ ದೇಗುಲದ ಬಳಿ ಹಲವು ವರ್ಷಗಳಿಂದ ಇದ್ದ ಈ ಟಾಮಿ ಎಂಬ ನಾಯಿಯ ಮೇಲೆ ಯಾವುದೋ ವಾಹನ ಹತ್ತಿದ ಪರಿಣಾಮ ಹಿಂಬದಿಯ ಎರಡು ಕಾಲುಗಳು ಹಾಗೂ ಸೊಂಟದ ಭಾಗ ಸಂಪೂರ್ಣ ಊನಗೊಂಡಿದ್ದವು.

ಪ್ರತೀ ದಿನ ಮಧ್ಯಾಹ್ನ 2 ಗಂಟೆಗೆ ಬಿಸ್ಕತ್ ಅಥವಾ ಬ್ರೆಡ್

ಪ್ರತೀ ದಿನ ಮಧ್ಯಾಹ್ನ 2 ಗಂಟೆಗೆ ಬಿಸ್ಕತ್ ಅಥವಾ ಬ್ರೆಡ್

ನಂತರ ಅಲ್ಲಿನ ವ್ಯಕ್ತಿಯೊಬ್ಬರು ಈ ಚಿಕಿತ್ಸಾಲಯವನ್ನು ಸಂಪರ್ಕಿಸಿದಾಗ ಇಲ್ಲಿನ ವ್ಯವಸ್ಥಾಪಕ ಕೆಲ್ಸಂಜ್ ಎಂಬಾತ ಗುರುಪುರಕ್ಕೆ ತನ್ನ ವಾಹನದಲ್ಲಿ ತೆರಳಿ ಸಾವು ಬದುಕಿನೊಂದಿಗೆ ನರಳಾಡುತ್ತಿದ್ದ ಟಾಮಿಯನ್ನು ತನ್ನ ಚಿಕಿತ್ಸಾಲಯಕ್ಕೆ ತಂದು ಶುಶ್ರೂಷಕಿ ಟೆನ್ಜಿನ್ ಒಡಗೂಡಿ ವಿಶೇಷ ಆಸಕ್ತಿ ವಹಿಸಿ ಆರೈಕೆ ಮಾಡಿದರು. ಟಾಮಿಯ ಸುಲಲಿತ ನಡಿಗೆಗೆ ಹಾಗೂ ಆರೈಕೆಗೆ ಎಂದೇ ಗುಜರಾತಿನಿಂದ ರೂ. 20 ಸಾವಿರ ವ್ಯಯಿಸಿ ಗಾಲಿಯ ಯಂತ್ರವನ್ನು ತರಿಸಿ ಈ ಟಾಮಿಗೆ ಅಳವಡಿಸಿದ್ದಾರೆ. ಈ ಶ್ವಾನಗಳಿಗೆ ಬೆಳಿಗ್ಗೆ 9 ಗಂಟೆಗೆ ಪೆಡಿಗ್ರಿ, ಸಂಜೆ 5 ಗಂಟೆಗೆ ಅಕ್ಕಿಯಿಂದ ಬೇಯಿಸಿದ ಯಾವುದೇ ಖಾದ್ಯವನ್ನು ನೀಡಲಾಗುತ್ತದೆ. ಹಾಗೆಯೇ ಪ್ರತೀ ದಿನ ಮಧ್ಯಾಹ್ನ 2 ಗಂಟೆಗೆ ಬಿಸ್ಕತ್ ಅಥವಾ ಬ್ರೆಡ್ ಲಘು ಉಪಹಾರವನ್ನು ನೀಡಲಾಗುತ್ತದೆ.

ಸುಸಜ್ಜಿತವಾದ ಹಾಸಿಗೆಗಳುಳ್ಳ ಪ್ರತ್ಯೇಕ ಕಪಾಟು

ಸುಸಜ್ಜಿತವಾದ ಹಾಸಿಗೆಗಳುಳ್ಳ ಪ್ರತ್ಯೇಕ ಕಪಾಟು

ಈ ಘಟಕದಲ್ಲಿ ಹತ್ತು ದಿನಗಳಿಗೊಮ್ಮೆ ಶ್ವಾನಗಳಿಗೆಂದೇ ಸಿದ್ಧಪಡಿಸಿರುವ ಸೋಪ್ ಹಾಗೂ ಕ್ರೀಂ ಬಳಸಿ ಸ್ನಾನ ಮಾಡಿಸಲಾಗುತ್ತದೆ. ಹಾಗೆಯೇ ಚರ್ಮ ರೋಗ, ವ್ಯಾಧಿ ಇರುವ ಶ್ವಾನಗಳಿಗೆ ಪ್ರತೀ ನಾಲ್ಕು ದಿನಗಳಿಗೊಮ್ಮೆ ಸ್ನಾನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಘಟಕದಲ್ಲಿನ ಶ್ವಾನಗಳು ಮಲಗಿ ನಿದ್ರಿಸಲು ಸುಸಜ್ಜಿತವಾದ ಹಾಸಿಗೆಗಳುಳ್ಳ ಪ್ರತ್ಯೇಕ ಕಪಾಟುಗಳನ್ನು ನಿರ್ಮಿಸಲಾಗಿದೆ. ಇವುಗಳ ಆರೈಕೆಗೆ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ

ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ

ಹಾಗೆಯೇ ಈ ಘಟಕಕ್ಕೆ ಬಂದು ಶ್ವಾನಗಳನ್ನು ನೋಡಿ ಖುಷಿಪಟ್ಟು ಮನೆಗೆ ಕೊಂಡು ಹೋಗಿ ಸಾಕುವ ಆಸಕ್ತಿ ತೋರುವ ಮಂದಿಗೆ ಅವರು ಇಚ್ಛಿಸುವ ಶ್ವಾನವನ್ನು ನೀಡಲಾಗುತ್ತದೆ. ಸ್ವಾರ್ಥಿ ಮಾನವರು ತಮ್ಮ ಲಾಭಕ್ಕಾಗಿ ಮತ್ತೊಬ್ಬ ಮನುಷ್ಯನನ್ನೇ ಕೊಲ್ಲುತ್ತಾರೆ. ಆದರೆ ಸರ್ಕಾರದಿಂದ ಅಥವಾ ದಾನಿಗಳಿಂದ ಯಾವುದೇ ವಂತಿಗೆ ಪಡೆಯದೇ ಬೀದಿ ನಾಯಿಗಳಿಗಾಗಿಯೇ ತಿಂಗಳಿಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡೋಲ್ಮಾ ಅವರ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ.

ಬೀದಿ ನಾಯಿಗಳು ಎಲ್ಲಿಯಾದರೂ ಗಾಯಗೊಂಡು ತ್ರಾಸ ಪಡುತ್ತಿರುವ ಚಿತ್ರಣ ಕಂಡು ಬಂದರೆ ಯಾರೇ ಆಗಲಿ ಈ ಚಿಕಿತ್ಸಾಲಯದ ವ್ಯವಸ್ಥಾಪಕರಿಗೆ ಒಂದು ಕರೆ ಮಾಡಿ, ಆ ಅಮಾಯಕ ಜೀವವನ್ನು ಕಾಪಾಡಬಹುದು. ಬೀದಿ ನಾಯಿಗಳ ಸಂರಕ್ಷಣಾಲಯದ ಸಂಪರ್ಕ ಸಂಖ್ಯೆ 99458 04776 ಇಲ್ಲಿ ಸಂಪರ್ಕಿಸಬಹುದು.

English summary
Animal lover Tibetian housewife Tsering Dolma has opened a care center for dogs at her home in Bylukoppe Third Camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X