ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಷ್ಕರ; ಪೊಲೀಸ್ ಭದ್ರತೆಯಲ್ಲಿ ಸಾಗುತ್ತಿದ್ದ ಬಸ್‌ಗೆ ಕಲ್ಲು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 14: ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನಿಗಮಗಳ ನೌಕರರು 4 ದಿನದಿಂದ ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ. ಸೋಮವಾರ ಮುಷ್ಕರದ ನಡೆಯವೆಯೇ ಕೆಲವು ಬಸ್‌ಗಳು ಸಂಚಾರ ನಡೆಸಿವೆ.

ಸೋಮವಾರ ಮೈಸೂರಿನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಸಂಚಾರ ನಡೆಸುತ್ತಿದ್ದ ಬಸ್‌ಗೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಬಸ್ಸಿನಲ್ಲಿ 26 ಮಂದಿ ಪ್ರಯಾಣಿಕರು ಹಾಗೂ 6 ಸಾರಿಗೆ ಸಿಬ್ಬಂದಿ ಇದ್ದರು.

ದಾವಣಗೆರೆ; ಮುಷ್ಕರ, ರಸ್ತೆಗಿಳಿದಿದ್ದು 6 ಸರ್ಕಾರಿ ಬಸ್ ಮಾತ್ರ! ದಾವಣಗೆರೆ; ಮುಷ್ಕರ, ರಸ್ತೆಗಿಳಿದಿದ್ದು 6 ಸರ್ಕಾರಿ ಬಸ್ ಮಾತ್ರ!

ಪಿರಿಯಾಪಟ್ಟಣ ಸಾರಿಗೆ ಘಟಕದಿಂದ ಬೆಳಗ್ಗೆ ಒಂದು ಬಸ್ ಮಾತ್ರ ಸಂಚಾರ ಆರಂಭಿಸಿತ್ತು. ಸಾರಿಗೆ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಭದ್ರತೆಯೊಂದಿಗೆ ಈ ಬಸ್ ಪಿರಿಯಾಪಟ್ಟಣದಿಂದ ಬೆಟ್ಟದಪುರಕ್ಕೆ ಸಂಚಾರ ನಡೆಸಿತ್ತು.

ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'! ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!

Stones Pelted For KSRTC Bus Which Running With Police Escort

ಬೆಟ್ಟದಪುರದಿಂದ ಪಿರಿಯಾಪಟ್ಟಣಕ್ಕೆ ವಾಪಸ್ ಬರುವ ಸಂದರ್ಭದಲ್ಲಿ ಸೀಗೂರು ಗೇಟ್ ಬಳಿ ಹಿಂಭಾಗದ ಗಾಜಿಗೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಇದರಿಂದಾಗಿ ಬಸ್ಸಿನ ಗಾಜು ಜಖಂಗೊಂಡಿದೆ.

ಸಾರಿಗೆ ಮುಷ್ಕರ ವಾಪಸ್: ಕೆಎಸ್ಸಾರ್ಟಿಸಿ ಸಂಚಾರ ಆರಂಭ ಸಾರಿಗೆ ಮುಷ್ಕರ ವಾಪಸ್: ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಬಸ್ಸಿನಲ್ಲಿದ್ದ 26 ಮಂದಿ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಲಾಗಿದೆ. ಬಸ್‌ನಲ್ಲಿದ್ದ ಮೈಸೂರು ವಿಭಾಗೀಯ ಕಾರ್ಮಿಕ ನಿರೀಕ್ಷಕ ಸೋಮಶೇಖರ್, ಘಟಕ ವ್ಯವಸ್ಥಾಪಕ ದರ್ಶನ್ ಹಾಗೂ ಆರಕ್ಷಕ ಸಿಬ್ಬಂದಿ ಬಸ್ಸನ್ನು ಬೆಟ್ಟದಪುರ ಠಾಣೆಗೆ ತೆಗೆದುಕೊಂಡು ಹೋದರು.

4 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಅಂತ್ಯಗೊಂಡಿದೆ. ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಈ ಕುರಿತು ಘೋಷಣೆ ಮಾಡಿದರು.

ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 3 ತಿಂಗಳ ಗಡುವು ಕೊಡಲಾಗಿದೆ. ಬೇಡಿಕೆ ಈಡೇರದಿದ್ದರೆ ಪುನಃ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ಮುಷ್ಕರ ಅಂತ್ಯವಾದ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಸ್‌ಗಳ ಸಂಚಾರ ಆರಂಭವಾಗಿದೆ. ನಾಲ್ಕು ದಿನಗಳ ಕಾಲ ಬಸ್‌ಗಳ ಸಂಚಾರ ಇಲ್ಲದೆ ಜನರು ಪರದಾಟ ನಡೆಸಿದ್ದರು.

English summary
Stones pelted for KSRTC bus at Mysuru. Bus running in the time of transport employees strike with police escort on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X