ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಬಲ್ಲಹಳ್ಳಿ ಬಡಾವಣೆ ಯೋಜನೆಗೆ ಅನುಮೋದನೆ

By Kiran B Hegde
|
Google Oneindia Kannada News

ಮೈಸೂರು, ಜ. 23: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

muda

ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆಯ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ.

  • ಬಲ್ಲಹಳ್ಳಿ ಗ್ರಾಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 60 : 40 ರ ಅನುಪಾತದಲ್ಲಿ ಜಮೀನುಗಳನ್ನು ಸ್ವಾದೀನಪಡಿಸಿಕೊಂಡು ರೈತರಿಗೆ ಪರಿಹಾರಕ್ಕೆ ಬದಲಾಗಿ ಲಭ್ಯವಿರುವ ವಸತಿ ವಲಯದಲ್ಲಿ ಶೇ. 40ರಷ್ಟು ಸಂಪೂರ್ಣ ಅಭಿವೃದ್ಧಿ ಹೊಂದಿರುವ ನಿವೇಶನ ವಿಸ್ತೀರ್ಣವನ್ನು ನೀಡಲಾಗುವುದು.
  • ಬಲ್ಲಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆ ರಚಿಸಲು ಸುಮಾರು 484 ಎಕರೆ 24 ಗುಂಟೆ ವಿಸ್ತೀರ್ಣವನ್ನು ಗುರುತಿಸಿದೆ.
  • ಈ ಯೋಜನೆಗಾಗಿ 258 ಕೋಟಿ ರು. ವೆಚ್ಚದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಕ್ಕೆ ಅನುಮೋದನೆ ದೊರೆತಿದೆ.
  • ಉದ್ದೇಶಿತ ಬಡಾವಣೆಯಿಂದ ವಿವಿಧ ಅಳತೆಯ 6155 ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.
  • ಸುಮಾರು 18 ತಿಂಗಳುಗಳ ಒಳಗೆ ಬಡಾವಣೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ನಿವೇಶನ ಹಂಚುವುದು ಪ್ರಾಧಿಕಾರದ ಉದ್ದೇಶ.
  • ಆರ್.ಟಿ.ನಗರ ಬಡಾವಣೆಯಿಂದ ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆಗೆ ಸುಮಾರು 4. ಕಿ.ಮೀ. ಅಂತರವಿದೆ. ಹಾಲಿ ಇರುವ ಹೊರವರ್ತುಲ ರಸ್ತೆಯಿಂದ ಉದ್ದೇಶಿತ ಬಡಾವಣೆಗೆ 100 ಅಡಿ ಅಗಲದ ಜೋಡಿ ರಸ್ತೆ ಸಂಪರ್ಕ ಕಲ್ಪಿಸಬಹುದು.
English summary
Ballahalli lay out plan of Mysuru MUDA has been accepted in cabinet meeting of Karnataka Government. Lay out would be completed within 18 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X