ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 33,012 ಮಕ್ಕಳು ಪಾಸು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 19: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 36,128 ವಿದ್ಯಾರ್ಥಿಗಳಲ್ಲಿ 33,012 ಮಂದಿ ಉತ್ತೀರ್ಣರಾಗಿದ್ದು, ಜಿಲ್ಲೆಗೆ 'ಎ' ಗ್ರೇಡ್‌ ಲಭಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.

ಕಳೆದ ಬಾರಿ ಪರೀಕ್ಷೆ ನಡೆಸದ ಪರಿಣಾಮ ಶೇ.100ರಷ್ಟು ಫಲಿತಾಂಶ ಬಂದಿತ್ತು. 2019-20ನೇ ಸಾಲಿನಲ್ಲಿ 74.45ರಷ್ಟು ಫಲಿತಾಂಶ ಬಂದಿತ್ತು. ಜಿಲ್ಲಾವಾರು ಲೆಕ್ಕಾಚಾರದಲ್ಲಿ ಈ ಹಿಂದೆ ಮೈಸೂರು ಹಿಂದೆ ಬಿದ್ದಿತ್ತು.

ಆದರೆ ಈ ಬಾರಿ ಸುಧಾರಣೆ ಕಂಡಿದೆ. ಈ ಬಾರಿ ಜಿಲ್ಲೆಯಲ್ಲಿ 18100 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 16114 ಮಕ್ಕಳು ಪಾಸಾಗಿದ್ದಾರೆ. ಅದೇರೀತಿ 18028 ಹೆಣ್ಣುಮಕ್ಕಳು ಪರೀಕ್ಷೆ ಬರೆದಿದ್ದರು ಅದರಲ್ಲಿ 16898 ಮಕ್ಕಳು ತೇರ್ಗಡೆಯಾಗಿದ್ದಾರೆ.

SSLC Result 2022; 33,012 Students Passed In Mysuru

ಒಟ್ಟು 276 ಸರಕಾರಿ ಶಾಲೆಯಲ್ಲಿ 16,125 ಮಕ್ಕಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 14,493 ಮಕ್ಕಳು ಪಾಸಾಗಿದ್ದಾರೆ. 134 ಅನುದಾನಿತ ಶಾಲೆಗಳಿದ್ದು, 7742 ಮಕ್ಕಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 6997 ಮಕ್ಕಳು ಉತ್ತೀರ್ಣರಾಗಿದ್ದಾರೆ. 264 ಖಾಸಗಿ ಶಾಲೆಗಳಿದ್ದು, 12256 ಮಕ್ಕಳು ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 11522 ಮಕ್ಕಳು ಪಾಸಾಗಿದ್ದಾರೆ ಎಂದರು.

ಆರು ಮಕ್ಕಳಿಗೆ 625ಕ್ಕೆ 625 ಅಂಕ; ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯ 6 ಮಕ್ಕಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಅದರಲ್ಲಿ ಜಾಕಿ ಕ್ವಾಟರ್ಸ್ ಬಳಿ ಇರುವ ಸರಕಾರಿ ಆದರ್ಶ ವಿದ್ಯಾಲಯದ ಏಕ್ತಾ ಎಂ. ಜಿ. 625 ಅಂಕ ಪಡೆದು ಕೊಂಡಿದ್ದಾರೆ.

ಉಳಿದಂತೆ ಮೈಸೂರಿನ ಸದ್ವಿದ್ಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಯಶಸ್ವಿ ಅರಸ್ ಎಂ., ಅದಿತಿ ಬಿ. ಎಸ್., ಮರಿಮಲ್ಲಪ್ಪ ಹೈಸ್ಕೂಲ್ನ ಚಾರುಕೀರ್ತಿ ಕೆ., ನಂಜನಗೂಡು ಕಾರ್ಮೆಲ್ ಇಂಗ್ಲಿಷ್ ಹೈಸ್ಕೂಲ್‌ನ ದೇವಿಕಾ ಜಿ, ಬನ್ನೂರಿನ ಶ್ರೀಆದಿಚುಂಚನಗಿರಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ದಿಶಾ ಬಿ. ಎಂ. 625 ಅಂಕ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 13 ಮಕ್ಕಳು 624 ಹಾಗೂ 23 ಮಕ್ಕಳು 623 ಅಂಕಗಳನ್ನು ಪಡೆದಿದ್ದಾರೆ.

SSLC Result 2022; 33,012 Students Passed In Mysuru

ಈ ಬಾರಿ ಫಲಿತಾಂಶ ವೃದ್ಧಿಗೆ 50ಕ್ಕೂ ಹೆಚ್ಚು ಕಾಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ 8ಕ್ಕೂ ಹೆಚ್ಚು ಕಿರುಪರೀಕ್ಷೆಗಳನ್ನು ಮಾಡಲಾಗಿತ್ತು. ಸಹಶಿಕ್ಷಕರು, ಮುಖ್ಯ ಶಿಕ್ಷಕರು, ಪೋಷಕರು ಹಾಗೂ ಮಕ್ಕಳ ಶ್ರಮದಿಂದ ಈ ಫಲಿತಾಂಶ ಸಿಕ್ಕಿದೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.

"ಸೆಲ್ಪ್ ಸ್ಟಡಿ ಮಾಡುತ್ತಿದ್ದೆ. ಯಾವುದೇ ಸಂದೇಹವಿದ್ದರೂ ಶಿಕ್ಷಕರ ಬಳಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಮಧ್ಯಮ ವರ್ಗದ ಕುಟುಂಬ ನಮ್ಮದು. ಆದರೂ ಪೋಷಕರು ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡರು" ಎಂದು ಸರಕಾರಿ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ಏಕ್ತಾ ಎಂ. ಜಿ. ತಿಳಿಸಿದ್ದಾರೆ.

English summary
Karnataka SSLC exam 2022 result announced. In Mysuru 33,012 students passed in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X