ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಂಗ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ರಾಜಿನಾಮೆ

|
Google Oneindia Kannada News

ಬೆಂಗಳೂರು, ನವದೆಹಲಿ 31: ಕಾಂಗ್ರೆಸ್ ಪಕ್ಷದೊಂದಿಗಿನ ನಾಲ್ಕು ದಶಕಗಳ ಸಖ್ಯವನ್ನು ತೊರೆದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಅವರ ಬೆಂಬಲಿಗರೂ ಅನುಸರಿಸುತ್ತಿದ್ದು, ಕಾಂಗ್ರೆಸ್ ಸಖ್ಯವನ್ನು ಬಿಟ್ಟು ಕೃಷ್ಣ ಪಾಳಯಕ್ಕೆ ಒಬ್ಬೊಬ್ಬರಾಗಿ ಸೇರುತ್ತಿದ್ದಾರೆ.

ಸೋಮವಾರವಷ್ಟೇ, ಮೈಸೂರು ಕಾಂಗ್ರೆಸ್ ನ ಹಿರಿಯ ನಾಯಕರಾದ ಡಿ. ಮಾದೇಗೌಡ ಹಾಗೂ ಮೈಸೂರು ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಕರ್ನಾಟಕ ಎಸ್.ಎಂ. ಕೃಷ್ಣ ಅಭಿಮಾನಿ ಸಂಘದ ಅಧ್ಯಕ್ಷ ಪಿ. ದೇವೇಗೌಡ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದರು.

Srirangapattana Congress president Ravindra resigns

ಇಂದು ಶ್ರೀರಂಗಪಟ್ಟಣದ ಕಾಂಗ್ರೇಸ್ ಅಧ್ಯಕ್ಷ ರವೀಂದ್ರ ಶ್ರೀಕಂಠಯ್ಯ ಅವರು ರಾಜೀನಾಮೆ ನೀಡಿದ್ದಾರೆ.

ಪಕ್ಷದಲ್ಲಿ ಹಿರಿಯರನ್ನ ಕಡೆಗಣಿಸುತ್ತಿರುವ ಹಿನ್ನೆಲೆ ರಾಜೀನಾಮೆ ನೀಡುತ್ತಿರುವುದಾಗಿ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನ ರವಾನಿಸಿದ್ದಾರೆ.

ನಿನ್ನೆಯಷ್ಟೆ ಮೈಸೂರಿನ ಇಬ್ಬರು ಕಾಂಗ್ರೆಸ್ ಮುಖಂಡರಾದ ಹಿರಿಯ ಕಾಂಗ್ರೆಸ್ಸಿಗ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಿ. ಮಾದೇಗೌಡ , ಹಾಗೂ ಮೈಸೂರು ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ವಿಕ್ರಾಂತ್ ಪಿ. ದೇವೆಗೌಡ ಅವರು ರಾಜೀನಾಮೆ ಸಲ್ಲಿಸಿದ್ದರು.
ಇದೀಗ ರಾಜೀನಾಮೆ ಪರ್ವ ಮುಂದುವರೆದಿದ್ದು, ಇಂದು ರವೀಂದ್ರ ಶ್ರೀಕಂಠಯ್ಯ ಕೈ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಬಳಿಕ ಮಾತನಾಡಿರುವ ಅವರು, ಎಸ್ ಎಂ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

English summary
Srirangapattana block congress president Ravindra Shrikathaiah resigned from his post in support of former chief minister SM Krishna who left congress two days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X