ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನ ಪಂಚರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ

|
Google Oneindia Kannada News

ಮೈಸೂರು, ಮಾರ್ಚ್ 19: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀಕಂಠೇಶ್ವರಸ್ವಾಮಿಯ ಗೌತಮ ಪಂಚ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಖುತ್ವಿಕರು ದೇವಾಲಯದ ಒಳಗಿನಿಂದ ರತ್ನಖಚಿತ ಶ್ರೀಕಂಠ ಮುಡಿಕಿರೀಟ, ಮಕರ ಕಂಠಿಹಾರ, ಗಂಡ ಭೇರುಂಡ ಪದಕಗಳಿಂದ ಸಿಂಗಾರಗೊಂಡ ಉತ್ಸವಮೂರ್ತಿಯನ್ನು ದೇವಾಲಯ ಮುಂಭಾಗದ ಮಂಟಪಕ್ಕೆ ತಂದರು. ಬಳಿಕ ದೇವಾಲಯದ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು.

ಮೇಲುಕೋಟೆಯಲ್ಲಿ ಜರುಗಿದ ವೈಭವೋಪೇತ ವೈರಮುಡಿ ಉತ್ಸವಮೇಲುಕೋಟೆಯಲ್ಲಿ ಜರುಗಿದ ವೈಭವೋಪೇತ ವೈರಮುಡಿ ಉತ್ಸವ

ನಂತರ ರಕ್ಷಣೆಯ ದೃಷ್ಠಿಯಿಂದ ಉತ್ಸವಮೂರ್ತಿಗೆ ತೊಡಿಸಿದ್ದ ವಜ್ರ ಖಚಿತ ಬೆಲೆ ಬಾಳುವ ಒಡವೆ ತೆಗೆಯಲಾಯಿತು. ಜಾತ್ರೆಯಲ್ಲಿ ಧರಿಸುವ ಸರಳ ಒಡವೆ ತೊಡಿಸಿ ಗೌತಮ ರಥದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥದ ಮುಂಭಾಗ ಪುರೋಹಿತರು ವೇದಘೋಷ ಮಾಡುತ್ತ ಮುಂದೆ ಸಾಗುತ್ತಿದ್ದಂತೆ, ದೇವಾಲಯದ ಸಿಬ್ಬಂದಿ ಡಮರುಗ ಭಾರಿಸಿ ಸೂಚನೆ ನೀಡುತ್ತಿ ದ್ದಂತೆ ಭಕ್ತರು 'ಹರ ಹರ ಮಹದೇವ್' ಎಂಬ ಘೋಷಣೆಯೊಂದಿಗೆ ತೇರು ಎಳೆಯಲು ಪ್ರಾರಂಭಿಸಿದರು.

ರಸ್ತೆಯ ಇಕ್ಕೆಲದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಹಣ್ಣು- ಧವನ ಎಸೆದು ಭಕ್ತಿ ಭಾವ ಮೆರೆದರು. ಯುವಕರ ಉತ್ಸಾಹ ಮೇರೆ ಮೀರಿತ್ತು.

 ಹೂವುಗಳಿಂದ ಸಿಂಗಾರಗೊಂಡ ರಥ

ಹೂವುಗಳಿಂದ ಸಿಂಗಾರಗೊಂಡ ರಥ

ಮೊದಲಿಗೆ ಗಣಪತಿ, ಇದರ ಹಿಂದೆ ಶ್ರೀಕಂಠೇಶ್ವರಸ್ವಾಮಿ, ಮೂರನೆಯದಾಗಿ ಚಂಡಿಕೇಶ್ವರಸ್ವಾಮಿ, ನಂತರ ಸುಬ್ರಮ್ಮಣ್ಯಸ್ವಾಮಿ ಹಾಗೂ ಕೊನೆಯಲ್ಲಿ ಪಾರ್ವತಿ ಅಮ್ಮನ ರಥ ಸಾಗಿತು. ದೇವಾಲಯ ಮುಂಭಾಗದಿಂದ ಹೊರಟ ಗೌತಮ ರಥ ನಂತರ ಕೆಲ ಹೊತ್ತಿನ ಬಳಿಕ ಸ್ವಸ್ಥಾನ ಸೇರಿತು. 98 ಅಡಿ ಎತ್ತರದ 110 ಟನ್ ತೂಕದ ರಥ ವಿವಿಧ ಬಣ್ಣದ ಬಾವುಟ, ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು.

 ಬೆಳಗ್ಗೆ 9.27ಕ್ಕೆ ಜರುಗಿದ ರಥೋತ್ಸವ

ಬೆಳಗ್ಗೆ 9.27ಕ್ಕೆ ಜರುಗಿದ ರಥೋತ್ಸವ

ಬೆಳಗ್ಗೆ 6.40 ರ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಬೇಕಿತ್ತು, ದೇವಾಲಯದ ಎಡಭಾಗದಲ್ಲಿ ರಥದ ಚಕ್ರಗಳನ್ನು ಇರಿಸಲಾಗಿತ್ತು, ಬೆಳಗ್ಗೆ 6.40ರ ಶುಭ ಲಗ್ನದಲ್ಲಿ ರಥವನ್ನು ಎಳೆಯಲು ಮುಂದಾದಾಗ ಚಕ್ರ ಸ್ವಲ್ಪವೂ ಉರುಳಲಿಲ್ಲ, ಹೀಗಾಗಿ ಮುಹೂರ್ಥವನ್ನು 7 ಗಂಟೆಗೆ ಮುಂದೂಡಲಾಯಿತು, ಅಂತಿಮವಾಗಿ ಬೆಳಗ್ಗೆ 9.27ಕ್ಕೆ ರಥೋತ್ಸವ ಜರುಗಿತು.

 ದಕ್ಷಿಣಕಾಶಿ ನಂಜನಗೂಡಿನಲ್ಲಿ ಸಂಭ್ರಮದಿಂದ ನಡೆದ ಚಿಕ್ಕ ಜಾತ್ರೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ಸಂಭ್ರಮದಿಂದ ನಡೆದ ಚಿಕ್ಕ ಜಾತ್ರೆ

 ಜೆಸಿಬಿ ಯಂತ್ರಗಳ ಬಳಕೆ

ಜೆಸಿಬಿ ಯಂತ್ರಗಳ ಬಳಕೆ

ಈ ಬಾರಿಯ ರಥೋತ್ಸವದಲ್ಲಿ ರಾಜಮಾತೆ ಪ್ರಮೋದಾದೇವಿ ಭಾಗಿಯಾದ್ದರು. ನಂತರ ಪ್ರಮೋದಾದೇವಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವ ಮುನ್ನಡೆಸಲು ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಲಾಯಿತು.

 4ನೇ ಬಾರಿಗೆ ಜರುಗಿದ ರಥ

4ನೇ ಬಾರಿಗೆ ಜರುಗಿದ ರಥ

ರಥ ಎಳೆಯಲು ಕಡಿಮೆ ಗುಣಮಟ್ಟದ ಹಗ್ಗ ತಂದಿದ್ದರಿಂದ ಪದೇ ಪದೇ ತುಂಡಾಗುತ್ತಿತ್ತು. 4ನೇ ಬಾರಿಗೆ ತಂದ ಭಾರೀ ದೊಡ್ಡ ಹಗ್ಗದಿಂದಾಗಿ ರಥ ಮುಂದೆ ಜರುಗಿತು.ಮತ್ತೊಂದು ಅವಕಾಶ ತೆಗೆದುಕೊಳ್ಳಲು ಬಯಸದ ದೇವಾಲಯದ ಆಡಳಿತ ಮಂಡಳಿ ಎರಡು ಅರ್ಥ್ ಮೂವರ್ ಗಳಿಂದ ರಥನ್ನು ತಳ್ಳಿಸಲಾಯಿತು.

 ಬಂದೇಬಿಟ್ಟಿತು ಚುಂಚನಕಟ್ಟೆ ಜಾತ್ರೆ, ಮತ್ತೇಕೆ ತಡ ಹೋಗೋಣ ಬನ್ನಿ... ಬಂದೇಬಿಟ್ಟಿತು ಚುಂಚನಕಟ್ಟೆ ಜಾತ್ರೆ, ಮತ್ತೇಕೆ ತಡ ಹೋಗೋಣ ಬನ್ನಿ...

English summary
The Temple Town of Nanjangud came alive with chants in praise of Lord Srikanteshwara as the famous Dodda Jathra festival was held with traditional gaiety and fervor this morning. Lakhs of devotees witnessed the Gauthama Panchamaharathotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X