• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಟೌನ್ ಶಿಪ್; ಎಷ್ಟು ಮನೆಗಳು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 16: ಮೈಸೂರು ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಟೌನ್ ಶಿಪ್ ನಿರ್ಮಾಣವಾಗಲಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿರುವ ಇಂತಹ ಯೋಜನೆ ಈಗ ಮೈಸೂರು ನಗರಕ್ಕೂ ಬರಲಿದೆ.

ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಲಲಿತ್ರಾದಿಪುರದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜಾಗದಲ್ಲಿ ಟೌನ್‌ಶಿಪ್‌ ನಿರ್ಮಾಣದ ಸ್ಥಳವನ್ನು ಪರಿಶೀಲನೆ ಮಾಡಿದರು.

ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್

ಬೆಂಗಳೂರಿನಲ್ಲಿ ಯಶಸ್ವಿಯಾಗಿರುವ ಗುಂಪು ಮನೆ ಯೋಜನೆಯನ್ನು ಮೈಸೂರು ನಗರದಲ್ಲಿಯೂ ಜಾರಿಗೊಳಿಸುವ ಉದ್ದೇಶದಿಂದ ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ

ಎಸ್. ಟಿ. ಸೋಮಶೇಖರ್ ಮಾತನಾಡಿ, "ಬೆಂಗಳೂರು ಮಾದರಿಯಲ್ಲಿ ಮೈಸೂರಿನ ಜನರಿಗೂ ಕೈ ಗೆಟುಕುವ ದರದಲ್ಲಿ ಮನೆ ನೀಡಲು ಈ ಯೋಜನೆ ರೂಪಿಸಲಾಗುತ್ತಿದೆ" ಎಂದು ಹೇಳಿದರು.

 ಮೂಡಾ ಅಧಿಕಾರಿಗಳ ಎಡವಟ್ಟಿಗೆ ಪೇಚಿಗೆ ಸಿಲುಕಿದ ಸಚಿವ ಜಿಟಿ ದೇವೇಗೌಡ! ಮೂಡಾ ಅಧಿಕಾರಿಗಳ ಎಡವಟ್ಟಿಗೆ ಪೇಚಿಗೆ ಸಿಲುಕಿದ ಸಚಿವ ಜಿಟಿ ದೇವೇಗೌಡ!

22 ಎಕರೆ ಪ್ರದೇಶದಲ್ಲಿ ಟೌನ್ ಶಿಪ್

22 ಎಕರೆ ಪ್ರದೇಶದಲ್ಲಿ ಟೌನ್ ಶಿಪ್

ಮಾಧ್ಯಮಗಳ ಜೊತೆ ಮಾತನಾಡಿದ ಎಸ್. ಟಿ. ಸೋಮಶೇಖರ್, "ಲಲಿತಾದ್ರಿಪುರದ 22 ಎಕರೆ ಪ್ರದೇಶದಲ್ಲಿ 2500 ಮನೆ ಕಟ್ಟುವ ಗುರಿ ಹೊಂದಲಾಗಿದೆ. ಈ ಟೌನ್‌ ಶಿಪ್‌ನಲ್ಲಿ ಅಗ್ಗದ ದರದಲ್ಲಿ ಜನರಿಗೆ ಮನೆ ನೀಡಲಾಗುತ್ತದೆ. ಇಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆ ಪಡೆದು 15 ದಿನದೊಳಗೆ ಕೆಲಸ ಆರಂಭಿಸಲಾಗುವುದು" ಎಂದು ಸಚಿವರು ಹೇಳಿದರು.

85 ಸಾವಿರಕ್ಕೂ ಅಧಿಕ ಅರ್ಜಿ

85 ಸಾವಿರಕ್ಕೂ ಅಧಿಕ ಅರ್ಜಿ

"ಟೌನ್ ಶಿಪ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿದರೆ ಜನರು ಇಷ್ಟ ಪಡುತ್ತಾರೆ. ಮೂಡಾ ನಿವೇಶಕ್ಕಾಗಿ 85 ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ನಿವೇಶನ ಕೊಡದಿದ್ದರೂ, ಮನೆಗಳನ್ನು ಕೊಡಬಹುದಾಗಿದೆ. ಇದಕ್ಕಾಗಿ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗುವುದು" ಎಂದು ಸಚಿವರು ವಿವರಿಸಿದರು.

ಅಧಿಕ ಬೇಡಿಕೆ ಇದೆ

ಅಧಿಕ ಬೇಡಿಕೆ ಇದೆ

"ಬೆಂಗಳೂರು ನಗರದ ಹೊಲಗರನಹಳ್ಳಿಯಲ್ಲಿ ಗುಂಪು ಮನೆ ನಿರ್ಮಿಸಿದ್ದೇವೆ. ಆರಂಭದಲ್ಲಿ 25 ಲಕ್ಷ ರೂ.ಗೆ ಮಾರಾಟ ಆಗುತ್ತಿದ್ದ ಮನೆಗಳು, ಈಗ 75 ರಿಂದ 85 ಲಕ್ಷ ರೂ. ವರೆಗೆ ಮಾರಾಟ ಆಗುವ ಮಟ್ಟಿಗೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದೇ ಮಾದರಿಯಲ್ಲಿ ಮೈಸೂರಿನಲ್ಲಿಯೂ ಯೋಜನೆ ಜಾರಿಗೊಳಿಸಲಾಗುತ್ತದೆ" ಎಂದು ಎಸ್. ಟಿ. ಸೋಮಶೇಖರ್ ಹೇಳಿದರು.

ಸರ್ಕಾರದ ಅನುಮತಿ ಬೇಕಿದೆ

ಸರ್ಕಾರದ ಅನುಮತಿ ಬೇಕಿದೆ

ಮೂಡಾ ಅಧ್ಯಕ್ಷ ಎಚ್. ವಿ. ರಾಜೀವ್ ಮಾತನಾಡಿ, "ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗಾಗಿ ನಿರ್ಮಿಸಿರುವ ಗುಣಮಟ್ಟ ದ ಗುಂಪು ಮನೆಗಳಿಗೆ 10 ದಿನದ ಹಿಂದೆ ನಮ್ಮ ತಂಡ ಭೇಟಿ ನೀಡಿತ್ತು. ಅಲ್ಲಿರುವ ಸವಲತ್ತುಗಳನ್ನು ಗಮನಿಸಿದ್ದೇವೆ. ಅದೇ ಮಾದರಿಯಲ್ಲಿ ಮೈಸೂರಿನಲ್ಲಿಯೂ ಯೋಜನೆ ಜಾರಿಗೊಳಿಸುವ ಉದ್ದೇಶವಿದೆ. ಚಾಮುಂಡಿ ಬೆಟ್ಟದ ಅಹ್ಲಾದಕರ ವಾತವರಣ, ನೀರು, ಒಳ ಚರಂಡಿಯ ಮಾರ್ಗ ಈಗಾಗಲೇ ಇದೆ. ಯೋಜನೆಗೆ ಡಿಪಿಆರ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು" ಎಂದರು.

English summary
Town ship will come up at Mysuru city's Lalithadripura. 2500 house will construct in the 22 acre of land. Project may taken up by Mysuru Urban Development Authority (MUDA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X