ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿರೀಶ್ ಕಾರ್ನಾಡರ ನಾಟಕಗಳ ಕುರಿತು ಮೈಸೂರಿನಲ್ಲಿ ಕಾರ್ಯಾಗಾರ

|
Google Oneindia Kannada News

ಮೈಸೂರು, ಜನವರಿ 31 : ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವಾರ್ಷಿಕೋತ್ಸವ ಅಂಗವಾಗಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಫೆ.2ರಂದು ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ 'ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ, ಚರಿತ್ರೆ ಮತ್ತು ರಾಜಕೀಯ' ಕುರಿತು ಕಾರ್ಯಾಗಾರ‌ ಆಯೋಜಿಸಲಾಗಿದೆ.

ನಾನೂ ನಗರ ನಕ್ಸಲ್' ಎಂದ ಗಿರೀಶ ಕಾರ್ನಾಡ್ ವಿರುದ್ಧ ದೂರು ನಾನೂ ನಗರ ನಕ್ಸಲ್' ಎಂದ ಗಿರೀಶ ಕಾರ್ನಾಡ್ ವಿರುದ್ಧ ದೂರು

ಅಂದು ಬೆಳಿಗ್ಗೆ 9.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಉದ್ಘಾಟಿಸಲಿದ್ದು, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ದಿಕ್ಸೂಚಿ ಭಾಷಣ ಮಾಡುವರು. ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಗೌರವ ಕೋಶಾಧ್ಯಕ್ಷ ಎಸ್.ಎನ್.ಲಕ್ಷ್ಮಿನಾರಾಯಣ, ಕಾಲೇಜು ನಿರ್ವಹಣಾ ಮಂಡಳಿಯ ಅಧ್ಯಕ್ಷ ಟಿ.ನಾಗರಾಜು ಭಾಗವಹಿಸಲಿದ್ದಾರೆ..

ನಕ್ಸಲ್ ಪರವಾಗಿ ನಿಂತಿರುವ ಸಾಹಿತಿ ಗಿರೀಶ್ ಕಾರ್ನಾಡ್ ರನ್ನು ಬಂಧಿಸಿ: ಗಂಗಾಧರ ಕುಲಕರ್ಣಿ ನಕ್ಸಲ್ ಪರವಾಗಿ ನಿಂತಿರುವ ಸಾಹಿತಿ ಗಿರೀಶ್ ಕಾರ್ನಾಡ್ ರನ್ನು ಬಂಧಿಸಿ: ಗಂಗಾಧರ ಕುಲಕರ್ಣಿ

ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ತಲಾ ಒಂದು ವಿಚಾರಗೋಷ್ಠಿ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಗಿರೀಶ್ ಕಾರ್ನಾಡರ ನಾಟಕಗಳು: ಒಂದು ಚಿಂತನೆ' ಕುರಿತ ಪ್ರೊ.ಎಚ್.ಎಸ್.ಉಮೇಶ್ ಉಪನ್ಯಾಸ ನೀಡುವರು.

Special workshop on Mysuru about Girish karnad plays

ಮಧ್ಯಾಹ್ನ 12.15ಕ್ಕೆ 'ದಿ ಸ್ಟ್ರಕ್ಚರ್ ಆಫ್ ಕಾನ್ಷಿರೆಸಿ ಇನ್ ತುಘಲಕ್' ಕುರಿತು ಪ್ರೊ.ಸಿ.ನಾಗಣ್ಣ ಮತ್ತು ಮಧ್ಯಾಹ್ನ 2ಕ್ಕೆ 'ಗಿರೀಶ ಕಾರ್ನಾಡ ಕೆ ನಾಟಕೊಂ ಮೆಂ ಮಿಥಕ' ಕುರಿತು ಪ್ರೊ.ಪ್ರತಿಭಾ ಮುದಲಿಯಾರ್ ಉಪನ್ಯಾಸ ನೀಡುವರು. ಮಧ್ಯಾಹ್ನ 3.15ಕ್ಕೆ ನಡೆಯುವ ಸಂಶೋಧನಾ ಪ್ರಬಂಧ ಮಂಡನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಎಚ್.ಪಿ.ಗೀತಾ ವಹಿಸಿಕೊಳ್ಳಲಿದ್ದಾರೆ.

English summary
February 2 special workshop on girish karnad plays at Mysuru vidhya Vardaka College premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X