ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 11ರಿಂದ ಮೈಸೂರು-ದಾದರ್ ರೈಲು; ವೇಳಾಪಟ್ಟಿ

|
Google Oneindia Kannada News

ಮೈಸೂರು, ಫೆಬ್ರವರಿ 10: ಭಾರತೀಯ ರೈಲ್ವೆ ಮಹಾರಾಷ್ಟ್ರದ ದಾದರ್ ಮತ್ತು ಕರ್ನಾಟಕದ ಮೈಸೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಫೆಬ್ರವರಿ 11ರಿಂದ ಈ ರೈಲು ಸಂಚಾರ ಆರಂಭವಾಗಲಿದೆ.

ರೈಲು ಸಂಖ್ಯೆ 01035 ದಾದರ್ ಮತ್ತು ಮೈಸೂರು ನಡುವೆ ಸಂಚಾರ ನಡೆಸಲಿದೆ. ರೈಲು ಸಂಖ್ಯೆ 01036 ಮೈಸೂರು-ದಾದರ್ ನಡುವೆ ಸಂಚಾರ ನಡೆಸಲಿದೆ.

ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ? ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ?

ವೇಳಾಪಟ್ಟಿ; ಪ್ರತಿ ಗುರುವಾರ ರಾತ್ರಿ 9.30ಕ್ಕೆ ಮುಂಬೈನ ದಾದರ್‌ನಿಂದ ಹೊರಡುವ ರೈಲು ಶುಕ್ರವಾರ ರಾತ್ರಿ 9.40ಕ್ಕೆ ಮೈಸೂರು ನಗರಕ್ಕೆ ಆಗಮಿಸಲಿದೆ.

ಬಜೆಟ್; ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 100 ಕೋಟಿ ಬಜೆಟ್; ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 100 ಕೋಟಿ

 Special Train Between Dadar And Mysuru From February 11

ಮೈಸೂರು ನಗರದಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಸೋಮವಾರ ಮುಂಜಾನೆ 5.30ಕ್ಕೆ ಮುಂಬೈ ತಲುಪಲಿದೆ.

ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು

ದಾದರ್-ಮೈಸೂರು ರೈಲು ಪುಣೆ, ಸತಾರಾ, ಕರಾದ್, ಸಾಂಗ್ಲಿ, ಮೀರಜ್, ಕುಡಚಿ, ಘಟಪ್ರಭಾ, ಬೆಳಗಾವಿ, ಲೋಂಡಾ, ಅಳ್ನಾವರ್, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಕಡೂರು, ಅರಸೀಕೆರೆ, ಹಾಸನ ಮತ್ತು ಹೊಳೆನರಸೀಪುರ ನಿಲ್ದಾಣದ ಮೂಲಕ ಸಂಚಾರ ನಡೆಸಲಿವೆ.

ಈ ವಿಶೇಷ ರೈಲು 17 ಬೋಗಿಯನ್ನು ಒಳಗೊಂಡಿದೆ. 1 ಎಸಿ 1ಟೈರ್, 3 ಎಸಿ 3ಟೈರ್, 8 ಸ್ಲೀಪರ್ ಮತ್ತು 5 ಸೆಕೆಂಡ್ ಕ್ಲಾಸ್ ಬೋಗಿಯನ್ನು ಒಳಗೊಂಡಿದೆ.

English summary
Indian railways will run special train between Dadar, Maharashtra and Mysuru, Karnataka from February 11, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X