ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಚಾಮುಂಡಿ ದೇವಿಗೆ ವಿಶೇಷ ಪೂಜೆ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

Mysore Dasara 2017 : Devotees who visited Chamundi Hills speaks about problems they faced

ಮೈಸೂರು, ಸೆಪ್ಟೆಂಬರ್ 21: ದಸರಾ ಹಿನ್ನೆಲೆಯಲ್ಲಿ ಇಂದು(ಸೆ.21) ಬೆಳಗಿನ ಜಾವ 4 ಗಂಟೆಯಿಂದಲೇ ಪುರೋಹಿತರು ಚಾಮುಂಡಿ ಬೆಟ್ಟದಲ್ಲಿ ಪೂಜಾ ವಿಧಿ ವಿಧಾನಗಳ ಸಿದ್ಧತೆಯಲ್ಲಿ ಮಗ್ನರಾಗಿದ್ದರು. ಪುರೋಹಿತರು ಚಾಮುಂಡೇಶ್ವರಿ ಮೂರ್ತಿಗೆ ಸ್ನಾನ ಮಾಡಿಸಿ ದೇವಿಗೆ ರೇಷ್ಮೆ ಸೀರೆ ಉಡಿಸಿದರು. ಬೆಳ್ಳಿ ರಥದಲ್ಲಿ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕ ಭೇಟಿಗೆ ನಿರ್ಬಂಧ ಹೇರಲಾಗಿದೆ. 10 ದಿನ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಸೆ. 30 ರಂದು ಜಂಬೂಸವಾರಿ ನಡೆಯಲಿದೆ.

ವೈಭವದ ದಸರಾ ವಿಶೇಷ ಪುಟ

ಪ್ರಸಿದ್ಧ ಕವಿ ನಿಸಾರ್ ಅಹ್ಮದ್ ಅವರಿಗೆ ಸರ್ಕಾರ ನಂದಿ ಧ್ವಜದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿತು. ಡ್ರಮ್ ನ ಸಂಗೀತಕ್ಕೆ ಜನಪದ ಕಲಾವಿದರು ನೃತ್ಯ ಮಾಡಿದರು. ದಸರಾ ಕ್ರೀಡೆ, ಕುಸ್ತಿ ಮತ್ತು ಯುವ ದಸರಾ ಹೊರತುಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮ 6 ಸ್ಥಳಗಳಲ್ಲಿ ನಡೆಯಲಿದೆ.

Special Pooja for Goddess Chamundi in Mysuru Dasara

ಮೈಸೂರು ಅರಮನೆ ರಾಣಿ ಪ್ರಮೋದಾ ದೇವಿ ಒಡೆಯರ್ ಅವರ ನೇತೃತ್ವದಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ಅರಮನೆಯೊಳಗೆ ನಡೆಯುವ ಖಾಸಗಿ ದರ್ಬಾರ್ ಇನ್ನು ಕೂಡ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ರಾಣಿ ಪ್ರಮೋದಾ ದೇವಿಯವರು ಖುದ್ದಾಗಿ ಖಾಸಗಿ ದರ್ಬಾರ್ ನ ಮೇಲ್ವಿಚಾರಣೆ ನಡೆಸಿ 9 ದಿನಗಳ ಕಾಲ ದರ್ಬಾರ್ ಗೆ ಬೇಕಾದ ಸಾಂಪ್ರದಾಯಿಕ ನಿಲುವಂಗಿಗಳು, ಮೈಸೂರು ಪೇಟಾ ಮತ್ತು ಆಭರಣಗಳನ್ನು ಬಳಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ದರ್ಬಾರ್ ಸಭಾಂಗಣದಲ್ಲಿ ಚಿನ್ನದ ರಥ ಕೂಡ ಸಜ್ಜಾಗಿದೆ.

English summary
On occasion of Dasara, special worship for Goddess Chamundi in Chamundi hills is taking place from 4am on Sep 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X