ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಷಾಢ ಶುಕ್ರವಾರ ಚಾಮುಂಡಿಗೆ ನೈವೇದ್ಯಗೊಳ್ಳಲಿದೆ ಲಡ್ಡು

|
Google Oneindia Kannada News

ಮೈಸೂರು, ಜುಲೈ 4: ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಆಷಾಢ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬರೋಬ್ಬರಿ 35 ಸಾವಿರ ಲಾಡುಗಳನ್ನು ತಯಾರಿಸಲಾಗುತ್ತಿದೆ.

ನಗರದ ಜೆ.ಪಿ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಬೆಟ್ಟಕ್ಕೆ ಬರುವ ಭಕ್ತರಿಗೆ ಲಾಡು ವಿತರಿಸಲಾಗುತ್ತಿದ್ದು, ಈ ವರ್ಷವೂ ಮೊದಲ ಆಷಾಢ ಶುಕ್ರವಾರದಂದು ಲಾಡುಗಳನ್ನು ವಿತರಿಸಲಾಗುತ್ತದೆ. ಚಾಮುಂಡೇಶ್ವರಿ ಸೇವಾ ಸಮಿತಿಯು ಕಳೆದ 28 ವರ್ಷದಿಂದ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 13 ವರ್ಷದಿಂದ ಅನ್ನದಾನ ಹಾಗೂ 16 ವರ್ಷದಿಂದ ಪ್ರಸಾದ ವಿತರಿಸುತ್ತಾ ಬಂದಿದೆ. ಸುಮಾರು 2 ಲಕ್ಷ ವೆಚ್ಚದಲ್ಲಿ 30 ಮಂದಿ ಬಾಣಸಿಗರಿಂದ 35 ಸಾವಿರ ಲಾಡು ತಯಾರಿಸಲಾಗುತ್ತಿದ್ದು, ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಲಾಡು ವಿತರಣೆ ಮಾಡಲಾಗುತ್ತದೆ ಎಂದು ಸೇವಾ ಸಮಿತಿ ತಿಳಿಸಿದೆ.

 ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಪೂಜೆಗೆ ಭಾರಿ ಬಂದೋಬಸ್ತ್ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಪೂಜೆಗೆ ಭಾರಿ ಬಂದೋಬಸ್ತ್

ಲಾಡು ತಯಾರಿಕೆಗೆ 450 ಕೆ.ಜಿ ಕಡಲೆ ಹಿಟ್ಟು, 60 ಕೆ.ಜಿ ಗೋಡಂಬಿ, 10 ಕೆ.ಜಿ ಬಾದಾಮಿ, 10 ಕೆ.ಜಿ ಪಿಸ್ತಾ, 3 ಟನ್ ನಂದಿನಿ ತುಪ್ಪ, 25 ಟನ್ ಅಡುಗೆ ಎಣ್ಣೆ, 50 ಕೆಜಿ ಬುರ ಸಕ್ಕರೆ, 750 ಕೆ.ಜಿ ಸಕ್ಕರೆ, 25 ಕೆ.ಜಿ. ಖರ್ಜೂರ, 4 ಕೆ.ಜಿ ಲವಂಗ, 3 ಕೆ.ಜಿ ಏಲಕ್ಕಿ, 25 ಕೆ.ಜಿ. ದ್ರಾಕ್ಷಿಯನ್ನು ಬಳಸಲಾಗಿದೆ.

Special laddu preparation at ashada shukravara in Chamundi hills

ವಿಶೇಷ ಹೂವಿನ ಅಲಂಕಾರ: ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರಿನ ವೆಂಕಟೇಶ್ವರ ಫ್ಲವರ್ ಡೆಕೊರೇಷನ್ ಮಳಿಗೆ ಮಾಲೀಕರಾದ ಎಂ.ವೆಂಕಟೇಶ್ ಅವರು ಹೂವಿನ ಅಲಂಕಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಆಷಾಢ ಶುಕ್ರವಾರ ಹಿನ್ನೆಲೆ ಜಿಲ್ಲಾಡಳಿತದಿಂದ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸಭೆ ಆಷಾಢ ಶುಕ್ರವಾರ ಹಿನ್ನೆಲೆ ಜಿಲ್ಲಾಡಳಿತದಿಂದ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸಭೆ

ಈ ಬಾರಿ ದೇವಸ್ಥಾನದ ಹೆಬ್ಬಾಗಿಲಿನ ಬಳಿಯಿರುವ ಗಣೇಶ ವಿಗ್ರಹದಿಂದ ಗರ್ಭಗುಡಿಯವರೆಗೆ 80 ಅಡಿಯ ಉದ್ದದ ವಿವಿಧ ಬಗೆಯ ಹೂವುಗಳ ಚಪ್ಪರ ಗಮನ ಸೆಳೆಯಲಿದೆ. ಅಲ್ಲದೆ, ಗರುಡಗಂಬದ ಹತ್ತಿರ ಹೂವಿನ ಕಮಾನು ಸಿದ್ಧಗೊಳ್ಳಲಿದೆ. ಇದಕ್ಕಾಗಿ 25 ಕಾರ್ಮಿಕರು ದುಡಿಯುತ್ತಿದ್ದಾರೆ. 2 ಸಾವಿರ ಗುಲಾಬಿ, 50 ಕೆ.ಜಿ ಸೇವಂತಿಗೆ, 300 ಕೆ.ಜಿ ಚೆಂಡುಹೂವು, 150 ಕೆ.ಜಿ ಹಳದಿ ಚೆಂಡುಹೂವು, ರೆಡ್‌ ಆಸ್ಟ್ರೇಲಿಯಾ 50 ಕೆ.ಜಿ, ಬಿಳಿ ಆಸ್ಟ್ರೇಲಿಯಾ 50 ಕೆ.ಜಿ, ಬಿಳಿ ಸೇವಂತಿಗೆ 100 ಕೆ.ಜಿ ಹೂವುಗಳ ಮೂಲಕ ಸಿಂಗಾರಗೊಳಿಸಲು ಮುಂದಾಗಿದ್ದಾರೆ.

English summary
chamundeshwari seva samithi ordered to prepare special laddus for ashada shukravara in Chamundi hills. special flower decorations also planned this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X