ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ: ಇನ್ನೂ ಬಾರದ ಫಲಿತಾಂಶ, ಎರಡನೇ ಪ್ರಾಶಸ್ತ್ಯ ಮತದಲ್ಲೂ ಕಾಂಗ್ರೆಸ್ ಮುಂದೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂ. 16: ವಿಧಾನ ಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, 23 ತಾಸು ಕಳೆದರೂ ಇನ್ನೂ ಬಾರದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ. ಮೊದಲ ಪ್ರಾಶಸ್ರ್ಯದ ಮತ ಎಣಿಕೆ ಮುಗಿದು ಎರಡನೇ ಪ್ರಾಶಸ್ತ್ಯ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೂ ಸುಮಾರು 25 ಸಾವಿರ ಮತ ಎಣಿಕೆ ಬಾಕಿ ಇದೆ. ಒಂದು ವೇಳೆ ನಿಗದಿತ ಖೋಟಾ ತಲುಪದಿದ್ದರೆ ದ್ವಿತೀಯ ಸ್ಥಾನದಲ್ಲಿರುವ ಬಿಜೆಪಿಯ ಮೈ ವಿ ರವಿಶಂಕರ್ ಅವರ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಡೆಸುವ ಸಾಧ್ಯತೆ ಇದೆ. ರವಿಶಂಕರ್ 26 ಸಾವಿರಕ್ಕೂ ಅಧಿಕ ವೋಟ್ ಪಡೆದಿದ್ದಾರೆ.

ಯೋಗ ದಿನಾಚರಣೆ ವೇದಿಕೆಯಲ್ಲಿ ಯದುವೀರ್ ಗೆ ಏಕೆ ಅವಕಾಶವಿಲ್ಲಯೋಗ ದಿನಾಚರಣೆ ವೇದಿಕೆಯಲ್ಲಿ ಯದುವೀರ್ ಗೆ ಏಕೆ ಅವಕಾಶವಿಲ್ಲ

ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಅವರಿಗೆ 34,437 ಮತ, ಬಿಜೆಪಿ ಅಭ್ಯರ್ಥಿಗೆ 27,119 ಹಾಗೂ ಜೆಡಿಎಸ್ ನ ರಾಮುಗೆ 17,713 ಮತ ಲಭಿಸಿದೆ. ಎಲಿಮಿನೇಷನ್ ರೌಂಡ್ ನಲ್ಲೂ ಕಾಂಗ್ರೆಸ್ ಗೆ ಅಧಿಕ ಮತ ಸಿಕ್ಕಿದೆ. ಇದೀಗ ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

South Graduates Constituency Election: Congress Candidate Continues to Lead

ಪಕ್ಷೇತರ ಅಭ್ಯರ್ಥಿ ವಿನಯ್ ಮತ ಬಂಡಲ್ ನಲ್ಲಿ ಪ್ರಸನ್ನ ಎನ್.ಗೌಡ ಅವರ ವೋಟ್ ಕಂಡು ಕೆಂಡಾಮಂಡಲರಾದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್. ಈ ರೀತಿ ಎಷ್ಟು ಮತಗಳು ತಪ್ಪಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಂ ಸಂಚರಿಸುವ ರಸ್ತೆಗಳಲ್ಲಿ ದಸರಾ ಮಾದರಿ ದೀಪಾಲಂಕಾರ: ಸಚಿವ ಸೋಮಶೇಖರ್ಪಿಎಂ ಸಂಚರಿಸುವ ರಸ್ತೆಗಳಲ್ಲಿ ದಸರಾ ಮಾದರಿ ದೀಪಾಲಂಕಾರ: ಸಚಿವ ಸೋಮಶೇಖರ್

ಎಣಿಕೆ ಸಂದರ್ಭ ನಿಮ್ಮ‌ಏಜೆಂಟ್ ತಕರಾರು ವ್ಯಕ್ತಪಡಿಸಿಲ್ಲ, ನಮ್ಮ ಸಿಬ್ಬಂದಿಯೂ ಗಮನಹರಿಸಿಲ್ಲ. ಹಾಗಾಗಿ ಈ ಮತವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು‌ ಮೈಸೂರು ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಹೇಳಿ ಪ್ರಕ್ರಿಯೆ ಮುಂದುವರಿಸಿದರು.

South Graduates Constituency Election: Congress Candidate Continues to Lead

ಮೊದಲ ಪ್ರಸ್ತಾಸ್ತ್ಯದ ಮತ ಎಣಿಕೆ ಸಂಪೂರ್ಣ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ 5905 ಮತಗಳಿಂದ ಮುನ್ನಡೆ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ್ ಅಧಿಕೃತ ಘೋಷಿಸಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿಗೆ 32,592, ಬಿಜೆಪಿಗೆ 26,687, ಜೆಡಿಎಸ್ ಗೆ 17,072, ಪ್ರಸನ್ನ ಗೌಡ ಅವರಿಗೆ 6,470 ಪ್ರಸನ್ನ, ವಿನಯ್ ಅವರಿಗೆ 3,672, ತಿರಸ್ಕೃತ ಮತ 7307 ಆಗಿದೆ.

South Graduates Constituency Election: Congress Candidate Continues to Lead

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 19 ಮಂದಿ

Recommended Video

BRICS ಶೃಂಗಸಭೆಯಲ್ಲಿ ದಿಗ್ಗಜರ ಭೇಟಿ , ಎಲ್ಲರ ಕಣ್ಣು ಇಲ್ಲೇ | Oneindia Kannad

ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನೊಳಗೊಂಡ ಈನ ಕ್ಷೇತ್ರದಲ್ಲಿ 19 ಮಂದಿ ಕಣದಲ್ಲಿದ್ದಾರೆ. ಬಿಜೆಪಿಯ ಮೈ.ವಿ.ರವಿಶಂಕರ್, ಜೆಡಿಎಸ್ ಎಚ್.ಕೆ.ರಾಮು, ಕಾಂಗ್ರೆಸ್ ಮಧು ಜಿ.ಮಾದೇಗೌಡ ಹಾಗೂ ರೈತಸಂಘ, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌ, ರಾಮು, ಮಧು ಜಿ.ಮಾದೇಗೌಡ, ಪ್ರಸನ್ನ ಎನ್.ಗೌಡ, ಮಾಜಿ ಶಾಸಕ ವಾಟಾಳ್ ನಾಗರಾಜ್, ಎಸ್ ಡಿಪಿಐ ರಫತ್ ಉಲ್ಲಾಖಾನ್, ಆರ್ ಪಿಐ ಪಕ್ಷದಿಂದ ಎನ್.ವೀರಭದ್ರಸ್ವಾಮಿ, ಪಕ್ಷೇತರ ಅಭ್ಯರ್ಥಿ ವಿನಯ್, ಬಿಎಸ್ ಪಿಯು ಡಾ.ಬಿ.ಎಚ್.ಚನ್ನಕೇಶವಮೂರ್ತಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಒನ್ಇಂಡಿಯಾ ಸುದ್ದಿ)

English summary
Result are not out 24 hours after start of counting of votes in South Graduates constituency election. Congress candidate Madhu Made Gowda continues to lead after counting second priority votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X