ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ನಗರಿಗೂ 'ಕಲ್ಪವೃಕ್ಷ' ಕ್ಯಾಂಟೀನ್ ಭಾಗ್ಯ: ರವಿ ಡಿ.ಚನ್ನಣನವರ್

ಶಿವಮೊಗ್ಗ ಮಾದರಿಯಲ್ಲೇ, ಅರಮನೆ ನಗರಿ ಮೈಸೂರಿನಲ್ಲೂ ಕಲ್ಪವೃಕ್ಷ ಪೊಲೀಸ್ ಕ್ಯಾಂಟೀನ್ ನಿರ್ಮಿಸಲಾಗುವುದು ಎಂದು ದಕ್ಷ ಪೊಲೀಸ್ ಅಧಿಕಾರಿ ರವಿ ಡಿ.ಚೆನ್ನಣ್ಣನವರ್ 'ಒನ್ ಇಂಡಿಯಾ'ಕ್ಕೆ ತಿಳಿಸಿದ್ದಾರೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 23 : ಸಮಾಜಘಾತುಕರಿಗೆ ಸಿಂಹಸ್ವಪ್ನವಾಗಿ, ನಾಗರಿಕರ ಪಾಲಿಗೆ ಮೆಚ್ಚಿನ ಅಧಿಕಾರಿ ಎಂದೇ ಹೆಸರಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚನ್ನಣ್ಣನವರ್ ಈಗ ಶಿವಮೊಗ್ಗ ಮಾದರಿಯಲ್ಲೇ ಮೈಸೂರಿನ ಜ್ಯೋತಿನಗರದಲ್ಲಿ ಆರಕ್ಷಕ ಕಲ್ಪವೃಕ್ಷ ಕ್ಯಾಂಟೀನ್ ಆರಂಭಿಸಲು ಮುಂದಾಗಿದ್ದಾರೆ.

ಈ ಬಗ್ಗೆ 'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ರವಿ, ಅಧಿಕಾರ ಎನ್ನುವುದು ಪೇಪರ್, ಪೆನ್ನಿಗೆ ಮಾತ್ರ ಸೀಮಿತವಾಗಬಾರದು. ಸರಕಾರದ ಸೇವೆಯಲ್ಲಿ ಸಮಾಜಕ್ಕೆ ಒಳಿತಾಗುವ ಏನನ್ನಾದರೂ ಮಾಡಬೇಕು ಎಂಬ ಆಸೆ ಇದ್ದಿದ್ದರಿಂದ ಎಲ್ಲಾ ರೀತಿಯ ಸೌಲಭ್ಯವುಳ್ಳ ಕ್ಯಾಂಟೀನ್ ತೆರೆಯಲು ತಯಾರಿ ನಡೆಸಿದ್ದೇವೆ ಎಂದರು.[ಮೈಸೂರು-ಹುಬ್ಬಳ್ಳಿ ರೈಲು ಸಂಚಾರಕ್ಕೆ ಮೇ 23ಕ್ಕೆ ಚಾಲನೆ]

Soon there will be Kalpavruksha Canteen in Mysuru: Ravi D C

ಈ ವ್ಯವಸ್ಥೆ ಪೊಲೀಸ್ ಸಿಬ್ಬಂದಿ ಅಲ್ಲದೆ ಬಡವರಿಗೂ ಅನುಕೂಲವಾಗುವಂತೆ ಮಾಡಲು ಸರಕಾರದ ಸ್ವಾಯತ್ತ ಸಂಸ್ಥೆಗಳ ನೆರವನ್ನು ಪಡೆಯಲು ಬಯಸಿದ್ದೇವೆ. ಯೋಜನೆ ಜಾರಿಯಿಂದ ಜಿಲ್ಲೆಯ ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್ ಕುಟುಂಬಗಳಿಗೆ ನೆರವಾಗಲಿದೆ ಎನ್ನುತ್ತಾರೆ ಎಸ್ಪಿ ರವಿ.

5 ರೂ.ಗೆ ಸಿಗಲಿದೆ ತಿಂಡಿ:
ಉತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಸಿಬ್ಬಂದಿಗೆ ತಿಂಡಿ, ಊಟ ವ್ಯವಸ್ಥೆ ಕಲ್ಪಿಸಲು ಉತ್ತಮ ಕ್ಯಾಂಟೀನ್ ಇರುತ್ತದೆ. 5 ರೂ ನಿಂದ 10 ರೂ. ತನಕ ತಿಂಡಿ, 10 ರೂ ನಿಂದ 15 ರೂಗೆ ಊಟ, ಬೇಕರಿ ತಿನಿಸಿಸುಗಳು ಸಹ ಸಿಗಲಿವೆ. ಒಂದೇ ಕಡೆ ಪ್ರಾವಿಷನ್ ಸ್ಟೋರ್, ಜೆನಿರಿಕ್ ಮಿಡಿಸನ್ ಸ್ಟೋರ್, ಹಣ್ಣು ಮತ್ತು ತರಕಾರಿ ಮಳಿಗೆ ಎಲ್ಲವೂ ಇರುತ್ತದೆ. ಯಾವುದೇ ಲಾಭವಿಲ್ಲದೆ ಮಾರಾಟ ಮಾಡಲು ಎಪಿಎಂಸಿ ಹಾಗೂ ಹಾಪ್ ಕಾಮ್ಸ್ ಸಹಯೋಗ ಸಹ ಪಡೆಯಲಾಗಿದೆ.[ವಿಶ್ವನಾಥ್ ಹುಣಸೂರಿನ ಜೆಡಿಎಸ್ ಅಭ್ಯರ್ಥಿ: ಶಾಕ್ ನೀಡಿದ ಎಚ್ಡಿಕೆ!]

Soon there will be Kalpavruksha Canteen in Mysuru: Ravi D C

ಡಿ ಎ ಆರ್ ನಲ್ಲಿ ಕ್ಯಾಂಟೀನ್ :
ಬಡತನದಲ್ಲಿ ಹುಟ್ಟಿ, ಬೆಳೆದು, ಐಪಿಎಸ್ ಪಾಸ್ ಮಾಡಿದ ರವಿ ಡಿ.ಚನ್ನಣ್ಣನವರ್ ಬಡತನವನ್ನು ಹತ್ತಿರದಂದಿಂದ ಕಂಡವರು. ಸದಾ ಬಡವರ ಪರ ಚಿಂತನೆ ನಡೆಸುವ ಜತೆಗೆ ಸಮಾಜಘಾತುಕ ಶಕ್ತಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವವರು.
ಸಮಾಜಮುಖಿ ಕಾರ್ಯದಲ್ಲಿ ಅಗ್ರಸ್ಥಾನದಲ್ಲಿರುವ ಇವರು, ಶಿವಮೊಗ್ಗದಲ್ಲಿ ಕಲ್ಪವೃಕ್ಷ ಕ್ಯಾಂಟೀನ್ ಸಾಕಷ್ಟು ಫಲ ಕಂಡಿದ್ದರಿಂದ ಮೈಸೂರಿನ ಜ್ಯೋತಿನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದೆ. ಇದೇ ಜೂನ್ 26 ರಂದು ಕ್ಯಾಂಟೀನ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಈ ಹಿನ್ನೆಲೆ ಹೋಮ ಹವನವನ್ನು ಸಹ ಖುದ್ದು ರವಿಯವರೇ ನಿಂತು ಮಾಡಿಸಿದ್ದಾರೆ.

ಕ್ಯಾಂಟೀನ್ ಉಸ್ತುವಾರಿಯನ್ನು ರಿಸರ್ವ್ ಪೊಲೀಸ್ ಇನ್ಸ್ ಫೆಕ್ಟರ್ ಗೆ ವಹಿಸಲಾಗುತ್ತದೆ. ಉಳಿದಂತೆ ಸಂಪೂರ್ಣ ಕ್ಯಾಂಟೀನ್ ನಿರ್ವಹಣೆಗೆ ಖಾಸಗಿ ಸಿಬ್ಬಂದಿ ಇರಲಿದ್ದಾರೆ. ಸಿಸಿಟಿ ಕ್ಯಾಮರಾ ಜೋಡಣೆ ಇದ್ದು, ಈ ಕೆಲಸಕ್ಕೆ ಸಿಬ್ಬಂದಿ ನೇಮಿಸಿದಲ್ಲಿ ಬೇರೆ ಅರ್ಥ ಕಲ್ಪಿಸಿದಂತಾದೀತು ಎಂಬ ಕಾರಣಕ್ಕೆ ಈ ನಿರ್ಧಾರ ಎನ್ನುವುದು ರವಿಯವರ ಅಭಿಪ್ರಾಯ

ಹಲವರಿಗೆ ವರದಾನ :
ಜ್ಯೋತಿನಗರದ ಸುತ್ತಮುತ್ತ ಬರೋಬ್ಬರಿ ಮೂರು ಸಾವಿರ ಪೊಲೀಸ್ ಸಿಬ್ಬಂದಿ ವಾಸಿಸುತ್ತಿದ್ದು ಇದು ಅವರಿಗೆ ವರದಾನವಾಗುವುದರಲ್ಲಿ ಸಂಶಯವೇ ಇಲ್ಲ. ಜಿಲ್ಲಾ ಪೊಲೀಸ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಿಎಆರ್ ಸೇರಿದಂತೆ ಇತರ ಪೊಲೀಸರು ವಾಸ ಮಾಡುತ್ತಿರುವುದು ಇಲ್ಲಿಯೇ. ಹಾಗಾಗಿ ರವಿಯರ ಯೋಜನೆ ಗೆಲ್ಲುವುದುರಲ್ಲಿ ಸಂಶಯವೇ ಬೇಡ.

English summary
The honest police officer Ravi D.Channannavar has decided to start a police canteen in palace city Mysuru. The canteen will be like Kalpavruksha canteen in shivamogga, the IPS officer told to Oneindia in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X