• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಯಿಗೆ ಸ್ಕೂಟರ್ ನಲ್ಲೇ ತೀರ್ಥಯಾತ್ರೆ ಮಾಡಿಸಿದ ಆಧುನಿಕ ಶ್ರವಣಕುಮಾರ

By Yashaswini
|

ಮೈಸೂರು, ಆಗಸ್ಟ್ 28 :ಇದು 21 ನೇ ಶತಮಾನ. ಅನೇಕ ಮಕ್ಕಳು ತಂದೆ -ತಾಯಿಯನ್ನು ನೋಡಿಕೊಳ್ಳುವುದಿರಲಿ ಫೋನ್ ಮಾಡಿ ಹೇಗಿದ್ದೀರಿ? ಎಂದು ಕೇಳುವ ಸೌಜನ್ಯವೂ ಇಲ್ಲದವರು. ಪೋಷಕರ ಆರೋಗ್ಯದಲ್ಲಿ ಏರು -ಪೇರಾದರಂತೂ ಕೇಳಲೇಬೇಡಿ. ವೃದ್ಧಾಶ್ರಮಕ್ಕೋ, ಆಸ್ಪತ್ರೆಗೊ ಸೇರಿಸಿ ಕೈತೊಳೆದುಕೊಳ್ಳುತ್ತಾರೆ.

ಈಗಿನ ಕಾಲದಲ್ಲಿ ಅವರ ಸೇವೆ ಮಾಡುವವರು ಸಿಗುವುದು ಬೆರಳೆಣಿಕೆ ಮಂದಿಯಷ್ಟೇ. ಹಣವಿದ್ದರೂ ಜವಾಬ್ದಾರಿ ತೆಗೆದುಕೊಳ್ಳುವ ಗೋಜಿಗೆ ಮಕ್ಕಳು ಹೋಗುವುದಿಲ್ಲ. ಆದರೆ ಇಲ್ಲೊಬ್ಬ ತನ್ನ ತಾಯಿಯ ಆಸೆಯನ್ನು ಪೂರೈಸುವ ಸಲುವಾಗಿ ಕೆಲಸವನ್ನೇ ಬಿಟ್ಟು, ತಂದೆಯ ಬಜಾಜ್ ಚೇತಕ್ ಗಾಡಿಯಲ್ಲೇ 70ರ ಹರೆಯದ ತಾಯಿಗೆ ಇಡೀ ಭಾರತವನ್ನು ತೋರಿಸಿದ್ದಾನೆ.

ಹತ್ತು ವರ್ಷದ ಕನಸು ನನಸಾಗಿ ನಾನು ಮೊದಲ ಕಾರು ಖರೀದಿಸಿದ ಆ ಕ್ಷಣ

ಹೌದು. ನಾವೆಲ್ಲ ಶ್ರವಣ ಕುಮಾರನ ಕಥೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಕೈಲಾಗದ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತೊಯ್ದು ಆತ ಅವರಿಗೆ ತೀರ್ಥಯಾತ್ರೆ ಮಾಡಿಸಿ ಸೇವೆ ಮಾಡಿದ ಎಂಬ ಕಥೆಯನ್ನು ಪೋಷಕರೋ, ಅಜ್ಜ -ಅಜ್ಜಿ, ಶಿಕ್ಷಕರು ಹೇಳಿರುತ್ತಾರೆ.

ಅದೇ ತೆರನಾದ ಕಥೆಯೊಂದು ಆಧುನಿಕ ಗ್ಯಾಜೆಟ್ ಯುಗದಲ್ಲೂ ಮರುಕಳಿಸಿದೆ. ತನ್ನ ತಾಯಿಯ ಬಹು ದಿನಗಳ ಹಂಬಲವನ್ನು ಈಡೇರಿಸಲು ಮಗನೊಬ್ಬ 20 ವರುಷದ ತಂದೆಯ ಸ್ಕೂಟರ್ ಏರಿ ಬರೋಬ್ಬರಿ 29 ಸಾವಿರ ಕಿ.ಮೀ. ಕ್ರಮಿಸಿ ದೇವಸ್ಥಾನಗಳ ದರ್ಶನ ಮಾಡಿಸಿದ್ದಾನೆ.

ಮೈಸೂರು: ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಾಯಿ

ಅವರ ಹೆಸರು ಡಿ. ಕೃಷ್ಣಕುಮಾರ್. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣಕುಮಾರ್ ತಂದೆ ದಕ್ಷಿಣಮೂರ್ತಿ ಸಾವನ್ನಪ್ಪಿ ನಾಲ್ಕು ವರ್ಷವಾಗಿದ್ದು, ಅವರ ತಾಯಿ ಮೈಸೂರಿನಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ.

ಒಂದು ಬಾರಿ ಮೈಸೂರಿಗೆ ಹೋಗಿದ್ದ ಕೃಷ್ಣಕುಮಾರ್ ಬಳಿ ಹಂಪಿ, ಹಳೇಬಿಡು ನೋಡಬೇಕು ಎಂದು ತಮ್ಮ ಆಸೆಯನ್ನು ತಾಯಿ ಹೇಳಿದ್ದಾರೆ. ಆಗಲೇ ಅವರು ತನ್ನ ತಾಯಿಯನ್ನು ಹಳೇಬಿಡು ಮಾತ್ರವಲ್ಲ, ದೇಶಾದ್ಯಂತ ಸುತ್ತಾಡಿಸಬೇಕು ಎಂದು ನಿರ್ಧಾರಕ್ಕೆ ಬಂದು ಬಿಟ್ಟರು.

ಮಗನ ನೆನಪಿಗೆ ಹಚ್ಚೆ ಹಾಕಿಸಿಕೊಂಡು ಮತ್ತೆ ಸುದ್ದಿಯಾದ್ರು ಕಮಲಾಕರ ಮೇಸ್ತ

ಕೃಷ್ಣಕುಮಾರ್ ತಮ್ಮ ತಾಯಿಯನ್ನು ಕರೆದುಕೊಂಡು ಯಾವ ಪುಣ್ಯ ಕ್ಷೇತ್ರಗಳಿಗೆ ಹೋಗಿದ್ದರು? ತಾಯಿಯ ಅನುಭವ ಹೇಗಿತ್ತು? ಎಂಬ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ....

 ತಂದೆಯ ನೆಚ್ಚಿನ ವಾಹನದಲ್ಲಿ

ತಂದೆಯ ನೆಚ್ಚಿನ ವಾಹನದಲ್ಲಿ

ತಾಯಿಯನ್ನು ಕರೆದುಕೊಂಡು ಹೋಗಲು ಕೃಷ್ಣಕುಮಾರ್ ಬಳಸಿಕೊಂಡಿದ್ದು ತಮ್ಮ ತಂದೆಯ ಕಾಲದ 20 ವರ್ಷದ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಅನ್ನು. ಈ ಸ್ಕೂಟರ್ ಅನ್ನು ಅವರು ಬಳಸಿಕೊಳ್ಳಲು ಕಾರಣವೂ ಇದೆ.

ಇದು ತಂದೆಯವರು ಇಷ್ಟಪಟ್ಟು ತೆಗೆಸಿಕೊಟ್ಟ ವಾಹನವಾಗಿದ್ದು, ಅದರಲ್ಲೇ ತೀರ್ಥಯಾತ್ರೆ ಮಾಡಿದರೆ ತಾಯಿ ಮಾತ್ರವಲ್ಲ ತಂದೆಯ ಆತ್ಮಕ್ಕೂ ಸಂತೋಷ ಸಿಗುತ್ತದೆ ಎಂಬುದು ಅವರ ಆಲೋಚನೆ. ಅದಕ್ಕೆ ಹಿಂದೆ ಮುಂದೆ ಯೋಚನೆ ಮಾಡದೆ ಕಳೆದ ಜನವರಿ. 16 ರಿಂದಲೇ ತಾಯಿಯೊಂದಿಗೆ ಊರು ಬಿಟ್ಟಿದ್ದಾರೆ.

 ಯಾವುದೇ ಹೋಟೆಲ್ ಗಳಲ್ಲಿ ಉಳಿಯಲಿಲ್ಲ

ಯಾವುದೇ ಹೋಟೆಲ್ ಗಳಲ್ಲಿ ಉಳಿಯಲಿಲ್ಲ

ಏಳು ತಿಂಗಳು, ದಕ್ಷಿಣ ವಿಂಧ್ಯ ಭಾಗದಲ್ಲಿನ ಬಹುತೇಕ ಎಲ್ಲಾ ರಾಜ್ಯಗಳ ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ದು ತೋರಿಸಿದ್ದಾರೆ. ಇದೇ ವೇಳೆ ಆಶ್ರಯಕ್ಕಾಗಿ ಯಾವುದೇ ಹೋಟೆಲ್ ಅಥವಾ ವಸತಿ ಗೃಹಗಳಲ್ಲಿ ಉಳಿಯದೆ ಮಠಗಳು, ದೇವಸ್ಥಾನಗಳಲ್ಲಿ ಉಳಿದುಕೊಳ್ಳುವ ಮೂಲಕ ತೀರ್ಥಯಾತ್ರೆ ಪೂರ್ಣಗೊಳಿಸಿದ್ದಾರೆ.

ಮಾತೃ ಸೇವಾ ಸಂಕಲ್ಪ ಹೆಸರಿನಲ್ಲಿ ಯಾತ್ರೆ ಆರಂಭಿಸಿದ ಇವರು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮತ್ತು ಮಹಾರಾಷ್ಟ್ರಗಳ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಿ ಬಂದಿದ್ದಾರೆ.

 ಕೃಷ್ಣಕುಮಾರ್ ಅನಿಸಿಕೆ

ಕೃಷ್ಣಕುಮಾರ್ ಅನಿಸಿಕೆ

ಬೆಂಗಳೂರಿಗೆ ವಾಪಾಸ್ಸಾಗುವಾಗ ಎಲ್ಲಿಯೂ ಸ್ಕೂಟರ್ ತೊಂದರೆ ಕೊಡಲಿಲ್ಲ. ಆದರೆ 16 ಸಾವಿರ ಕಿಲೋ ಮೀಟರ್ ನಂತರ ಪಂಚರ್ ಆಗಿತ್ತು. ಪ್ರವಾಸದ ಸಂದರ್ಭ ತಾಯಿ ಆಯಾಸಗೊಳ್ಳದಿರಲಿ ಎಂಬ ಕಾರಣದಿಂದ ಸೀಟ್ ಮೇಲೆ ದಿಂಬನ್ನು ಹಾಕಿ ವ್ಯವಸ್ಥೆ ಮಾಡಿದೆ ಎನ್ನುತ್ತಾರೆ ಕೃಷ್ಣ ಕುಮಾರ್.

ಒಂದು ವರ್ಷದ ಹಿಂದೆ ತಾಯಿ-ಮಗ ಬೆಂಗಳೂರಿನಿಂದ ಕಾಶ್ಮೀರದವರೆಗೂ ಪ್ರವಾಸ ಕೈಗೊಂಡಿದ್ದರು. ಆಗ ಕಾಶ್ಮೀರಿಪುರ ನಿವಾಸ ದೇವಾಲಯ ಮತ್ತಿತರ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದರು.

ಸ್ಕೂಟರ್ ಹಳೆಯದಾದರೂ ಅದರಲ್ಲಿ ಹಣ್ಣು, ಅಕ್ಕಿ, ಚಾಕು, ರೈನ್ ಕೋಟ್, ಮತ್ತಿತರ ವಸ್ತುಗಳನ್ನು ಇಟ್ಟುಕೊಳ್ಳಬಹುದು. ದೇವಾಲಯ ನೋಡುತ್ತಿದ್ದರೆ ಹೊಟ್ಟೆ ಹಸಿವು ಗೊತ್ತಾಗುತ್ತಿರಲಿಲ್ಲ. ನಮ್ಮ ಬಗ್ಗೆ ತಿಳಿದವರು ಮನೆಗೆ ಆಹ್ವಾನಿಸುತ್ತಿದ್ದರು ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

 ಮಗನನ್ನು ಕೊಂಡಾಡಿದ ತಾಯಿ

ಮಗನನ್ನು ಕೊಂಡಾಡಿದ ತಾಯಿ

ಇನ್ನು ಮಳೆಯಿಂದ ರಕ್ಷಿಸಿಕೊಳ್ಳಲು ರೇನ್ ಕೋಟ್‌, ಚಳಿಗೆ ಸ್ವೆಟರ್ ಇತ್ಯಾದಿಗಳಿವೆ. ಹಳೆಯ ಸ್ಕೂಟರ್ ಆದರೂ ಒಂದು ದಿನವೂ ಸಮಸ್ಯೆ ನೀಡಿಲ್ಲ ಎನ್ನುವುದು ಕೃಷ್ಣಕುಮಾರ್ ಅವರ ಸಮಾಧಾನ.

ಮಗನ ಸಾಹಸಪ್ರವೃತ್ತಿಗೆ ಬೆನ್ನುಲುಬಾಗಿರುವ ಚೂಡಾರತ್ನ, ಈ ತೆರನಾದ ಮಗ ಎಲ್ಲರಿಗೂ ಸಿಗಲಿ. ನನ್ನ ಎಲ್ಲಾ ಆಸೆಯನ್ನು ನನ್ನ ಪತಿಯೇ ಪೂರೈಸಿಲ್ಲ. ಆದರೆ ನನ್ನ ಮಗ ಅವೆಲ್ಲವನ್ನೂ ಪೂರೈಸುತ್ತಿರುವುದು ಪೂರ್ವಜನ್ಮದ ಪುಣ್ಯ ಎನ್ನುತ್ತಾರೆ..

ಒಟ್ಟಾರೆ ನಮ್ಮ ಮಕ್ಕಳು ತಂದೆ - ತಾಯಿ ಮನೆಯಲ್ಲಿದ್ದರೆ ನೋಡಿಕೊಳ್ಳುವುದಿರಲಿ, ಮಾತನಾಡಿಸುವುದೇ ಕಷ್ಟವಿರುವ ಇಂದಿನ ಸ್ಥಿತಿಯಲ್ಲಿ ಇಂತಹ ಸೇವಾಮನೋಭಾವವುಳ್ಳ ಮಕ್ಕಳು ಸಂಖ್ಯೆ ನೂರ್ಮಡಿಗೊಳ್ಳಲಿ

English summary
His name is D. Krishnakumar. Working in a private company. He took a Father scooter to fulfill his mother long-term desire and made a visit to the holy places
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more