ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರ: 150 ಎಕರೆಯಲ್ಲಿ ತಲೆ ಎತ್ತುತ್ತಿದೆ ಸೋಲಾರ್ ಪ್ಲಾಂಟ್!

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು: ಮರಗಳನ್ನು ಧರೆಗುರುಳಿಸಿ, ಕೃಷಿಗೆ ನೀರುಣಿಸುವ ನೂರಾರು ತೋಡುಗಾಲುವೆಗಳನ್ನು ಮುಚ್ಚಿ ಅಪಾಯಕಾರಿ ಸೋಲಾರ್ ಪ್ಲಾಂಟ್ ನಿರ್ಮಾಣ ಕಾಮಗಾರಿ ಮೈಸೂರಿನ ತಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆಯುತ್ತಿದೆ.

ಪಾವಗಡ: ಭರದಿಂದ ಸಾಗಿದೆ ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣಪಾವಗಡ: ಭರದಿಂದ ಸಾಗಿದೆ ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ

ತಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಬಳಿ ಫಲವತ್ತಾದ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಈ ಸೋಲಾರ್ ಪ್ಲಾಂಟೇಶನ್ ತಲೆ ಎತ್ತುತ್ತಿದ್ದು, ಜನ ಜಾನುವಾರುಗಳಿಗೆ ಮುಂದೊಂದು ದಿನ ಕಂಟಕ ಎದುರಾಗಲಿದೆ ಎಂಬ ಭಯ ಈ ವ್ಯಾಪ್ತಿಯ ಜನರನ್ನು ಕಾಡುತ್ತಿದೆ.

Solar Plantation Is Heads Up In T.Narasipura , Mysuru

ಖಾಸಗಿ ಕಂಪನಿ ಇದನ್ನು ನಿರ್ಮಾಣ ಮಾಡುತ್ತಿದ್ದು, 150 ಎಕರೆಯನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದೆ. ಇಲ್ಲಿ ನೂರಾರು ಮರಗಳು ಹನನವಾಗಿ ನೀರಿನ ಆಸರೆಯಾಗಿದ್ದ ತೋಡುಗಾಲುವೆಗಳನ್ನು ಮುಚ್ಚುತ್ತಿದ್ದರೂ ಸಂಬಂಧಿಸಿದವರು ಯಾವುದೇ ರೀತಿಯ ಚಕಾರ ಎತ್ತುತ್ತಿಲ್ಲ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.

Solar Plantation Is Heads Up In T.Narasipura , Mysuru

ಇದು ಕಾವೇರಿ ಅಚ್ಚುಕಟ್ಟು ಪ್ರದೇವಾಗಿದ್ದು, ಇಲ್ಲಿ ಭತ್ತ, ರಾಗಿ, ಕಬ್ಬು ಹಾಗೂ ದ್ವಿದಳ ಧಾನ್ಯಗಳನ್ನೇ ಹೆಚ್ಚಾಗಿ ಬೆಳೆಯುವ ಕೃಷಿ ಭೂಮಿ ಸೋಲಾರ್ ವಿದ್ಯುತ್ ಪ್ಲಾಂಟೇಷನ್ ಆಗಿ ಪರಿವರ್ತಿತವಾಗುತ್ತಿರುವುದನ್ನು ಜನ ನೋಡಿಕೊಂಡು ಸುಮ್ಮನಾಗುತ್ತಿದ್ದಾರೆ.

ಉಡುಪಿಯ ಅಮಾಸೆಬೈಲು ದೇಶದ ಮೊದಲ ಸೋಲಾರ್ ಗ್ರಾಮಉಡುಪಿಯ ಅಮಾಸೆಬೈಲು ದೇಶದ ಮೊದಲ ಸೋಲಾರ್ ಗ್ರಾಮ

ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಎಕರೆ ಭೂಮಿಗೆ 30 ವರ್ಷಕ್ಕೆ ವಾರ್ಷಿಕವಾಗಿ 30ಸಾವಿರ ರೂಗಳ ಬಾಡಿಗೆ ಹಣವನ್ನು ನೀಡಿ ಕುಟುಂಬದ ಒಬ್ಬನಿಗೆ ಉದ್ಯೋಗ ನೀಡುವ ಒಪ್ಪಂದವನ್ನು ಮಾಡಿಕೊಂಡು ಭೂಮಿಯನ್ನು ಪಡೆಯಲಾಗಿದೆ. ಆದರೆ ಹೊರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿರುವುದು ಕಂಡು ಬರುತ್ತಿದೆ.

English summary
Construction of solar plantation is taking place in Akkur village in T.Narasipur Taluk of Mysore. The private company is building it and uses 150 acres for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X