ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮಗೂ ಜಾದೂ ಕಲಿಸೋಕೆ ಸಿದ್ಧವಾಗಿದ್ದಾರೆ ಉದಯ್ ಜಾದೂಗಾರ್!

By Yashaswini
|
Google Oneindia Kannada News

ಮೈಸೂರು, ಜುಲೈ 5 : ರೋಮಾಂಚನಗೊಳಿಸುವ ಜಾದುವಿನಿಂದಲೇ ಇಡೀ ವಿಶ್ವವನ್ನೇ ಸುತ್ತಿದ ನೈಜ ಮಾಂತ್ರಿಕರಿ ಉದಯ್ ಜಾದೂಗಾರ್ ರವರ ಬಗ್ಗೆ ಕೇಳದವರು ತೀರಾ ಕಡಿಮೆ.

ಈಗ ಅವರನ್ನು ನೆನಪಿಸಿಕೊಳ್ಳುತ್ತಿರುವುದಕ್ಕೂ ಕಾರಣವಿದೆ. ಮಾಂತ್ರಿಕತೆಯಲ್ಲೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಇವರು ಸದ್ಯ ಸಮಾಜಸೇವೆಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆ ಹಾಗೂ ಹಳ್ಳಿ -ಹಳ್ಳಿಗೂ ತೆರಳಿ ಉಚಿತ ಶೋಗಳನ್ನು ನಡೆಸುವ ವಿನೂತನ ಕಾರ್ಯಕ್ರಮ ಇದಾಗಿದೆ.

ತಂಬಾಕಿನಿಂದಾಗುವ ಹಾನಿಯ ಜಾಗೃತಿಗಾಗಿ ಕಿದ್ವಾಯಿಯಲ್ಲಿ ಜಾದೂ
ಇನ್ನೊಬ್ಬರಿಗೆ ವಿದ್ಯೆ ಕಲಿಸುವುದಕ್ಕೆ, ಅವರ ನೋವುಗಳನ್ನೆಲ್ಲಾ ನೀಗಿಸಿ ಮನವನ್ನು ರಂಜಿಸುವುದಕ್ಕೂ ಹಣ ಮುಖ್ಯ. ಆದರೆ ಇವರು ಅದ್ಯಾವುದರ ನಿರೀಕ್ಷೆಯೂ ಇಲ್ಲದೆ, ತಮ್ಮ ಅಮೂಲ್ಯ ವಿದ್ಯೆಯನ್ನು ಉಚಿತವಾಗಿ ಹಂಚುವ ಕಾಯಕ ಕೈಗೊಂಡಿದ್ದಾರೆ.

ಶಿವಮೊಗ್ಗ ಮೂಲದ ಜಾದೂಗಾರ, ಶ್ಯಾಡೋ ಪ್ಲೇ, ಮಾತನಾಡುವ ಗೊಂಬೆ ಮೂಲಕ ಜನರಿಗೆ ಚಿರಪರಿಚಿತರಾಗಿರುವ ಕಲಾವಿದ ಉದಯ್ , ಕರೆದ ಸ್ಥಳಗಳಿಗೆ ತಮ್ಮ ಖರ್ಚಿನಲ್ಲೇ ಹೋಗುವ ಇವರು ತಮಗೆ ಗೊತ್ತಿರುವ ಬಹುತೇಕ ವಿದ್ಯೆಗಳನ್ನೆಲ್ಲಾ ಉಚಿತವಾಗಿ ಪ್ರದರ್ಶಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಲ್ಲದೇ, ಆಸಕ್ತರಿಗೆ ಸ್ಥಳದಲ್ಲೇ ಜಾದೂ ವಿದ್ಯೆಯನ್ನೂ ಕಲಿಸುತ್ತಿದ್ದಾರೆ.

ವಿಶೇಷ ಲೇಖನ : ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್ವಿಶೇಷ ಲೇಖನ : ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್

ಹೌದು, ಇದೆಲ್ಲವನ್ನು ಕೇಳಲು ಆಶ್ಚರ್ಯವಾದರೂ ನಂಬಲೇಬೇಕು. ಈಗಾಗಲೇ ಮಣಿಪಾಲ್, ಉಡುಪಿ, ಬೆಂಗಳೂರಿನ ವಿವಿಧ ಶಾಲಾ ಕಾಲೇಜು, ಸಂಘಸಂಸ್ಥೆಗಳಲ್ಲಿ ಜಾದೂ, ಜೋಕ್ಸ್, ಸ್ಟ್ಯಾಂಡಪ್ ಕಾಮಿಡಿ, ಮಾತನಾಡುವ ಗೊಂಬೆ, ಲೆಕ್ಕ ಮತ್ತಿತರೆ ವಿದ್ಯೆಗಳನ್ನು ಪ್ರದರ್ಶಿಸಿ ಮೋಡಿ ಮಾಡಿದ್ದಾರೆ.

ಆತ್ಮತೃಪ್ತಿಗಾಗಿ ಕೆಲಸ

ಆತ್ಮತೃಪ್ತಿಗಾಗಿ ಕೆಲಸ

ಇದುವರೆಗೂ ವಿದೇಶದಲ್ಲೂ ಸೇರಿದಂತೆ 9 ಸಾವಿರಕ್ಕೂ ಹೆಚ್ಚು ಶೋಗಳನ್ನು ನೀಡಿರುವ ಉದಯ್, ತಮ್ಮ ಸಂತೃಪ್ತಿಗಾಗಿ ಮತ್ತೊಬ್ಬರನ್ನು ನಗಿಸಲು ಹಾಗೂ ಜಾದೂ ಕುರಿತಾದ ಅರಿವು ಮೂಡಿಸಲು ಈ ಕೈಂಕರ್ಯದಲ್ಲಿ ತೊಡಗಿದ್ದಾರೆ. ಒಂದು ಕಾಲದಲ್ಲಿ ಉದಯ್ ಜಾದೂಗಾರ್ ಅವರ ಜಾದೂ ಪ್ರದರ್ಶನವಿದೆ ಎಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು. ಇವರನ್ನು ಬುಕ್ ಮಾಡಲು ಸಂಘ ಸಂಸ್ಥೆಗಳು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿತ್ತು.

ಬಹುಮುಖ ಪ್ರತಿಭೆ

ಬಹುಮುಖ ಪ್ರತಿಭೆ

ಹೊಸ ಹೊಸ ಜಾದೂ ಕಲೆಗಳ ಆವಿಷ್ಕಾರ ಮಾಡಿದ್ದಲ್ಲದೆ, ಶ್ಯಾಡೋ ಪ್ಲೇ, ಮಾತನಾಡುವ ಗೊಂಬೆ, ಚೆಸ್ ಪ್ಲೇಯರ್, ಸ್ವಿಮ್ಮರ್, ಕುಕ್ ಅಲ್ಲದೆ, ಜಾದೂ, ಜೋಕ್ಸ್ ಕುರಿತ 5 ಪುಸ್ತಕಗಳು, 'ಗಳಿಸುವುದು ಹೇಗೆ?' ಪುಸ್ತಕ ಸೇರಿದಂತೆ 'ದರೋಡೆ' ಎಂಬ ಕನ್ನಡ ಸಿನಿಮಾವನ್ನು ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಮಾನವೀಯ ನೆಲೆಯಲ್ಲಿ ಪ್ರದರ್ಶನ

ಮಾನವೀಯ ನೆಲೆಯಲ್ಲಿ ಪ್ರದರ್ಶನ

2 ದಿನಗಳಿಂದ ಮೈಸೂರಿನಲ್ಲಿರುವ ಉದಯ್ ಜಾದೂಗಾರ್ ಅವರು ಕೇವಲ ನಮಗೆ ಮಾತ್ರವಲ್ಲ ಬುದ್ಧಿಮಾಂದ್ಯ ಮಕ್ಕಳಿಗೂ ತಮ್ಮ ಕಲೆಯನ್ನು ಪ್ರದರ್ಶಿಸುವ ಚಾಣಾಕ್ಷರು. ಹೌದು ನಿನ್ನೆ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ 90ನಿಮಿಷಗಳ ಕಾಲ ತಮ್ಮ ಶೋ ಪ್ರದರ್ಶನ ನೀಡುವ ಮೂಲಕ ಅಲ್ಲಿನ ಮಕ್ಕಳನ್ನು ಮನರಂಜಿಸಿದ್ದಾರೆ.

ಫ್ರಿ ಶೋ ಅಗತ್ಯವಿದ್ದಲ್ಲಿ ಸಂಪರ್ಕಿಸಿ

ಫ್ರಿ ಶೋ ಅಗತ್ಯವಿದ್ದಲ್ಲಿ ಸಂಪರ್ಕಿಸಿ

ಉದಯ್ ಜಾದೂಗಾರ್ ಅವರ ಜಾದೂ, ಜೋಕ್ಸ್, ಮಾತನಾಡುವ ಗೊಂಬೆ, ಸ್ಟ್ಯಾಂಡಪ್ ಕಾಮಿಡಿಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಆಸಕ್ತ ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮ, ವೃದ್ಧಾಶಮ ಮತ್ತಿತರೆ ಸಾಮೂಹಿಕ ಸಂಸ್ಥೆಗಳು ಅವರನ್ನು ಸಂಪರ್ಕಿಸಬಹುದು. ಆಸಕ್ತರು 1 ಟೇಬಲ್ ಮತ್ತು 1 ಮೈಕ್ ವ್ಯವಸ್ಥೆ ಮಾಡಿಕೊಟ್ಟರೆ ಸಾಕು. ನನ್ನ ಖರ್ಚಿನಲ್ಲೇ ಬಂದು ಕಾರ್ಯಕ್ರಮ ನೀಡುತ್ತೇನೆ. ನನಗೆಂದು ಕಾಫಿ, ಟೀ ಅಲ್ಲದೇ ಹೂಗುಚ್ಛವನ್ನೂ ಕೊಡುವುದು ಬೇಡ ಎಂಬ ಮಾತನ್ನು ಹೇಳುವುದನ್ನು ಅವರು ಮರೆಯುವುದಿಲ್ಲ. ಆಸಕ್ತರು ಅವರ ಮೊ.ಸಂ.9538562662 ಸಂಪರ್ಕಿಸಬಹುದು.

English summary
Uday Jadugar a famous magician, now extended his service to society also. He is giving free shows to the people and is teaching magic whitout recieving a single rupee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X