ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಜೀಪಿನ ಚಕ್ರದೊಳಗೆ ಪ್ರತ್ಯಕ್ಷವಾದ ನಾಗ:ಆಮೇಲೇನಾಯ್ತು?

|
Google Oneindia Kannada News

ಮೈಸೂರು, ಏಪ್ರಿಲ್ 25:ಪೊಲೀಸರನ್ನು ಕಂಡರೆ ಸಾಕು ಕೆಲವರು ಭಯ ಪಡುವುದು ಸಹಜ. ಆದರೆ ಪೊಲೀಸರು ಇಂದು ಭಯಬಿದ್ದು ತಾವು ಚಲಿಸುತ್ತಿದ್ದ ಗಾಡಿಯಿಂದಲೇ ದಿಢೀರ್ ಎಂದು ಕೆಳಗಿಳಿದ ಘಟನೆ ನಡೆದಿದೆ. ಹೌದು, ಮೈಸೂರು ಪೊಲೀಸ್ ಜೀಪ್ ನ ಹಿಂಬದಿಯ ಚಕ್ರಕ್ಕೆ ಅದರಲ್ಲೂ ಚಲಿಸುತ್ತಿದ್ದ ಚಕ್ರದ ಬಳಿ ಹಾವು ಕಂಡು ಸಾರ್ವಜನಿಕರು ಹಾಗೂ ಪೊಲೀಸರು ಬೆಚ್ಚಿ ಬಿದ್ದ ಘಟನೆ ಹಾರ್ಡಿಂಜ್ ಸರ್ಕಲ್ ನಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಜೀಪ್ ಚಕ್ರ ಹಾವಿನ ಮೇಲೆ ಹರಿಯಿತೇ ಎಂದರೆ ಹಾಗೇನೂ ಆಗಿಲ್ಲ. ಬದಲಾಗಿ ಚಕ್ರಕ್ಕೆ ಹಾವು ಸುತ್ತಿಕೊಂಡಿತ್ತು. ಜೀಪ್ ಚಲಿಸುತ್ತಿದ್ದಾಗ ನಾಗರ ಹಾವು ಹೆಡೆ ಬಿಚ್ಚಿ ಬುಸುಗುಡುತ್ತಿತ್ತು.ಇದನ್ನು ಗಮನಿಸಿದ ಸಾರ್ವಜನಿಕರು ಚಕ್ರದಲ್ಲಿ ಹಾವು ಇದೆ ಎಂದು ಪೊಲೀಸರನ್ನು ಎಚ್ಚರಿಸಿದರು.

ವೈರಲ್ ವಿಡಿಯೋ: ಹಣ ಹುಡುಕಿಕೊಂಡು ಎಟಿಎಂಗೆ ಬಂದ ಹಾವು!ವೈರಲ್ ವಿಡಿಯೋ: ಹಣ ಹುಡುಕಿಕೊಂಡು ಎಟಿಎಂಗೆ ಬಂದ ಹಾವು!

ಆ ಗಾಡಿಯಲ್ಲಿ ಡಿವೈಎಸ್ಪಿ ಜಯಮಾರುತಿ ಸಂಚರಿಸುತ್ತಿದ್ದರು. ತಕ್ಷಣ ಅವರು ಜೀಪ್ ನಿಲ್ಲಿಸುವಂತೆ ತಮ್ಮ ಚಾಲಕನಿಗೆ ಸೂಚಿಸಿದರು. ನಂತರ ಇಳಿದು ನೋಡಿದರೆ ಹಿಂಬದಿಯ ಚಕ್ರದ ಡಿಸ್ಕ್ ನಲ್ಲಿ ನಾಗರಹಾವು ಸುತ್ತಿಕೊಂಡಿತ್ತು ಇದನ್ನು ಕಂಡ ಸ್ಥಳೀಯರು ಜೀಪ್ ಹತ್ತಿರಕ್ಕೂ ಸುಳಿಯದೇ ದೂರದಿಂದಲೇ ನಿಂತು ನೋಡುತ್ತಿದ್ದರು. ಆಗ ಜಯಮಾರುತಿ ಅವರಿಗೆ ನೆನಪಾದದ್ದು ಉರಗ ತಜ್ಙ ಸ್ನೇಕ್ ಶ್ಯಾಮ್ ಜೀಪ್ ನಿಲ್ಲಿಸಿದ ಮೇಲೆ ಹಾವು ಹಿಂಬದಿಯ ಚಕ್ರದ ಡಿಸ್ಕ್ ಗೆ ಸುತ್ತಿಕೊಂಡಿದೆ.

Snake found in police jeep at Mysuru

ಕೆಲವು ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಶ್ಯಾಮ್ ಹಾವನ್ನು ಹೊರತೆಗೆದರು. ಅದಕ್ಕೆ ಕ್ಯಾಪ್ ಹಾಕದ ಕಾರಣ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಯಿತು.

 ಕಣ್ಣೂರ್ ನ ಮತದಾನ ಕೇಂದ್ರದ ವಿವಿ ಪ್ಯಾಟ್ ನೊಳಗೆ ಹಾವು ಕಣ್ಣೂರ್ ನ ಮತದಾನ ಕೇಂದ್ರದ ವಿವಿ ಪ್ಯಾಟ್ ನೊಳಗೆ ಹಾವು

ಇದು ಸುಮಾರು ಎರಡು ವರ್ಷದ ನಗರ ಹಾವಾಗಿದ್ದು, ಅದಕ್ಕೆ ಏನೂ ತೊಂದರೆಯಾಗಿಲ್ಲ. ಬೇಸಿಗೆ ಕಾಲವಾದ್ದರಿಂದ ತಂಪಾದ ಸ್ಥಳವನ್ನು ಹುಡುಕಿ ಹಾವುಗಳು ಬಿಲದಿಂದ ಹೊರಗೆ ಬರುತ್ತವೆ. ಹಾಗೆ ಹೊರಬಂದ ಹಾವು ಚಕ್ರಕ್ಕೆ ಸುತ್ತಿಕೊಂಡಿದೆ ಎಂದರು. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

English summary
Snake found in Mysuru DYSP police jeep. Expert Snake Shyam catches snake and left in forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X