ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಾಯಣದಲ್ಲಿ ಪರ್ವ ನಾಟಕದ ಮೊದಲ ಪ್ರದರ್ಶನ ವೀಕ್ಷಿಸಿದ ಎಸ್‌.ಎಲ್‌.ಭೈರಪ್ಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 12: ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರ ಪರ್ವ ಕಾದಂಬರಿ ಆಧಾರಿತ "ಪರ್ವ' ನಾಟಕ ಮಾ.12 ರಿಂದ ಪ್ರದರ್ಶನಗೊಳ್ಳುತ್ತಿದ್ದು, ಶುಕ್ರವಾರ ನಾಟಕಕ್ಕೆ ಚಾಲನೆ ನೀಡಲಾಯಿತು.

ಮೊದಲ ಪ್ರದರ್ಶನದ ಹಿನ್ನೆಲೆಯಲ್ಲಿ ರಂಗಾಯಣದ ಇಡೀ ಕಲಾಮಂದಿರ ಹೌಸ್‌ ಫುಲ್‌ ಆಗುವ ಮೂಲಕ ಮೊದಲ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಾನು ಎಸ್.ಎಲ್ ಭೈರಪ್ಪ ಈ ನಾಟಕಕ್ಕೆ ಚಾಲನೆ ಕೊಡುತ್ತಿದ್ದೇನೆ ಎನ್ನುವ ಮೂಲಕ ಪರ್ವ ನಾಟಕದ ಮೂಲ ರಚನಾಕಾರರಾದ ಎಸ್‌.ಎಲ್‌.ಭೈರಪ್ಪ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದರು.

ಕರ್ನಾಟಕ ಬಜೆಟ್ 2021: ಎಸ್‌.ಎಲ್‌ಭೈರಪ್ಪರ 'ಪರ್ವ' ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಮೀಸಲುಕರ್ನಾಟಕ ಬಜೆಟ್ 2021: ಎಸ್‌.ಎಲ್‌ಭೈರಪ್ಪರ 'ಪರ್ವ' ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಮೀಸಲು

""ಇದು ರಂಗಾಯಣದಲ್ಲಿ ಹೊಸ ಮೈಲಿಗಲ್ಲು. ಈ ಮಹಾಪರ್ವದ ವಿಶೇಷ ಪ್ರದರ್ಶನಕ್ಕೆ ಹಣ‌ ಕೊಟ್ಟು ಟಿಕೆಟ್ ಕೊಟ್ಟು ಬಂದಿರುವ ಪ್ರೇಕ್ಷಕರೇ ಅತಿಥಿಗಳು'' ಎಂದರು.

Mysuru: SL Byrappa Novel Parva Drama Show March 12 at Rangayana

ಮಾ.12ರಿಂದ ಎಸ್.ಎಲ್ ಭೈರಪ್ಪನವರ 'ಪರ್ವ' ಕಾದಂಬರಿ ನಾಟಕ ಪ್ರದರ್ಶನಮಾ.12ರಿಂದ ಎಸ್.ಎಲ್ ಭೈರಪ್ಪನವರ 'ಪರ್ವ' ಕಾದಂಬರಿ ನಾಟಕ ಪ್ರದರ್ಶನ

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ""ಪ್ರಕಾಶ್ ಬೆಳವಾಡಿ ನಾಟಕ ನಿರ್ದೇಶನ ಮಾಡಿದ್ದು, ಕನ್ನಡ ಕಾಯಕ ವರ್ಷದಲ್ಲಿ ಕನ್ನಡದಲ್ಲಿ ʻಪರ್ವʼವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ.'' ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಚೈನೀಸ್, ರಷ್ಯನ್ ಭಾಷೆಗೆ ಅನುವಾದ ಮಾಡಿದ್ದಾರೆಂದು ಸ್ಮರಿಸಿದರು.

English summary
Parva , a drama based on the Novel by Veteran writer SL Byrappa will be staged at Rangayana from March 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X