ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.12ರಿಂದ ಎಸ್.ಎಲ್ ಭೈರಪ್ಪನವರ 'ಪರ್ವ' ಕಾದಂಬರಿ ನಾಟಕ ಪ್ರದರ್ಶನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 10: ಹಿರಿಯ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ 'ಪರ್ವ' ಕಾದಂಬರಿ ನಾಟಕ ಮಾರ್ಚ್ 12ರಿಂದ ಮೂರು ದಿನಗಳ ಕಾಲ ಪ್ರದರ್ಶನವಾಗಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ಮೈಸೂರಿನ ರಂಗಾಯಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಗರದ ಕಲಾಮಂದಿರದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಾಟಕಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಚಾಲನೆ ನೀಡಲಿದ್ದು, ಪರ್ವ ಕಾದಂಬರಿಯ ರಂಗರೂಪ ಮತ್ತು 7 ಗಂಟೆ 30 ನಿಮಿಷಗಳ ನಾಟಕ ಪ್ರದರ್ಶನವಾಗಿದೆ. ವಿಶೇಷ ಯೋಜನೆಯ ಅನುಷ್ಠಾನಕ್ಕಾಗಿ ರಂಗಾಯಣ 12 ಹಿರಿಯ ಕಲಾವಿದರ ಜೊತೆಗೆ 25 ಮಂದಿ ಕಲಾವಿದರು 10 ತಂತ್ರಜ್ಞರ ಆಯ್ಕೆ ಮಾಡಿದೆ ಎಂದಿದ್ದಾರೆ.

ಕರ್ನಾಟಕ ಬಜೆಟ್ 2021: ಎಸ್‌.ಎಲ್‌ಭೈರಪ್ಪರ 'ಪರ್ವ' ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಮೀಸಲುಕರ್ನಾಟಕ ಬಜೆಟ್ 2021: ಎಸ್‌.ಎಲ್‌ಭೈರಪ್ಪರ 'ಪರ್ವ' ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಮೀಸಲು

ಕಳೆದ ಆರು ತಿಂಗಳಿನಿಂದ ಸತತವಾಗಿ ತಾಲೀಮು ನಡೆಸಲಾಗುತ್ತಿದೆ. ಇದೀಗ 12ರಂದು ನಾಟಕ ಪ್ರದರ್ಶನವಾಗುತ್ತಿದೆ. ಕಲಾಮಂದಿರದಲ್ಲಿ ಪ್ರದರ್ಶನ ನಡೆಯಲಿದ್ದು 10ಕ್ಕೆ ನಾಟಕ ಆರಂಭವಾಗಿ 6.30ಕ್ಕೆ ಮುಗಿಯಲಿದೆ. ರಂಗಮಂದಿರದ 2 ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ, 70% ಟಿಕೆಟ್ ಸೇಲ್ ಆಗಿದೆ ಎಂದು ಮಾಹಿತಿ ನೀಡಿದರು.

Mysuru: SL Bhyrappas Novel Parva Drama Performance From March 12

ಎಸ್.ಎಲ್.ಬೈರಪ್ಪ ನವರ ಪರ್ವ ನಾಟಕಕ ಪ್ರದರ್ಶನ ಒಂದು ಮೈಲಿಗಲ್ಲಾಗಬೇಕು ಎಂಬ ಆಸೆ ಹೊತ್ತಿದ್ದೆವು. ರಾಜ್ಯದಾದ್ಯಂತ ಇದರ ಪ್ರದರ್ಶನಕ್ಕೆ ಹಣಕಾಸಿನ ನೆರವು ಕೇಳಿದ್ದೆವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಾಗೂ ಶಾಸಕ ನಾಗೇಂದ್ರ ಅವರಿಗೆ ಮನವಿ ಮಾಡಲಾಗಿತ್ತು. ಬಜೆಟ್ ನಲ್ಲಿ ಹಣ ಕೊಡಿಸುವುದಾಗಿ ತಿಳಿಸಿದ್ದಾರೆ ಎಂದರು.

ಸದ್ಯ ಬಜೆಟ್ ನಲ್ಲಿ ರಂಗಾಯಣ ಹೆಸರು ಪ್ರಸ್ತಾಪಿಸಿ ಪರ್ವ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ನವರಿಗೆ ರಂಗಾಯಣದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

English summary
SL Bhyrappa's novel "Parva' will be screening drama for three days from March 12, said Rangayana director Addanda Karyappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X