ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

CM ಪರಿಹಾರ ನಿಧಿಗೆ ಭೈರಪ್ಪ, PM ಪರಿಹಾರ ನಿಧಿಗೆ ಕಣವಿ ದೇಣಿಗೆ

|
Google Oneindia Kannada News

ಮೈಸೂರು, ಧಾರವಾಡ, ಏಪ್ರಿಲ್ 10: ಕೊರೊನಾ ನಿಯಂತ್ರಣ ಸಹಾಯ ಆಗುವಂತೆ ದೇಣಿಗೆ ನೀಡಲು ಕನ್ನಡ ಖ್ಯಾತ ಸಾಹಿತಿಗಳು ಮುಂದೆ ಬಂದಿದ್ದಾರೆ. ಸಾಹಿತಿ ಎಸ್‌ ಎಲ್ ಭೈರಪ್ಪ ಹಾಗೂ ಕವಿ ಡಾ ಚೆನ್ನವೀರ ಕಣವಿ ನೆರವು ನೀಡಿದ್ದಾರೆ.

ನಿನ್ನೆ ಎಸ್‌ ಎಲ್‌ ಭೈರಪ್ಪ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ಹಣವನ್ನು ನೀಡಿದ್ದಾರೆ. ಮೈಸೂರಿನಲ್ಲಿ ಒಂದು ಲಕ್ಷ ರೂಪಾಯಿಯ ಚೆಕ್‌ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣರಿಗೆ ನೀಡಿದರು. ಈ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಸಹ ಹಾಜರಿದ್ದರು.

'ರತನ್ ಟಾಟಾಗೆ ಭಾರತ ರತ್ನ ನೀಡಬೇಕು': ಟ್ವಿಟ್ಟರ್ ನಲ್ಲಿ ಅಭಿಯಾನ'ರತನ್ ಟಾಟಾಗೆ ಭಾರತ ರತ್ನ ನೀಡಬೇಕು': ಟ್ವಿಟ್ಟರ್ ನಲ್ಲಿ ಅಭಿಯಾನ

ಇಂದು ಧಾರವಾಡದಲ್ಲಿ ಕವಿ ಚನ್ನವೀರ ಕಣವಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಒಂದು ಲಕ್ಷ ರೂಪಾಯಿಗಳ ನೆರವನ್ನು ಕೊರೊನಾ ಹೋರಾಟಕ್ಕೆ ನೀಡಿದ್ದಾರೆ. ಶಾಸಕ ಅರವಿಂದ ಬೆಲ್ಲದ ಮೂಲಕ ಪಿಎಂ ಪರಿಹಾರ ನಿಧಿಗೆ ಚೆಕ್ ತಲುಪಿಸಿದರು.

Sl Bhyrappa Donated For Cm Fund And Channaveera Kanavi Donated For Pm Fund

ಈ ವೇಳೆ ಮಾತನಾಡಿರುವ ಅವರು, ಜನರು ಮನೆ ಬಿಟ್ಟು ಹೊರಗೆ ಬರಬಾರದು ಎಂದು ಮನವಿ ಮಾಡಿದ್ದಾರೆ. ಲಾಕ್ ಡೌನ್ ಮುಂದುಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ, ಕರ್ನಾಟಕದಲ್ಲಿ 197 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. 6 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.

English summary
SL Bhyrappa donated 1 lakh for CM fund and Channaveera Kanavi donated 1 lakh for pm fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X