ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಎನ್ ಯು ಗಾಳಿ ಮೈಸೂರಿಗೂ ಬೀಸಿರುವುದು ದೊಡ್ಡ ದುರಂತ: ಎಸ್.ಎಲ್.ಭೈರಪ್ಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 10: ದೆಹಲಿಯ ಜೆಎನ್ ಯು ವಿದ್ಯಾರ್ಥಿಗಳು ವಿದ್ಯಾರ್ಜನೆ ಬಗ್ಗೆ ಹೆಚ್ಚು ಗಮನ ಹರಿಸಬೇಕೇ ಹೊರತು ಚಿಲ್ಲರೆ ರಾಜಕಾರಣದ ವಿಷಯಗಳ ಬಗ್ಗೆ ಅಲ್ಲ, ಜೆಎನ್ ಯು ಗಾಳಿ ಮೈಸೂರು ವಿಶ್ವವಿದ್ಯಾಲಯಕ್ಕೂ ಬೀಸಿರುವುದು ದೊಡ್ಡ ದುರಂತ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಎಲ್ ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಭೈರಪ್ಪನವರು, ನಾನು ಸುದ್ದಿ ಆಗಲು ಇಷ್ಟ ಪಡುವುದಿಲ್ಲ,

ಒಬ್ಬ ಲೇಖಕನಾಗಿ ಸುದ್ದಿಯಾದರೆ ನನ್ನ ಬರವಣಿಗೆ ಹಾಳಾಗುತ್ತೆ ಎಂದರು.

ಮನು ಬಳಿಗಾರ್ ವಿರುದ್ಧ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಆಕ್ರೋಶ

ಅಂದು ಬ್ರಿಟಿಷರು ಧರ್ಮದ ಆಧಾರದ ಮೇಲೆ ದೇಶ ಆಳಿದರು. ಅದೇ ತಂತ್ರದ ಆಧಾರದ ಮೇಲೆ ಜವಾಹರಲಾಲ್ ನೆಹರೂ ಆಡಳಿತ ಮಾಡಿದರು. ಬ್ರಿಟಿಷರು ಹಿಂದೂಗಳನ್ನು ಜಾತಿಗಳಿಂದ ಒಡೆದಿದ್ದಾರೆ. ಹಿಂದೂಗಳಿಗೆ ಈ ದೇಶದಲ್ಲಿ ದೊಡ್ಡ ಮೆಜಾರಿಟಿ ಇದೆ ಎಂದು ತಿಳಿಸಿದರು.

ಮುಸ್ಲಿಮರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿಸಿಕೊಂಡಿದೆ

ಮುಸ್ಲಿಮರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿಸಿಕೊಂಡಿದೆ

ಮುಸ್ಲಿಂ ಸಮುದಾಯದವರನ್ನು ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ಆಗಿ ಸೃಷ್ಠಿ ಮಾಡಿದ್ದು, ಇದು ಕಾಂಗ್ರೆಸ್ ಪಕ್ಷದ ಐಡಿಯಾಲಜಿ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ಬರೀ ಟೀಕೆ ಮಾಡುವುದು ಕಾಂಗ್ರೆಸ್ ಪಕ್ಷದ ಕೆಲಸವಾಗಿದೆ. ಕಾಶ್ಮೀರದಲ್ಲಿ 370 ವಿಧಿಯನ್ನು ತೆಗೆದು ಹಾಕಿ, ಮೋದಿ ಧೈರ್ಯದ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿಯ ನಂತರ ಯಾರು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ಪ್ರಶ್ನಿಸಿದರು.

ಓದುವ ಹವ್ಯಾಸ ಬೆಳೆಸಿಕೊಳ್ಳಲಿ

ಓದುವ ಹವ್ಯಾಸ ಬೆಳೆಸಿಕೊಳ್ಳಲಿ

ಜೆಎನ್ ಯು ವಿದ್ಯಾರ್ಥಿಗಳನ್ನು ತಮ್ಮ ಸ್ವಾರ್ಥಗಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳು ಕೇಳಬೇಕಿರುವುದು ತಮ್ಮ ಶೈಕ್ಷಣಿಕ ಅಗತ್ಯತೆಗಳನ್ನು ಕೇಳಬೇಕು, ಅದು ಬಿಟ್ಟು ಕೊಳಕು ರಾಜಕಾರಣವನ್ನು ವಿದ್ಯಾಮಂದಿರಗಳಲ್ಲಿ ಬಿಟ್ಟುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಮೊದಲು ಉಪನ್ಯಾಸಕನಾಗಿ ಕೆಲಸ ಮಾಡಿದವನು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂದು ದೇಶದ ಶೈಕ್ಷಣಿಕ ಮಟ್ಟ ಕುಸಿದಿದೆ, ವಿದ್ಯಾರ್ಥಿಗಳನ್ನು ಅಡ್ಡದಾರಿಗೆ ರಾಜಕಾರಣಿಗಳು ಎಳೆಯುತ್ತಿದ್ದಾರೆಂದು ಸಾಹಿತಿ ಎಸ್.ಎಲ್.ಭೈರಪ್ಪ ವಿ‍ಷಾದವ್ಯಕ್ತಪಡಿಸಿದರು.

ವಿವಿಗಳು ಜನರ ತೆರಿಗೆಯಿಂದ ನಡೆಯುತ್ತಿವೆ

ವಿವಿಗಳು ಜನರ ತೆರಿಗೆಯಿಂದ ನಡೆಯುತ್ತಿವೆ

ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಪ್ರತಿಭಟನೆ ವೇಳೆ "ಫ್ರೀ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಭೈರಪ್ಪನವರು, ಜೆಎನ್ ಯು ವಿವಿಯ ಗಾಳಿ ಇಲ್ಲಿಗೂ ಬೀಸಿದೆ. ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ತೆರಿಗೆ ಹಣದಿಂದ ವಿಶ್ವವಿದ್ಯಾಲಯಗಳು ನಡೆಯುತ್ತಿವೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಬರೀ ಪ್ರತಿಭಟನೆ ಮಾಡುತ್ತಾ ಧಿಕ್ಕಾರ ಕೂಗಿದರೇ ಏನು ಪ್ರಯೋಜನ. ವಿದ್ಯಾರ್ಥಿಗಳು ತಮಗೆ ಸರಿಯಾದ ವಿದ್ಯಾಭ್ಯಾಸ ಸಿಗುತ್ತಿದೆಯಾ ಎಂಬುದರ ಬಗ್ಗೆ ಚಿಂತೆ ಮಾಡಬೇಕು. ಕೆಲವರು ಜಾತಿಯಿಂದ ಪ್ರೊಫೆಸರ್ ಆಗಿದ್ದಾರೆ ಎಂದು ಹೇಳಿದರು.

ಸಾಹಿತಿಗಳಿಗೆ ಅಜೆಂಡಾ ಇರಬಾರದು

ಸಾಹಿತಿಗಳಿಗೆ ಅಜೆಂಡಾ ಇರಬಾರದು

ಪೌರತ್ವ ತಿದ್ದಪಡಿ ಕಾಯ್ದೆ ಮತ್ತು ಎನ್.ಆರ್.ಸಿ ವಿಚಾರದಲ್ಲಿ ಪ್ರತಿಪಕ್ಷಗಳು ಜನರಿಗೆ ಸುಳ್ಳು ಹೇಳುತ್ತಿವೆ. ಸರ್ಕಾರ ಏನೇ ಮಾಡಿದರೂ ಟೀಕಿಸುವುದೇ ಪ್ರತಿಪಕ್ಷಗಳ ಕೆಲಸವಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷಗಳು ಸರ್ಕಾರದ ಒಳ್ಳೆಯ ಕೆಲಸಗಳನ್ನು ಮೆಚ್ಚಬೇಕು.

ಜವಾಬ್ದಾರಿಯುತ ಪ್ರತಿಪಕ್ಷ ಇಲ್ಲದಿರುವುದರಿಂದ ದೇಶದಲ್ಲಿ ಈ ರೀತಿ ಆಗುತ್ತಿದೆ ಎಂದು ಭೈರಪ್ಪನವರು ಹರಿಹಾಯ್ದರು.

ಮೈಸೂರಿನಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಪ್ರಶ್ನೆ. ಸಾಹಿತಿಗಳಿಗೆ ಯಾವುದೇ ಅಜೆಂಡಾ ಇರಬಾರದು. ಸಾಹಿತಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು. ನಾನು ಯಾವುದೇ ಗುಂಪಿಗೆ ಸೇರಿದವನಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದರು.

English summary
Students more attention should be In Study, not in Dirty Politics SL Bhyrappa Said In Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X