ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಜಂಬೂಸವಾರಿಯಲ್ಲಿ 6 ಸ್ತಬ್ಧ ಚಿತ್ರಗಳ ಮೆರವಣಿಗೆ

|
Google Oneindia Kannada News

ಮೈಸೂರು, ಅಕ್ಟೋಬರ್ 14; ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆ. ಜಂಬೂಸವಾರಿಯಲ್ಲಿ ಆನೆಗಳಷ್ಟೇ ಮತ್ತೊಂದು ಆಕರ್ಷಣೆ ಎಂದರೆ ಅದು ಸ್ತಬ್ಧ ಚಿತ್ರಗಳು. ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಸರಳ ದಸರಾ ಆಚರಿಸುತ್ತಿದೆ. ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.‌ ಅಂಬಾವಿಲಾಸ ಅರಮನೆ ಒಳಗಷ್ಟೇ ದಸರಾ ಸೀಮಿತಗೊಂಡಿದೆ. ಆದರೂ ಸಂಭ್ರಮಕ್ಕೆ‌ ಕೊರತೆ ಉಂಟಾಗಿಲ್ಲ. ಈಗಾಗಲೇ ಆನೆಗಳಿಗೆ ತಾಲೀಮು ನೀಡಿ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದೆ.

ಜಂಬೂ ಸವಾರಿ ಅಂತಿಮ ತಾಲೀಮು; ಮೆರವಣಿಗೆಯಲ್ಲಿ 6 ಆನೆ ಭಾಗಿಜಂಬೂ ಸವಾರಿ ಅಂತಿಮ ತಾಲೀಮು; ಮೆರವಣಿಗೆಯಲ್ಲಿ 6 ಆನೆ ಭಾಗಿ

ಈ ಬಾರಿ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಕುಮ್ಕಿ ಆನೆಯಾಗಿ ಕಾವೇರಿ ಹಾಗೂ ಚೈತ್ರಾ ಇರಲಿವೆ. ನಿಶಾನೆ ಆನೆಯಾಗಿ ಧನಂಜಯ ಇದ್ದರೆ, ನೌಕತ್ ಸಾಲು ಆನೆಗಳಾಗಿ ಅಶ್ವತ್ಥಾಮ ಹಾಗೂ ಧನಂಜಯ ಹೆಜ್ಜೆ ಹಾಕಲಿದ್ದಾರೆ.

ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ! ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ!

Six Tablo Will Participate In Mysuru Dasara Jumbo Savari 2021

6 ಸ್ತಬ್ಧ ಚಿತ್ರಗಳು; ಈ ಬಾರಿಯ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ 6 ಸ್ತಬ್ದ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 10ಕ್ಕೂ ಹೆಚ್ಚು ಕಲಾಪ್ರಕಾರಗಳ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

‌ಪ್ರತಿ ಸ್ತಬ್ಧಚಿತ್ರದ ಹಿಂದೆ ಎರಡು ಕಲಾತಂಡಗಳು ಹೆಜ್ಜೆ ಹಾಕಲಿವೆ. ಹಾಗೆ ನೋಡಿದರೆ ಪ್ರತಿ ವರ್ಷ ಜಂಬೂಸವಾರಿಯಲ್ಲಿ ಪ್ರತಿ ಜಿಲ್ಲೆಗಳಿಂದ ಒಂದೊಂದು ಲೆಕ್ಕದಲ್ಲಿ 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದವು. ಇದಕ್ಕಾಗಿ ಮೂರು ತಿಂಗಳ ಮುಂಚಿನಿಂದಲೇ ತಯಾರಿ ನಡೆಯುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಕೇವಲ ಎರಡು ಮಾತ್ರ ಸ್ತಬ್ದ ಚಿತ್ರಗಳು ಇದ್ದವು, ಈ ಬಾರಿ 6 ಟಾಬ್ಲೋಗಳಿಗೆ ಅವಕಾಶ ಮಾಡಲಾಗಿದೆ.

ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ

ಯಾವ ಸ್ತಬ್ಧಚಿತ್ರಗಳು?; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಹು ಅಂತಸ್ತಿನ ಮಹಡಿ (ಅಪಾರ್ಟ್‌ಮೆಂಟ್) ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ವಿನೂತನ ಮಾದರಿಯಲ್ಲಿ ಸಬ್ಧಚಿತ್ರವೊಂದು ಸಿದ್ಧಪಡಿಸಲಾಗುತ್ತಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ಮುಕ್ತ ಕರ್ನಾಟಕಕ್ಕಾಗಿ ಪ್ರಾರ್ಥಿಸೋಣ ಎಂಬ ಶೀರ್ಷಿಕೆಯಡಿ ಸ್ತಬ್ಧಚಿತ್ರವೊಂದು ಮೂಡಿಬರಲಿದೆ.

ಸ್ವಾತಂತ್ರ ಬಂದು 75 ವರ್ಷ ಸಂದಿರುವ ಕಾರಣದಿಂದ ಅಮೃತ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ಸ್ತಬ್ಧ ಚಿತ್ರವೊಂದು ಮೆರವಣಿಗೆಯಲ್ಲಿ ಸಾಗಿ ಬರಲಿದೆ. ಇದರ ಜೊತೆಗೆ ಅರಮನೆ ವಾದ್ಯಗೋಷ್ಠಿಯ ಸ್ತಬ್ಧಚಿತ್ರವೂ ಪ್ರಮುಖ ಆಕರ್ಷಣೆ ಆಗಲಿದೆ. ಇವುಗಳ ಜೊತೆ ಪರಿಸರ ಸಂರಕ್ಷಣೆ ಹಾಗೂ ಸಮಗ್ರ ಕೃಷಿ ಬಗ್ಗೆಯೂ ಟ್ಯಾಬ್ಲೋ ಇರಲಿದೆ.

ಮಹಿಳಾ ತಂಡಕ್ಕೆ ಆದ್ಯತೆ; ಮೆರವಣಿಗೆಯಲ್ಲಿ ಮಹಿಳಾ ತಂಡಗಳಿಗೆ ಆದ್ಯತೆ ನೀಡಲಾಗಿದೆ. ಸ್ತಬ್ಧಚಿತ್ರಗಳ ಮುಂದೆ ಎರಡು ಕಲಾ ತಂಡಗಳು ಹೆಜ್ಜೆ ಹಾಕಲಿವೆ. ಆ ಮೂಲಕ ಮೆರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ. ಕಳೆದ ವರ್ಷ 200 ಕಲಾವಿದರು ಭಾಗವಹಿಸಿದ್ದರು. ಈ ಬಾರಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

20 ಲಕ್ಷ ಅಂದಾಜು ಪಟ್ಟಿ; ಅರಮನೆ ಎದುರಿಗಿರುವ ದೊಡ್ಡಕರ ಮೈದಾನದಲ್ಲಿ 4 ಸ್ತಬ್ಧಚಿತ್ರಗಳ ಕೆಲಸ ನಡೆಯುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಕೊರೊನಾ ಜಾಗೃತಿ ಸ್ತಬ್ಧಚಿತ್ರ ತಯಾರಾಗುತ್ತಿದೆ. ಪ್ರಕಾಶ್ ಚಿಕ್ಕಪಾಳ್ಯ ಗೋದಾಮಿನಲ್ಲಿ ಅಮೃತ ಮಹೋತ್ಸವಕ್ಕೆ ಸಂಬಂಧಪಟ್ಟ ಸಬ್ಧಚಿತ್ರ ರೂಪ ಪಡೆಯುತ್ತಿದೆ.

"ಸದ್ಯ 4 ಸ್ತಬ್ಧಚಿತ್ರ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ 20 ಲಕ್ಷದ ಅ೦ದಾಜು ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ" ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ಡಿ. ಕೆ. ಲಿಂಗರಾಜು ತಿಳಿಸಿದ್ದಾರೆ.

English summary
6 tablo will participate in Mysuru dasara jumbo savari procession 2021. Jumbo savari will be held on October 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X