ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ಸಚಿವರನ್ನು ಸಂಪುಟದಿಂದ ವಜಾಗೊಳಿಸಿ; ಸಾ. ರಾ. ಮಹೇಶ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 06: "ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಯಾವ ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೋ ಅವರನ್ನು ಸಂಪುಟದಿಂದ ವಜಾ ಮಾಡಿ" ಎಂದು ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಒತ್ತಾಯಿಸಿದರು.

ಶನಿವಾರದಂದು ಮೈಸೂರಿನಲ್ಲಿ ಮಾತನಾಡಿದ ಶಾಸಕರು, "ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮಂತ್ರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಇದೇ ವಿಚಾರದ ಕುರಿತು ಸದನದಲ್ಲೂ ಒತ್ತಾಯ ಮಾಡುತ್ತೇವೆ" ಎಂದು ಹೇಳಿದರು.

ಜಾರಕಿಹೊಳಿ ಪ್ರಕರಣ: ಎಚ್ಡಿಕೆ ಹೇಳಿದ 5 ಕೋಟಿ ಡೀಲ್ ಮತ್ತು 6 ಸಚಿವರ ಕೋರ್ಟ್ ಮೊರೆ ಜಾರಕಿಹೊಳಿ ಪ್ರಕರಣ: ಎಚ್ಡಿಕೆ ಹೇಳಿದ 5 ಕೋಟಿ ಡೀಲ್ ಮತ್ತು 6 ಸಚಿವರ ಕೋರ್ಟ್ ಮೊರೆ

"ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?. ಅರ್ಜಿ ಹಾಕಿರೋದೆ ನಾವೆಲ್ಲಾ ತಲೆ ತಗ್ಗಿಸೋ ವಿಚಾರವಾಗಿದೆ. ಇದೆಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ. ಅದು ಆಚೆಗೆ ಬರಬೇಕು" ಎಂದು ಒತ್ತಾಯಿಸಿದರು.

ಸಂಪುಟದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ?: ಬಿ ಸಿ ಪಾಟೀಲ್ ಸ್ಪಷ್ಟನೆ ಸಂಪುಟದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ?: ಬಿ ಸಿ ಪಾಟೀಲ್ ಸ್ಪಷ್ಟನೆ

Six Ministers Moved Court; Sa Ra Mahesh Demand To Dismiss them From Cabinet

"ಮುಂಬೈನಲ್ಲಿ ಅಷ್ಟು ಭದ್ರತೆ ಇಟ್ಟುಕೊಂಡಿದ್ದರು. ಸರ್ಕಾರ ಬೀಳಿಸಲು ಎಲ್ಲರೂ ಅಲ್ಲಿಗೆ ಹೋಗಿದ್ದರು. ಈಗ ಯಾಕೆ ಅಲ್ಲಿ ಹೋದವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದೀರಿ?" ಎಂದು ಸಾ. ರಾ. ಮಹೇಶ್ ಪ್ರಶ್ನಿಸಿದರು.

ಜಾರಕಿಹೊಳಿ ಸಿಡಿ ಸ್ಪೋಟವಾಗುತ್ತಿದ್ದಂತೆ ಕೋರ್ಟ್‌ ಮೊರೆ ಹೋದ ಆರು ಸಚಿವರು!ಜಾರಕಿಹೊಳಿ ಸಿಡಿ ಸ್ಪೋಟವಾಗುತ್ತಿದ್ದಂತೆ ಕೋರ್ಟ್‌ ಮೊರೆ ಹೋದ ಆರು ಸಚಿವರು!

"ಇವರನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ?. ಸಚಿವರನ್ನೇ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು?. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ. ಆದರೆ, ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ" ಎಂದು ಸಾ. ರಾ. ಮಹೇಶ್ ತಿಳಿಸಿದರು.

"ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತೀನಿ ಅಂದಿದ್ದರು. ಬಹುಶಃ ಅದರಲ್ಲಿ ಇದು ಉಲ್ಲೇಖ ಆಗಬಹುದು. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ದೆವು ಅಂದರು ಬಾಂಬೆಯಲ್ಲಿ ಏನು ಮಾಡುತ್ತಿದ್ದರು ಅಂತ ಈಗ ಹೇಳಲಿ?" ಎಂದು ಸಾ. ರಾ. ಮಹೇಶ್ ವ್ಯಂಗ್ಯವಾಡಿದರು.

"ಇವರು ಮಾಡಿರುವುದನ್ನು ಮಾತನಾಡಲು ಅಸಹ್ಯ ಆಗುತ್ತದೆ. ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ. ಅನೇಕ ಶಾಸಕರ ವಿಡಿಯೋ ಇದೆ ಅಂತ ಹೇಳಿದ್ದರು. ಈ ಘಟನೆಯಿಂದ ನಮ್ಮ ಕುಟುಂಬದವರೇ ಅನುಮಾನದಿಂದ ನೋಡುತ್ತಿದ್ದಾರೆ. ತಪ್ಪು ಮಾಡದೆ ಇದ್ದರೆ ನೀವು ಏಕೆ ನ್ಯಾಯಾಲಯಕ್ಕೆ ಹೋಗಿದ್ದೀರಿ?" ಎಂದು ಟೀಕಿಸಿದರು.

English summary
6 Karnataka ministers moved court to restrain media from publishing any defamatory content against them. JD(S) leader Sa. Ra. Mahesh demand to dismiss all minister from the cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X