ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಕಬ್ಬಿನ ಗದ್ದೆಗಳಲ್ಲಿ ಆರು ಚಿರತೆ ಮರಿಗಳು ಪ್ರತ್ಯಕ್ಷ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 17: ಮೈಸೂರು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಡಾನೆಗಳ ಕಾಟ ಇದೆ. ಈಗ ಅದರ ಜೊತೆಗೆ ಚಿರತೆಗಳ ಕಾಟ ಕೂಡ ಸೇರಿಕೊಂಡಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ.

ಭಾನುವಾರ ಮೈಸೂರು ಸಮೀಪದ ವರುಣಾ ಹೋಬಳಿಯ ಕೂಡನಹಳ್ಳಿಯ ಹೊನ್ನಪ್ಪ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬನ್ನು ಕಟಾವು ಮಾಡಲು ತೆರಳಿದಾಗ ಆಶ್ಚರ್ಯವೊಂದು ಕಂಡಿತ್ತು. ಮುದ್ದಾದ ಮೂರು ಚಿರತೆ ಮರಿಗಳು ಗದ್ದೆಯಲ್ಲಿ ಆಟವಾಡಿಕೊಂಡಿದ್ದವು. ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ, ಚಿರತೆ ಮರಿಗಳನ್ನು ಒಪ್ಪಿಸಲಾಯಿತು.

Six Leopard Cubs Visible In Cane Fields At Mysuru

ಮೈಸೂರಿನಲ್ಲಿ 125 ಮೂಟೆ ಅಕ್ರಮ ಪಡಿತರ ಅಕ್ಕಿ ವಶ ಮೈಸೂರಿನಲ್ಲಿ 125 ಮೂಟೆ ಅಕ್ರಮ ಪಡಿತರ ಅಕ್ಕಿ ವಶ

ಕಳೆದ 10 ದಿನಗಳ ಹಿಂದಷ್ಟೆ ಜನಿಸಿದ ಮರಿಗಳು ಇವಾಗಿವೆ. ಒಂದು ಗಂಡು, ಎರಡು ಹೆಣ್ಣು ಚಿರತೆ ಮರಿಗಳು ಇವೆ. ಅದರೆ ಇವುಗಳ ತಾಯಿ ಚಿರತೆ ಹತ್ತಿರದಲ್ಲೇ ಇದ್ದು, ಜನರ ಮೇಲೆ ಅಕ್ರಮಣ ನಡೆಸಬಹುದೇ ಎಂಬ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Six Leopard Cubs Visible In Cane Fields At Mysuru

ಇನ್ನೊಂದು ಪ್ರಕರಣದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಆಲಗೂಡು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಇಂದು ಬೆಳಿಗ್ಗೆ 3 ಚಿರತೆ ಮರಿಗಳು ಪ್ರತ್ಯಕ್ಷ ಆಗಿವೆ. ಸ್ಥಳೀಯರು ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇಂದು ಶ್ರೀರಂಗಪಟ್ಟಣದಲ್ಲೇ 6 ಚಿರತೆ ಮರಿಗಳು ಸಿಕ್ಕಿದಂತಾಗಿದೆ.

English summary
In two separate cases, six leopard cubs were Visible In Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X