ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಟ್ರೆಂಡ್; ರಾಖಿ ಕಟ್ಟಿ ಹೆಲ್ಮೆಟ್ ನೀಡುತ್ತಿದ್ದಾರೆ ಸಹೋದರಿಯರು

|
Google Oneindia Kannada News

ಮೈಸೂರು, ಆಗಸ್ಟ್ 14 : ರಾಖಿ ಕಟ್ಟಿದ ಸೋದರಿಯರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ಈಗ ಹಾಗಿಲ್ಲ. ತಂಗಿಯರೂ ಅಣ್ಣನಿಗೆ ಉಡುಗೊರೆ ನೀಡುತ್ತಾರೆ. ರಕ್ಷಾ ಬಂಧನದ ದಿನ ಅಣ್ಣನಿಗೆ ರಾಖಿ ಕಟ್ಟಿ ಅವನ ರಕ್ಷಣೆಗಾಗಿ ಹೆಲ್ಮೆಟ್ ಉಡಗೊರೆಯಾಗಿ ನೀಡುತ್ತಿದ್ದಾರೆ.

ಹುತಾತ್ಮ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿ ಕಣ್ಣೀರಿಟ್ಟ ತಂಗಿ
ಹೌದು. ನಾಳೆ ಎಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಈಗಾಗಲೇ ಮಾರುಕಟ್ಟೆಯಲ್ಲಿ ವೈವಿಧ್ಯಮಯ ರಾಖಿಗಳು ಬಿಕರಿಯಾಗುತ್ತಿವೆ. ರಾಖಿ ಜೊತೆ ನಗರದಲ್ಲಿ ಕೆಲವರು ಸಹೋದರಿಯರು ತಮ್ಮ ಸಹೋದರರಿಗೆ ಹೆಲ್ಮೆಟ್ ಕಾಣಿಕೆ ನೀಡುವ ಮೂಲಕ ರಕ್ಷಾ ಬಂಧನಕ್ಕೆ ವಿಶಿಷ್ಟ ಅರ್ಥ ಕಲ್ಪಿಸಿದ್ದಾರೆ. ಹಲವು ಯುವತಿಯರು ಹಾಗೂ ಗೃಹಿಣಿಯರು ಈ ಬಾರಿಯ ರಾಖಿ ಹಬ್ಬಕ್ಕೆ ಹೆಲ್ಮೆಟ್ ಉಡುಗೊರೆ ನೀಡಲು ಮುಂದಾಗಿದ್ದಾರೆ.

Sisters are giving Helmet to brothers as a Raksha bandan gift

ಪ್ರೀತಿಯ ಅಣ್ಣ- ತಮ್ಮಂದಿರಿಗೆ ರಾಖಿ ಕಟ್ಟಿ ರಕ್ಷಣೆ ಕೋರುವುದು ಹಬ್ಬದ ವಾಡಿಕೆ. ಆದರೆ, ಈಗ ಕಾಲ ಬದಲಾಗಿದೆ. ಗಂಡುಮಕ್ಕಳಿಗೂ ತಮ್ಮ ಸಹೋದರಿಯರಿಂದ ರಕ್ಷಣೆ ಅಗತ್ಯವಿದೆ. ಹೀಗೆ ರಾಖಿ ಕಟ್ಟಿದ ಮೇಲೆ ಸಹೋದರರ ಜೀವ ರಕ್ಷಣೆಗಾಗಿ ಹೆಲ್ಮೆಟ್ ನೀಡಿ ಸುರಕ್ಷಿತವಾ ಗಿರುವಂತೆ ಹಾರೈಸುತ್ತಿದ್ದಾರೆ.

Sisters are giving Helmet to brothers as a Raksha bandan gift

ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿ ತಂದ ನಂತರ ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದವರು ಆಲೋಚಿಸುವಂತಾಗಿದೆ. ಹೆಲ್ಮೆಟ್ ಧರಿಸದಿರುವುದು ಸೇರಿ ಮತ್ತಿತರೆ ಕಾರಣಕ್ಕೆ ಇನ್ಮುಂದೆ 1 ಸಾವಿರ ರೂ ದಂಡ ಪಾವತಿಸಬೇಕು. ಈ ಕಾರಣಕ್ಕಾಗಿ ಹೆಲ್ಮೆಟ್ ನೀಡುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದೇ.

English summary
In Mysuru Sisters are giving Helmet to Brothers as a Raksha Bandan gift. They are circulating good social message to society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X