• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಆರ್ ಎಸ್ ನಿರ್ಮಿಸಿದ್ದು ಸರ್ ಎಂವಿ? ಎರಡನೇ ತರಗತಿ ಪಠ್ಯದಲ್ಲಿ ಲೋಪ!

By Yashaswini
|

ಮೈಸೂರು, ಜುಲೈ 25 : ಎರಡನೇ ತರಗತಿ ಪಠ್ಯ ಪುಸ್ತಕದಲ್ಲಿ ಅವಾಂತರವುಂಟಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಿರಿಯ ಪ್ರಾಥಮಿಕ ಶಾಲೆ 2ನೇ ತರಗತಿ ಕನ್ನಡ ಪಠ್ಯದಲ್ಲಿ ಕೆಆರ್ ಎಸ್(ಕೃಷ್ಣರಾಜ ಸಾಗರ) ಅಣೆಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅದರ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಕೈ ಬಿಡಲಾಗಿದ್ದು, ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಮೈಸೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿವಾದಿತ 'ನಾನು ಕನ್ನಂಬಾಡಿ ಕಟ್ಟೆ' ಆತ್ಮಕಥೆ ಪುಸ್ತಕ ಬಿಡುಗಡೆ

2ನೇ ತರಗತಿಯ ಸವಿ ಕನ್ನಡ ಅಭ್ಯಾಸ ಸಹಿತ ಪಠ್ಯಪುಸ್ತಕ ಪರಿಷ್ಕೃತಗೊಂಡಿದ್ದು, ಪಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗಿದೆ. ಇದರಲ್ಲಿ ಪಾಠ- 13 ಕಾವೇರಿ (ಗದ್ಯ) ಎಂಬ ಅಧ್ಯಾಯದ 94ನೇ ಪುಟದಲ್ಲಿ 'ಕೃಷ್ಣರಾಜ ಸಾಗರ ಅಣೆ ಕಟ್ಟೆಯನ್ನು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿದರು' ಎಂಬುದಾಗಿ ಮುದ್ರಣಗೊಂಡಿದೆ.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಬಂಗಾರ, ಒಡವೆ ಎಲ್ಲವನ್ನೂ ಮಾರಾಟ ಮಾಡಿ ಈ ಅಣೆಕಟ್ಟೆ ನಿರ್ಮಾಣಕ್ಕೆ ಹಣ ಕೊಟ್ಟಿದ್ದರು. ಆದರೆ, ಅವರ ಹೆಸರನ್ನೇ ಕೈಬಿಟ್ಟಿರುವುದು ಸಮಂಜಸ ವಲ್ಲ ಎಂಬ ಸಾರ್ವಜನಿಕ ವಲಯದಲ್ಲಿ ಆಕ್ಷೇಪಣೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಕೆಆರ್ ಎಸ್‍ ಗೆ ಸಂಬಂಧಿಸಿ ದಂತೆ ವಿಶ್ವೇಶ್ವರಯ್ಯ ಅವರು ನಿರ್ಮಿಸಿದರು ಎಂಬುದಕ್ಕೆ ಕೆಲವೆಡೆ ಸಾಕಷ್ಟು ಪರ- ವಿರೋಧ ವ್ಯಕ್ತವಾಗಿದೆ. ಚಲನಚಿತ್ರವೊಂದರ ಹಾಡಿನಲ್ಲಿ 'ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟದಿದ್ದರೆ' ಎಂಬ ಸಾಲಿದ್ದು, ಅಲ್ಲಿ ನಾಲ್ವಡಿ ಅವರ ಹೆಸರೂ ಪ್ರಸ್ತಾಪವಾಗಬೇಕಿತ್ತು ಎಂಬ ವಾದವೂ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಪುಸ್ತಕ ದಲ್ಲಿ ನಾಲ್ವಡಿ ಅವರ ಹೆಸರೇ ನಾಪತ್ತೆಯಾಗಿ ರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಈಗಿನ ಪಾಠದಿಂದ ಮಕ್ಕಳನ್ನು ದಿಕ್ಕು ನಾಲ್ವಡಿ ಅವರ ನೇತೃತ್ವದಲ್ಲೇ ಕೆಆರ್ ಎಸ್ ನಿರ್ಮಾಣವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಹೀಗಿರು ವಾಗ ಅವರನ್ನು ನಿರ್ಲಕ್ಷ್ಯಿಸಿರುವುದು ಸರಿಯಲ್ಲ ಎಂಬುದು ವಾದ.

ಈ ಬಗ್ಗೆ 'ಒನ್ ಇಂಡಿಯಾ'ದೊಂದಿಗೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿಯ ಪರಿಷ್ಕರಣೆ ಮಾಡುವವರು ಅನುಮಾನ ಇದ್ದರೆ ಇತಿಹಾಸಕಾರರಿಂದ ಮಾಹಿತಿ ಪಡೆಯಬೇಕಿತ್ತು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸರಕಾರಿ ಶಾಲೆಯ ಮುಖ್ಯಶಿಕ್ಷಕಿ. ಪಠ್ಯಪುಸ್ತಕದಲ್ಲಿ ಬಹುಶಃ ಇದು ಕಣ್ತಪ್ಪಿನಿಂದ ಅಥವಾ ಅಚಾತುರ್ಯದಿಂದ ಆಗಿರಬಹುದು. ಕೆಆರ್ ಎಸ್ ನ ನಿಜವಾದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರಿಗೆ ಗೌರವ ನೀಡಲೇಬೇಕು. ಅಣೆಕಟ್ಟೆ ನಿರ್ಮಾಣಕ್ಕೆ ಹಣ ನೀಡಿ, ಟಿಪ್ಪು ಸುಲ್ತಾನ್ ಕಂಡ ಕನಸನ್ನು ಸಾಕಾರಗೊಳಿಸಿದವರು ನಾಲ್ವಡಿ. ಸರ್.ಎಂ.ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಅಷ್ಟೇ. ಅವರ ಹೆಸರನ್ನು ಪ್ರಕಟಿಸಿ ನಾಲ್ವಡಿ ಅವರನ್ನು ಕಡೆಗಣಿಸಿರುವುದನ್ನು ಒಪ್ಪುವುದು ಸಾಧ್ಯವಿಲ್ಲ ಎನ್ನುತ್ತಾರೆ ಚಿಂತಕರಾದ ಮುಜಾಫರ್ ಅಸಾದಿ.

ಪಠ್ಯಪುಸ್ತಕಗಳು ಇತಿಹಾಸದ ಎಲ್ಲ ಮುಖಗಳನ್ನೂ ಬಿಂಬಿಸ ಬೇಕು. ಕೆಆರ್ ಎಸ್ ಅಣೆಕಟ್ಟೆ ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಣ ಪೂರೈಕೆ ಮಾಡಿದ್ದಾರೆ. ಅಲ್ಲದೆ, ಯಾವುದೇ ಸಾಮಾಜಿಕ ಕಾರ್ಯ ಒಬ್ಬರಿಂದ ಆಗುವುದಿಲ್ಲ. ಇದರಿದ ಇತಿಹಾಸಕ್ಕೆ ಅಪಚಾರ ಬಗೆದಂತಾಗಿದೆ. ನಾಲ್ವಡಿ ಅವರ ಹೆಸರೂ ಇರಬೇಕಿತ್ತು ಎನ್ನುತ್ತಾರೆ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ.

ಈಗಾಗಲೇ 'ನಾನು ಕನ್ನಂಬಾಡಿ ಕಟ್ಟೆ' ಎಂಬ ಆತ್ಮಕಥೆಯನ್ನು ಬರೆದು ವಿವಾದದ ಕೇಂದ್ರಬಿಂದುವಾಗಿದ್ದ ಪುಸ್ತಕದ ರೂವಾರಿಗಳಾದ ಪ್ರೊ.ವಿ.ನಂಜರಾಜ ಅರಸ್ ತಿಳಿಸುವುದು ಹೀಗೆ, ಮೈಸೂರು ಕೃಷ್ಣ ನದಿಗೆ ಅಣೆಕಟ್ಟೆ ಯಾರು ಕಟ್ಟಿದರು? ಹಾರಂಗಿ ಯಾರು ಕಟ್ಟಿದರು ಎಂದರೆ ಆ ಕಾಲದಲ್ಲಿ ಸರ್ಕಾರ ನಡೆಸುತ್ತಿದ್ದ ಮುಖ್ಯಮಂತ್ರಿಗಳ ಹೆಸರನ್ನು ಹೇಳುತ್ತೇವೆ. ಹೀಗಿರುವಾಗ ಕೆಆರ್ ಎಸ್ ಅಣೆಕಟ್ಟೆ ನಿರ್ಮಿಸಿದವರು ಯಾರು ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಹೇಳಬೇಕು. ಕೆಆರ್ ಎಸ್ ವಿಚಾರ ಬಂದಾಗ ನಾಲ್ವಡಿ ಅವರ ಹೆಸರನ್ನು ಪ್ರಕಟಿಸುವುದು ಅತ್ಯಗತ್ಯವಾಗಿತ್ತು ಎನ್ನುತ್ತಾರೆ.

ಒಟ್ಟಾರೆ ಮೈಸೂರು ಕೆಆರ್ ಎಸ್ ಯೋಜನೆ ರೂಪಿಸಿದವರು ಸರ್.ಎಂ. ವಿಶ್ವೇಶ್ವರಯ್ಯ ಅವರೇ ಆದರೂ ಅದಕ್ಕೆ ಹಣಕಾಸು ಒದಗಿಸಿದವರು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು. ಹಾಗಾಗಿ ಅದರಲ್ಲಿ ಇಬ್ಬರ ಪರಿಶ್ರಮವೂ ಇದೆ. ಪಠ್ಯದಲ್ಲಿ ಇಬ್ಬರ ಹೆಸರನ್ನೂ ಮುದ್ರಿಸಬೇಕಾಗಿತ್ತು. ಇದರಿಂದ ಇತಿಹಾಸವನ್ನೇ ತಿರುಚಿ ದಂತಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಈ ಪಠ್ಯವನ್ನು ಮರು ಪರಿಷ್ಕರಣೆ ಮಾಡುವ ಅವಶ್ಯಕತೆ ಇದೆ. ಇಲ್ಲಿ ಇಬ್ಬರ ಹೆಸರುಗಳನ್ನೂ ಸೇರಿಸಬೇಕು ಎಂಬುದು ಒಕ್ಕೊರಲ ಅಭಿಪ್ರಾಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The name of Nawadi Krishnaraja Wodeyar, who was incharge of the construction of the KRS (Krishnaraja Sagar) dam in the 2nd grade Kannada text of the public education department, has been dropped .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more