ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರ ದಾಹ ರೋಷನ್ ಬೇಗ್ ಮಾತಿಗೆ ಕಾರಣ

|
Google Oneindia Kannada News

ಮೈಸೂರು, ಮೇ 22: ಕೆಲವು ನಾಯಕರನ್ನು ಕಾಂಗ್ರೆಸ್ ಎಟಿಎಂನಂತೆ ಬಳಸಿಕೊಳ್ಳುತ್ತಿದೆ. ಸಚಿವರಾದ ಡಿ.ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಎಂ.ಬಿ ಪಾಟೀಲ್, ಕೆ.ಜೆ.ಜಾರ್ಜ್ ಅವರನ್ನು ಪರ್ಸನಲ್ ಎಟಿಎಂ ರೀತಿ ಬಳಸಿಕೊಳ್ಳುತ್ತಿದೆ ಎಂದು ರೋಷನ್ ಬೇಗ್ ಆರೋಪಿಸಿ, ಕೈ ಮುಖಂಡ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ ಮೈಸೂರಿನಲ್ಲಿ ಸಿದ್ದು ಪ್ರತಿಕ್ರಿಯೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ? ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ?

ರೋಷನ್ ಬೇಗ್ ಅಧಿಕಾರದ ದಾಹದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಅಧಿಕಾರದ ದಾಹ ಇರುತ್ತದೆ. ರೋಷನ್ ಬೇಗ್ ಮಂತ್ರಿಗಿರಿಗೂ ಆಸೆಪಟ್ಟಿದ್ದರು. ಜೊತೆಗೆ ಲೋಕಸಭಾ ಟಿಕೆಟ್ ಕೂಡ ಸಿಗಲಿಲ್ಲ. ಇದರಿಂದ ಆ ರೀತಿ ಮಾತನಾಡಿದ್ದಾರೆ. ಅದಕ್ಕೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು

ಇನ್ನು ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೇಳಿಕೆಗೆ, ಅವರು ನಮ್ಮ ಪಕ್ಷದವರಲ್ಲ. ಅವರು ನೀಡುವ ಹೇಳಿಕೆಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಇಡುತ್ತೇನೆ ಎಂದು ಉತ್ತರಿಸಿದ್ದಾರೆ.

Siddaramiah to discuss Disciplinary action against Roshan Bheg

ಇವಿಎಂಗೆ ಅಸಮಾಧಾನ: ಇದೇ ಸಂದರ್ಭದಲ್ಲಿ, ಇವಿಯಂ ವಿರುದ್ಧವು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಆಯ್ದ ಕಡೆ ಇವಿಎಂ ಅನ್ನು ಟ್ಯಾಂಪರ್ ಮಾಡುತ್ತಾರೆ. ಯಾವ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಹೇಗೆ ಬಿಜೆಪಿ ಗೆಲ್ಲುತ್ತದೆ? ಅವರು ಇವಿಎಂ ಅನ್ನು ಟ್ಯಾಂಪರ್ ಮಾಡುವ ಬಗ್ಗೆ ನನಗೆ ಅನುಮಾನ ಇದೆ. ಈ ಎಕ್ಸಿಟ್ ಪೋಲ್‌ಗಳನ್ನು ನಾನು ನಂಬುವುದಿಲ್ಲ. ಸಮೀಕ್ಷೆಗಳ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದರು.

English summary
Former Chief Minister Siddaramaiah states that, party leaders will take strict action against Roshan Bheg and he also doubts about the tampering of evm's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X