ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ಧರಾಮಯ್ಯ ಮಹಾನ್ ಸುಳ್ಳುಗಾರ, ವಿಶ್ವಾಸ ದ್ರೋಹದಲ್ಲಿ ನಂ.1 - ವಿಶ್ವನಾಥ್

ಸಿದ್ದರಾಮಯ್ಯ ಒರ್ವ ಮಹಾನ್ ಸುಳ್ಳುಗಾರ, ಅವರು ವಿಶ್ವಾಸ ದ್ರೋಹದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ ಎಂದು ಮಾಜಿ ಸಂಸದ, ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್. ವಿಶ್ವನಾಥ್ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 21: ಸಿದ್ದರಾಮಯ್ಯ ಒರ್ವ ಮಹಾನ್ ಸುಳ್ಳುಗಾರ, ಅವರು ವಿಶ್ವಾಸ ದ್ರೋಹದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ ಎಂದು ಮಾಜಿ ಸಂಸದ, ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್. ವಿಶ್ವನಾಥ್ ಮುಖ್ಯಮಂತ್ರಿ ವಿರುದ್ಧ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.

ಭಾನುವಾರ, ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ವಿಶ್ವನಾಥ್ ಮಾತನಾಡುತ್ತಿದ್ದರು. ಈಚೆಗೆ ಬೆಂಗಳೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ನಾನು ಕಾಂಗ್ರೆಸ್ ಸೇರಲು ಅಹ್ಮದ್ ಪಟೇಲ್ ಹೊರತುಪಡಿಸಿ ರಾಜ್ಯದ ಯಾವ ಕಾಂಗ್ರೆಸ್ ನಾಯಕರು ನೆರವು ನೀಡಲಿಲ್ಲ' ಎನ್ನುವ ಹೇಳಿಕೆಗೆ ಇದೇ ಸಂದರ್ಭದಲ್ಲಿ ಅವರು ಆಕ್ಷೇಪ ವ್ಯಕ್ತಪಡಿಸಿದರು.[ಕೆಲವೇ ದಿನಗಳಲ್ಲಿ ವಿಶ್ವನಾಥ್ ಜೆಡಿಎಸ್ ಗೆ: ಚಿಕ್ಕಮಾದು]

2005ರಲ್ಲಿ ರಾಜ್ಯ ಸಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಮಾಜಿ ಪ್ರಧಾನಿ ದೇವೇಗೌಡರು ಉಪಮುಖ್ಯಮಂತ್ರಿ ಹಾಗೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸುವುದನ್ನು ಅರಿತು ಕಂಗಾಲಾಗಿದ್ದರು. ಆಗ ಅಂದಿನ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣನವರ ಬಳಿ ತೆರಳಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿ ಸಹಾಯ ಹಸ್ತ ನೀಡುವಂತೆ ಕೋರಿದ್ದನ್ನು ಮರೆತಿದ್ದಾರೆ ಎಂದು ದೂರಿದರು.['ಹಳ್ಳಿ ಹಕ್ಕಿ' ವಿಶ್ವನಾಥ್ ಜೊತೆ ಸಿದ್ದರಾಮಯ್ಯ 'ಟೂ' ಬಿಟ್ಟಿದ್ದೇಕೆ?]

 ಉಪಕಾರ ಸ್ಮರಣೆಯಿಲ್ಲ

ಉಪಕಾರ ಸ್ಮರಣೆಯಿಲ್ಲ

ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಹೆಚ್.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್, ಆಸ್ಕರ್ ಫರ್ನಾಂಡಿಸ್ ಸೇರಿದಂತೆ ರಾಜ್ಯದ ಅನೇಕ ಹಿರಿಯ ಕಾಂಗ್ರೆಸಿಗರು ಸಹಾಯ ಹಸ್ತ ಚಾಚಿ ಪಕ್ಷಕ್ಕೆ ಬರಮಾಡಿಕೊಂಡಿದ್ದನ್ನು ಇದೀಗ ಸಿದ್ದರಾಮಯ್ಯನವರು ಮರೆತಿದ್ದಾರೆ.

ಅವರು ಉಪಕಾರ ಸ್ಮರಣೆಯೇ ಇಲ್ಲದೆ ಭಂಡತನ ಮರೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಸುಳ್ಳು ಹೇಳಿಕೆ ನೀಡುವ ಮೂಲಕ ಪಕ್ಷದ ವರಿಷ್ಠರನ್ನು ಹಾಗೂ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರನ್ನು ಅವಮಾನಿಸಿದ್ದಾರೆ ಎಂದು ದೂರಿದರು.

ಅಹಂಕಾರದಿಂದ ಮೆರೆಯುತ್ತಿದ್ದಾರೆ

ಅಹಂಕಾರದಿಂದ ಮೆರೆಯುತ್ತಿದ್ದಾರೆ

ಕನಕದಾಸರ ಅನುಯಾಯಿಯಾಗಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಗಳಲ್ಲಿ ಕನಕದಾಸರ ತತ್ವದರ್ಶನಗಳನ್ನು ಭಾಷಣದಲ್ಲಿ ವಿವರಿಸುತ್ತಾರೆ. ಆದರೆ ನಿಜ ಜೀವನದಲ್ಲಿ ನಾನು, ನಾನು ಎಂಬ ಅಹಂಕಾರ ಹಾಗೂ ಠೇಕಾರದಿಂದ ಮೆರೆಯುತ್ತಿದ್ದಾರೆ. ಕಾಂಗ್ರೆಸ್ ಸೇರಲು ಹಾಗೂ ಮುಖ್ಯಮಂತ್ರಿ ಹುದ್ದೆ ಏರಲು ನೆರವಾದ ಎಲ್ಲರನ್ನು ನಿರ್ಲಕ್ಷ್ಯಿಸುವುದರೊಂದಿಗೆ ಸಹಾಯ ಹಸ್ತ ಚಾಚಿದವರನ್ನು ಮೂಲೆ ಗುಂಪಾಗಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಓರ್ವ ಸುಳ್ಳುಗಾರ ಹಾಗೂ ಸಾಮಾನ್ಯ ಜ್ಞಾನವಿಲ್ಲದ ವ್ಯಕ್ತಿಯೆಂದು ವಿಶ್ವನಾಥ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.[ಸದ್ಯದಲ್ಲೇ ವಿಶ್ವನಾಥ್ ಜೆಡಿಎಸ್ ಗೆ: ಎಚ್ ಡಿಕೆ ಸ್ಪಷ್ಟನೆ]

 ಆತ್ಮಸಾಕ್ಷಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ

ಆತ್ಮಸಾಕ್ಷಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ

ಕಾಂಗ್ರೆಸ್ ಗೆ ಸೇರಲು ಯಾವ ನಾಯಕರು ಸಹಾಯ ಹಸ್ತ ಚಾಚಲಿಲ್ಲ ಎಂಬ ಹೇಳಿಕೆಯಿಂದ ಜನರನ್ನು ಮೆಚ್ಚಿಸಬಹುದು. ಆದರೆ ನಿಮಗೂ ಆತ್ಮಸಾಕ್ಷಿ ಇದೆ ಎಂದು ಭಾವಿಸಿರುವೆ. ಆ ಆತ್ಮಸಾಕ್ಷಿಗೆ ಸುಳ್ಳು ಹೇಳಲು ಸಾಧ್ಯವೆ? ಎಂದು ಪ್ರಶ್ನಿಸಿದರರು. ರಾಜಕಾರಣ ಎನ್ನುವುದು ನಂಬಿಕೆಯ ತಳಹದಿಯ ಮೇಲೆ ನಡೆಯುತ್ತದೆ. ಆದರೆ ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಸುಳ್ಳು ಹೇಳುವ ಮೂಲಕ ಮೌಲ್ಯಯುತ ರಾಜಕಾರಣಕ್ಕೆ ಧಕ್ಕೆ ಎಸಗುತ್ತಿದ್ದಾರೆ ಎಂದರು.

2005ರ ಜೂನ್ 19ರಂದು ಸಿದ್ದರಾಮಯ್ಯನವರ ಖಾಸಗಿ ಖಜಾನೆ ವ್ಯವಸ್ಥಾಪಕ ಕೋಣನಕುಂಟೆ ಲಕ್ಷ್ಮಣನ ಮನೆಯಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಜೆಡಿಎಸ್ ವರಿಷ್ಠರ ನಡೆಯಿಂದ ಹತಾಶರಾಗಿ ರಾಜಕಾರಣದಿಂದಲೇ ನಿವೃತ್ತರಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದೀರಿ. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಹೆಚ್.ಎಂ. ರೇವಣ್ಣ, ವಿರೂಪಾಕ್ಷಪ್ಪ, ಕಡೂರು ಕೃಷ್ಣಮೂರ್ತಿ ಸೇರಿದಂತೆ ಸಮಾಜದ ಹಲವಾರು ನಾಯಕರು ನಿಮಗೆ ಬೆಂಬಲವಾಗಿ ನಿಂತಿದ್ದನ್ನು ಮರೆತಿರುವುದು ದೊಡ್ಡ ದುರಂತ ಎಂದು ವಿಶ್ವನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ದ್ರೋಹ

ಕಾಂಗ್ರೆಸ್ ಪಕ್ಷಕ್ಕೆ ದ್ರೋಹ

ಅವತ್ತು ಕರೆದಿದ್ದ ಸಭೆಗೆ ನನಗೂ ಆಹ್ವಾನವಿತ್ತು. ಸಭೆಯ ನಿರ್ಣಯದ ನಂತರ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರ ಭೇಟಿಗೆ ಮುರ್ಹೂತ ಫಿಕ್ಸ್ ಮಾಡಿದೆವು. ನಾನು ಸೇರಿದಂತೆ ಎಸ್.ಎಂ.ಕೃಷ್ಣ, ಬಿ.ಎಲ್ ಶಂಕರ್ ಅವರುಗಳು ನಿಮಗೆ ಸಾಥ್ ನೀಡಿದ್ದನ್ನು ಮರೆತಿದ್ದೀರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

2006ರ ನಡೆದ ಉಪಚುನಾವಣೆಯಲ್ಲಿ ಇಡೀ ರಾಜ್ಯ ಕಾಂಗ್ರೆಸ್ ಪಕ್ಷವೇ ಸಿದ್ದರಾಮಯ್ಯನವರ ಗೆಲುವಿಗಾಗಿ ಬೆಂಬಲವಾಗಿ ನಿಂತಿಯತ್ತು. ಆದರೆ ಇದನ್ನು ಮರೆತಿದ್ದು ಬೆಳೆಸಿದವರನ್ನೇ ತುಳಿಯುದನ್ನು ಸಿದ್ದರಾಮಯ್ಯ ವರಸೆಯಾಗಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವಿಬ್ಬರೂ ಸಮಕಾಲೀನವಾಗಿ ರಾಜಕೀಯ ಪ್ರವೇಶಿಸಿದವರು ಪರಸ್ಪರ ವಿರುದ್ಧವಾಗಿಯೇ ನಡೆದವರು. ಜೆಡಿಎಸ್ ನೊಂದಿಗೆ ಗುರುತಿಸಿಕೊಂಡ ಸಿದ್ದರಾಮಯ್ಯನವರು ಸ್ಥಾನ ಹಾಗೂ ಅಧಿಕಾರಕ್ಕೆ ಕಂಟಕವಾಗುವುದನ್ನು ಅರಿತು ಪಕ್ಷಾಂತರಿಯಾಗಿ, ಇಂದು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯುವ ಕಾರ್ಯವನ್ನು ಮಾಡುತ್ತಿರುವುದು ಅಸಹನೀಯವೆಂದರು.

ಅಧಿಕಾರ ದಾಹ

ಅಧಿಕಾರ ದಾಹ

ಸಿಎಂ ಸಿದ್ದರಾಮಯ್ಯನವರಿಗೆ ಅಧಿಕಾರದ ದಾಹ, ಅಧಿಕಾರವೇರಿದ ಮದವೇರಿದೆ. ಸಹಾಯ ಮಾಡಿದವರನ್ನು ತುಳಿಯುವುದನ್ನೇ ಜಾಯಮಾನವನ್ನಾಗಿಸಿಕೊಂಡಿದ್ದಾರೆ. ಅವರು ಸಮಾಜವಾದಿ ಮುಖವಾಡ ಧರಿಸಿರುವ ಸ್ವಾರ್ಥ ರಾಜಕಾರಣಿ ಎಂದು ಖಾರವಾಗಿ ನುಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಿದ್ದಾಗ ನೀವು ಮಾಡಿದ್ದೆಲ್ಲವನ್ನೂ ಹಾಗೂ ಅಪರೇಷನ್ ಕಮಲದಲ್ಲಿ ನಿಮ್ಮ ಪಾತ್ರ ಏನೆಂಬುದನ್ನು ಮುಂದಿನ ದಿನಗಳಲ್ಲಿ ಜನತೆ ಮುಂದೆ ಸಾದರಪಡಿಸಲಾಗುವುದು ಎಂದು ವಿಶ್ವನಾಥ್ ತಿಳಿಸಿದರು.

ಹಿರಿಯ ಕಾಂಗ್ರೆಸ್ಸಿಗರಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಕಾದು ನೋಡಿ ಎಂದಷ್ಟೇ ಹೇಳಿದರು ವಿಶ್ವನಾಥ್.

{promotion-urls}

English summary
“Karnataka chief minister Siddaramaiah was a biggest liar, number one traitor,” said Adagur H Vishwanath in a pressmeet here in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X