ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೇಬಲ್ ಕುಟ್ಟಿ ಮಗನ ವಿರುದ್ಧ ದೂರು:ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ

|
Google Oneindia Kannada News

Recommended Video

ಟೇಬಲ್ ಕುಟ್ಟಿ ಮಗನ ವಿರುದ್ಧ ದೂರು ನೀಡಿದ ಮಹಿಳೆ | Oneindia Kannada

ಮೈಸೂರು, ಜನವರಿ 28:ನಮ್ಮ ಕ್ಷೇತ್ರದ ಎಂಎಲ್ಎ ಆದ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಕೈಗೆ ಸಿಗೋದಿಲ್ಲ. ನಮ್ಮ ಕೆಲಸ ಹೇಗೆ ಮಾಡಿಸೋದು? ಎಂದು ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಮಹಿಳೆಯೋರ್ವರು ಟೇಬಲ್ ಕುಟ್ಟಿ ಆವಾಜ್ ಹಾಕಿದ ಘಟನೆ ನಡೆದಿದೆ.

ಮುನಿಸಿಕೊಂಡ ಕುಮಾರಸ್ವಾಮಿ: ಸಂತೈಸುತ್ತೇನೆಂದ ಸಿದ್ದರಾಮಯ್ಯ!ಮುನಿಸಿಕೊಂಡ ಕುಮಾರಸ್ವಾಮಿ: ಸಂತೈಸುತ್ತೇನೆಂದ ಸಿದ್ದರಾಮಯ್ಯ!

ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ತಮ್ಮ ಊರಿನ ಸಮಸ್ಯೆ ಕುರಿತು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಮಲಾರ್ ಹಾಗೂ ಮಹಿಳೆಯೋರ್ವರು ವಿವರಿಸುತ್ತಿದ್ದರು. ಇದೇ ವೇಳೆ ಮಹಿಳೆಯೋರ್ವರು ನಿಮ್ಮ ಮಗ ಹಾಗೂ ಎಂಎಲ್ಎ ಯತೀಂದ್ರ ಊರಿಗೆ ಬರುವುದಿಲ್ಲ. ಕೈಗೂ ಸಿಗುವುದಿಲ್ಲ, ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಎದುರಿನ ಟೇಬಲ್ ಕುಟ್ಟಿದರು.

 ಎಚ್‌ಡಿಕೆ ರಾಜೀನಾಮೆ ಹೇಳಿಕೆಗೆ ಕಾರಣವಾಗಿದ್ದು 5 ನಾಯಕರು! ಎಚ್‌ಡಿಕೆ ರಾಜೀನಾಮೆ ಹೇಳಿಕೆಗೆ ಕಾರಣವಾಗಿದ್ದು 5 ನಾಯಕರು!

ಮಹಿಳೆ ವರ್ತನೆ ಕಂಡು ಕೆಂಡಮಂಡಲರಾದ ಸಿದ್ದರಾಮಯ್ಯ ಸಮಸ್ಯೆ ಹೇಳುತ್ತಿದ್ದ ಆಕೆಯ ಬಳಿಯಿಂದ ಮೈಕ್ ಕಿತ್ತುಕೊಂಡರು. ಅಲ್ಲದೇ ಮಹಿಳೆಯ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಇದರೊಟ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಹಿಳೆ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಎಲ್ಲರ ಎದುರೇ ಮಹಿಳೆ ವಿರುದ್ಧ ಸಿದ್ದರಾಮಯ್ಯನವರು ಸಿಡಿಮಿಡಿಗೊಂಡರು.

Siddaramaiah talked with loud voice with a woman at T Narasipura

ಏನಮ್ಮ ನಾವೇನೋ ದೇಶಕ್ಕೆ ಅನ್ಯಾಯ ಮಾಡಿರೋರ ಥರ ಮಾತಾಡ್ತಿದ್ದೀಯಾ? ಟೇಬಲ್ ಕುಟ್ಟಿ ಮಾತಾಡ್ತಿಯಾ? ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತಿದ್ದೀಯಾ? ಕುತ್ಕೊಳ್ಳಮ್ಮ ಸುಮ್ಮನೆ ಎಂದು ಏರು ಧ್ವನಿಯಲ್ಲೇ ಮೈಕ್ ಹಿಡಿದೇ ಮಹಿಳೆ ಹಾಗೂ ಜಮಲಾರ್ ರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

English summary
Siddaramaiah talked with loud voice with a woman at T Narasipura, Mysuru.Here's a brief report on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X