ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು 40 ಸಿಗರೇಟಿನ ಕಥೆ

|
Google Oneindia Kannada News

ಮೈಸೂರು, ಅ.1: ನಾನು ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ, ಆದರೆ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಬಂದ ನಂತರ ಕ್ರಮೇಣವಾಗಿ ಅದರಿಂದ ದೂರವಾದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಎನ್‌ಎಚ್‌ಆರ್ ಫೌಂಡೇಶನ್ ಆಯೋಜಿಸಿದ್ದ ಗರ್ಭಕೋಶ ಕ್ಯಾನ್ಸರ್ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು, ನಮಗೆ ಮಾರಣಾಂತಿಕ ಕಾಯಿಲೆಗಳು ಬರುವುದು ಅಸಹಜ ಜೀವ ಶೈಲಿಯಿಂದ ಜೊತೆಗೆ ನಮಗಂಟಿಕೊಂಡಿರುವ ದುಶ್ಚಟಗಳೂ ಇದಕ್ಕೆ ಕಾರಣವಾಗುತ್ತದೆ ಎಂದರು.

ಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ ಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ

ಒಮ್ಮೆ ದುಶ್ಚಟಗಳನ್ನು ಕಲಿತ ಮೇಲೆ ವ್ಯಕ್ತಿಗೆ ಬಿಡಲು ಸಾಧ್ಯವಾಗುವುದಿಲ್ಲ ಆದರೆ ಆತನೇ ದೃಢಮನಸ್ಸಿನಿಂದ ಬಿಟ್ಟರೆ ಖಂಡಿತವಾಗಿಯೂ ಚಟದಿಂದ ದೂರವಾಗಬಹುದು ಎಂದ ಅವರು ತಮ್ಮ ಹಳೆಯ ಕೆಲವು ವಿಚಾರಗಳನ್ನು ಹಂಚಿಕೊಂಡರು.

Siddaramaiah reveals he had smoke 40 in a day, but he hate it now

ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ! ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ!

ವಿದೇಶದಿಂದ ಸ್ನೇಹಿತರು ಬರುವಾಗ ವಿವಿಧ ಬಗೆಯ ವಿದೇಶಿ ಸಿಗರೇಟ್ ಗಳನ್ನು ತಂದಿದ್ದರು ಕೆಲವೇ ದಿನಗಳಲ್ಲಿ ಅವೆಲ್ಲವನ್ನೂ ಸೇದಿ ಮುಗಿಸಿದ್ದೆ, ಇದು ಹೀಗೆಯೇ ಮುಂದುವರೆದರೆ ಪ್ರಾಣಕ್ಕೆ ಅಪಾಯವನ್ನು ತರಬಹುದು ಎಂದು ಅರಿತು 1987ರಲ್ಲೇ ಸಿಗರೇಟ್ ಸೇದುವುದನ್ನು ನಿಲ್ಲಿಸಿದೆ ಅಲ್ಲಿಂದ ಸಿಗರೇಟ್ ವಾಸನೆ ಕೂಡ ಆಗೊಲ್ಲ ಎಂದು ಹೇಳಿದ್ದಾರೆ.

English summary
Former chief minister Siddaramaiah has revealed that he used to smoke 40 cigarettes in a day and once he left and he hate to look into the same
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X